ಹುಟ್ಟು ಹಬ್ಬದ ನೆಪದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ

0
86

ಶಹಾಬಾದ:ಹುಟ್ಟು ಹಬ್ಬದ ನೆಪದಲ್ಲಿ ಕೇಕನ್ನು ಕತ್ತರಿಸುವ ಬದಲು ನಾಡಿನ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಮೂಲಕ ಅವರ ಬದುಕಿಗೆ ಬೆಳಕಾಗುವ ಕೆಲಸ ನಿಂಗಪ್ಪಾ ಹುಳಗೋಳಕರ್ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ರಾವೂರ ಗ್ರಾಮದ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಹೇಳಿದರು.

ಅವರು ಮಂಗಳವಾರ ನಗರದ ಜಗದಂಬಾ ಮಂದಿರದಲ್ಲಿ ನಗರದ ಮತ್ತಿಮಡು ಅಭಿಮಾನಿಗಳ ಬಳಗ ಹಾಗೂ ಸ್ನೇಹಿತರ ಬಳಗದ ವತಿಯಿಂದ ಬಿಜೆಪಿ ಮುಖಂಡ ನಿಂಗಪ್ಪಾ.ಎಸ್.ಹುಳಗೋಳಕರ್ ಅವರ ೫೪ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನಲ್ಲಿ ಎಂ.ಬಿ.ಬಿ.ಎಸ್‌ನಲ್ಲಿ ತೇರ್ಗಡೆ ಹೊಂದಿದ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಶಾಲಾವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಕೇಕ್ ಕತ್ತರಿಸಿ ದೀಪ ಆರಿಸುವ ಸಂಸ್ಕೃತಿ ನಮ್ಮದಲ್ಲಿ. ದೀಪ ಬೆಳಗಿಸುವ ಸಂಸ್ಕೃತಿ ನಮ್ಮದು. ನಮ್ಮ ದೇಶದಲ್ಲಿ ಪ್ರತಿಭಾವಂತರಿಗೇನೋ ಕೊರತೆಯಿಲ್ಲ.ಆದರೆ ಅವರನ್ನು ಪ್ರೋತ್ಸಾಹಿಸುವವರ, ಬಳಸಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಿದೆ.ಆದ್ದರಿಂದ ನಮ್ಮ ದೇಶದ ಪ್ರತಿಭಾವಂತರು ಬೇರೆ ದೇಶಕ್ಕೆ ಪಲಾಯನವಾಗುತ್ತಿದ್ದಾರೆ.ಇಂದು ವಿದೇಶಗಳಲ್ಲಿ ಹೆಚ್ಚು ಪ್ರತಿಭಾವಂತರು ಭಾರತೀಯರೇ ಆಗಿದ್ದಾರೆ.ಇಂದು ಸತ್ತಿರೋ ವ್ಯಕ್ತಿಗಳನ್ನು ನೆನೆಸುವುದಕ್ಕಿಂತ ಕಣ್ಮುಂದೆ ಇರುವ ವ್ಯಕ್ತಿಗಳನ್ನು ನೆನಯುವುದು ಮುಖ್ಯ.

