ಭಾರತದಲ್ಲಿ ಶೇಕಡಾ ೩೦% ಜನ ತಂಬಾಕು ವ್ಯಸನಿಯಾಗಿದ್ದಾರೆ: ಡಾ. ನಿಗ್ಗುಡಗಿ ಕಳವಳ

0
22

ಕಲಬುರಗಿ: ಭಾರತದಲ್ಲಿ ಶೇಕಡಾ ೩೦% ಜನ ತಂಬಾಕು ವ್ಯಸನಿಯಾಗಿದ್ದಾರೆ. ಇದರಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವದು ಕಳವಳಕಾರಿ ವಿಷಯವಾಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಎಚ್.ಸಿ.ಜಿ ಆಸ್ಪತ್ರೆಯ ವಿಕೀರಣ ಗ್ರಂಥಿ ವಿಜ್ಞಾನದ ಹಿರಿಯ ಸಲಹೆಗಾರ ಡಾ. ಶಾಂತಲಿಂಗ ನಿಗ್ಗುಡಗಿ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ವಿರೋಧಿ ಕೋಶ, ಹಾಗೂ ಎಚ್ ಸಿ ಜಿ ಆಸ್ಪತ್ರೆ ಸಹಯೋಗದೊಂದಿಗೆ ಶರಣಬಸವ ವಿಶ್ವವಿದ್ಯಾಲಯದ ದೊಡಪ್ಪ ಅಪ್ಪ ಸಭಾಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಮತ್ತು ವಿಶ್ವ ತಂಬಾಕು ರಹಿತ ದಿನದ ಪ್ರತಿಜ್ಞೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಮುಖ್ಯವಾಗಿದೆ. ನಮ್ಮ ದೇಹದಲ್ಲಿರುವ ಜೀವಕೋಶಗಳು ನಿರ್ಜೀವವಾಗಿ ಕ್ಯಾನ್ಸರ್ ಬರುತ್ತದೆ. ತಂಬಾಕು ಹಾಗೂ ಧೂಮಪಾನದಿಂದ ಪುರುಷರಲ್ಲಿ ಬಾಯಿ ಮತ್ತು ಗಂಟಲು ಕ್ಯಾನ್ಸರ್ ಹೆಚ್ಚಾಗುತ್ತಿದೆ. ಸ್ರ್ತೀಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ನಿಯಮಿತ ಆಹಾರ, ಬೆಳಗಿನ ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿ ಮೈಗೂಡಿಸಿಕೊಂಡಾಗ ಕ್ಯಾನ್ಸರ್‌ನಂತಹ ಮಾರಕ ರೋಗವನ್ನು ತಡೆಗಟ್ಟಬಹುದು. ಮದ್ಯಪಾನ, ಧೂಮಪಾನ ಮತ್ತು ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ವಿಧ್ಯಾರ್ಥಿಗಳಿಗೆ ಡಾ. ಶಾಂತಲಿಂಗ ನಿಗ್ಗುಡಗಿ ಕರೆ ನೀಡಿದರು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ನಾವು ನಮ್ಮ ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಮದ್ಯಪಾನ, ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಗೊಂಡರೆ ಮಾತ್ರ ಸಾಧ್ಯ. ಪ್ರತಿಯೊಬ್ಬರು ಕನಿಷ್ಠ ಒಬ್ಬರಿಗೆ ಈ ವ್ಯಸನದಿಂದ ಪಾರು ಮಾಡಿದರೆ ಕ್ಯಾನ್ಸರ್ ಮುಕ್ತವಾದ ಸುಂದರ ದೇಶಕಟ್ಟಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮಾಜ ಸೇವಕಿಯಾದ ಆರತಿ ಧನಶ್ರೀ ಮಾತನಾಡಿ ತಂಬಾಕು ವ್ಯಸನದಿಂದ ಹೊರಬರಬೇಕೆಂದು ಇಚ್ಛಿಸುವವರು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಕೊಠಡಿ ಸಂಖ್ಯೆ ೧೦ರಲ್ಲಿ ಸುಹಾಸಿನಿಯೆಂಬ ಆಪ್ತ ಸಮಾಲೋಚಕರಿಗೆ ಭೇಟಿ ನೀಡಿ ಎಂದು ಮಾಹಿತಿ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ.ಡಿ.ಮೈತ್ರಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಎಚ್.ಸಿ.ಜಿ ಆಸ್ಪತ್ರೆಯ ಅಂಜನ್ ಪೊದ್ದಾರ್, ಸೋಮನಾಥ ರಾಯಕೋಡಿ, ವಿವಿಯ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ. ಬಸವರಾಜ ಮಠಪತಿ ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ಶಿವಕುಮಾರ ಜವಳಗಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿಧ್ಯಾರ್ಥಿನಿ ಸುಶ್ಮಿತಾ ನಿರೂಪಿಸಿದರು, ಪೂಜಾ ಬಿರಾದರ ಪ್ರಾರ್ಥಿಸಿದರು. ಸನ್ನಿಧಿ ಸ್ವಾಗತಿಸಿದರೆ, ಶಿವಾನಿ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here