ಜಾತಿ, ಕೋಮುವಾದಗಳಿಂದ ದೇಶಕ್ಕೆ ಗಂಡಾಂತರ: ಕೆ ನೀಲಾ

0
189

ಕಲಬುರಗಿ : ದೇಶದಲ್ಲಿ ಮತ್ತೇ ಜಾತಿ ವ್ಯವಸ್ಥೆ ಪ್ರಬಲವಾಗುತ್ತಿದ್ದು ಕೋಮುವಾದ ಎಲ್ಲೆಡೆ ಹರಡುವ ಹುನ್ನಾರಗಳು ನಡೆಯುತ್ತಿವೆ. ಇವುಗಳಿಂದ ದೇಶದ ಅಖಂಡತೆ ಮತ್ತು ಸಂವಾಧಾನಕ್ಕೆ ಗಂಡಾಂತರ ಎದುರಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಧ್ಯಕ್ಷೆ ಹಾಗೂ ಚಿಂತಕಿ ಕೆ ನೀಲಾ ಹೇಳಿದರು.

ನಗರದ ಬಸ್ ನಿಲ್ದಾಣದ ಹತ್ತಿರದ ಜಿಡಿಎ ಬಡಾವಣೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರವರ ೧೩೧ನೇ ಜಯಂತಿ ನಿಮಿತ್ತ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಾತಿ ಹಾಗೂ ಧರ್ಮಗಳ ಆಧಾರದ ಮೇಲೆ ಜನರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಬುದ್ಧ ಬಸವ ಡಾ ಅಂಬೇಡ್ಕರ ಅವರು ಕಂಡ ಬಹುತ್ವ ಭಾರತದ ಕನಸು ನನಸಾಗುತ್ತಿಲ್ಲ. ಬದಲಾಗಿ ಬಡತನ, ನಿರುದ್ಯೋಗ ಹೆಚ್ಚಳಗೊಂಡು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ಅಂಶಗಳನ್ನು ಗಾಳಿಗೆ ತೂರಿ ದೇಶದ ಆಡಳಿತ ನಡೆಯುತ್ತಿದೆ. ಈಗ ಕೇವಲ ಸಂವಿಧಾನದ ಮುಖ ಪುಟ ಮಾತ್ರ ಉಳಿದಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಕ್ಯಾಳ ಅವರು ಕಾರ್ಯಕ್ರಮ ಉದ್ಘಾಟಿಸಿ, ದೇಶದ ಸ್ವಾತಂತ್ರ್ಯ ಸಮಾನತೆ ಭಾತೃತ್ವ ಮೌಲ್ಯಗಳನ್ನು ಎತ್ತಿ ಹಿಡಿದು ನಾವು ಈ ದೇಶವನ್ನು ಕಟ್ಟಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡುವುದರ ಮೂಲಕ ಅಭಿವೃದ್ಧಿ ಕಾಣಬೇಕು. ಡಾ. ಅಂಬೇಡ್ಕರವರ ಹೋರಾಟದ ರಥವನ್ನು ಮುಂದುವರಿಸಲು ಅವರ ಕನಸುಗಳನ್ನು ಈಡೇರಿಸಬೇಕಾಗಿದೆ ಎಂದು ನುಡಿದರು.

ಬುದ್ಧ ಬಿಕ್ಕುಣಿ ಸುಮನ ಸಾನಿದ್ಯ ವಹಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿ ಎಲ್ ಮುಖ್ಯ ಅಭಿಯಂತ ಆರ್ ಡಿ ಚಂದ್ರಶೇಖರ, ನ್ಯಾಯವಾದಿ ಅರುಣಕುಮಾರ ಕಿಣ್ಣಿ, ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದಾನಿ, ಉಪನ್ಯಾಸಕ ಚಂದ್ರಕಾಂತ ಸನದಿ, ನಿವೃತ್ತ ಪ್ರಾಂಶುಪಾಲ ಐ ಎಸ್ ವಿದ್ಯಾಸಾಗರ, ಉಪ ನೊಂದಣಾಧಿಕಾರಿ ಯಶ್ವಂತ ಶಿಂಧೆ ಮತ್ತಿತರರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸತ್ಕರಿಸಲಾಯಿತು. ಸಿದ್ಧಾರ್ಥ ಚಿಮ್ಮಿದಲಾಯಿ ಅವರಿಂದ ಕ್ರಾಂತಿಗೀತೆಗಳ ಕಾರ್ಯಕ್ರಮ ನಡೆಯಿತು. ಸುನೀಲ ಚಾಂದೆ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here