ಸತ್ತ ವ್ಯಕ್ತಿಯ ಹೆಗಲ ಹೊರುವುದಕ್ಕಿಂತ ಕಷ್ಟದಲ್ಲಿರುವ ವ್ಯಕ್ತಿಯ ಹೆಗಲು ಹೊರಲು ಮುಂದಾಗುವುದೇ ನಿಜವಾದ ಮಾನವೀಯತೆ.ಇದುವೇ ಭಾರತೀಯ ಸಂಸ್ಕೃತಿ. ಆದ್ದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವತ್ತ ಪಾಲಕರು ಮುಂದಾಗಬೇಕು.ಯಾವ ಬೀಜ ಬಿತ್ತುತ್ತೆವೆ. ಅದೇ ಫಲವನ್ನು ನಿರೀಕ್ಷಿಸಲು ಸಾಧ್ಯ.ಉತ್ತಮ ಸಂಸ್ಕಾರ ಸಮಾಜವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ದುಡ್ಡು, ಬ್ಯಾಕ್ ಬ್ಯಾಲೆನ್ಸ್, ಕಾರು ಮೋಟಾರು,ಹೊ-ಮನೆ ಶಾಶ್ವತವಲ್ಲಿ ದೀನ ದುರ್ಬಲರ ಸೇವೆ ಮಾಡುವುದೇ ನಿಜವಾದ ಸೇವೆ.ಅಂತಹ ಸೇವೆಯನ್ನು ನಿಂಗಪ್ಪಾ ಹೂಲಗೋಳಕರ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸಿದರು. ಮಾಜಿ ಸಪ್ತಖಾತೆ ಸಚಿವ ಮತ್ತು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿದರು. ತೊನಸನಹಳ್ಳಿ(ಎಸ್) ಗ್ರಾಮದ ಮಲ್ಲಣಪ್ಪ ಸ್ವಾಮಿಗಳು ಹಾಗೂ ರಾವೂರಿನ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ,ತಹಸೀಲ್ದಾರ ಸುರೇಶ ವರ್ಮಾ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬಿಜೆಪಿ ಮುಖಂಡ ಗೋರಖನಾಥ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಉದ್ದಿಮೆದಾರ ಮಹಾದೇವ ಬಂದಳ್ಳಿ,ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್, ಭೌದ್ಧ ಮಹಾಸಭಾದ ಅಧ್ಯಕ್ಷ ಸುರೇಶ ಮೆಂಗನ, ಬಸವರಾಜ ಮತ್ತಿಮಡು ಅಭಿಮಾನಿ ಬಳಗದ ಅಧ್ಯಕ್ಷ ನಿಂಗಪ್ಪಾ ಹುಳಗೋಳಕರ್ ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಎಸ್.ಎಸ್.ಎಲ್.ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭೀಮಯ್ಯ ಗುತ್ತೆದಾರ,ಶ್ರೀಧರ ಜೋಷಿ, ರಾಜೇಶ ಯನಗುಂಟಿಕರ್, ಶರಣು ಜೋಗೂರ, ಶರಣಬಸಪ್ಪ ತುಂಗಳ,ಶರಣು ಪಗಲಾಪೂರ,ಕಾಶಣ್ಣ ಚನ್ನೂರ್, ಪರಮಾನಂದ ಯಲಗೋಡಕರ್, ಶಿವಕುಮಾರ ತಳವಾರ.ಪ್ರಭು ಸೀಬಾ,ಶಿವಾನಂದ ಪಾಟೀಲ ಇತರರು ಇದ್ದರು.

ರಾಮನಂಥ ವಿನಮ್ರ ಭಾವ, ಸರಳ ವ್ಯಕ್ತಿತ್ವ ಹೊಂದಿರುವ ಹಾಗೂ ಸಮಾಜವನ್ನು ಮುನ್ನಡೆಸುಕೊಂಡು ಹೋಗುತ್ತಿರುವ ನಿಂಗಪ್ಪ ಹುಳಗೋಳಕರ್ ಅವರಿಗೆ ಇನ್ನೂವರೆಗೆ ಯಾವ ಸ್ಥಾನಮಾನಗಳು ದೊರಕಿಲ್ಲ. ಪಕ್ಷದಲ್ಲಿ ಅವರನ್ನು ಒಂದು ತಿಂಗಳಲ್ಲಿ ದೊಡ್ಡ ಹುದ್ದೆಯನ್ನು ಕೊಟ್ಟೆ ಕೊಡಿಸುತ್ತೆನೆ. ಕೊಟ್ಟ ಮಾತು ತಪ್ಪುವುದಿಲ್ಲ ಎಂದು ಮಲ್ಲಣಪ್ಪ ಸ್ವಾಮೀಜಿಗಳ ಮುಂದೆ ವಚನ ನೀಡುತ್ತೆನೆ. -ಬಾಬುರಾವ ಚಿಂಚನಸೂರ ಮಾಜಿ ಸಚಿವ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here