ಆಳಂದ: ಗ್ರಾಮ ಪಂಚಾಯತಗಳ ಮೂಲಕ ಕಾಯ್ದೆ ರೂಪದಲ್ಲಿ ಜಾರಿಗೆ ತರಲಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯು ಕಾಮಗಾರಿಯೂ ಹಲವು ಇಲಾಖೆಗೆ ಅಧಿಕಾರ ವೀಕೇಂದ್ರೀಕರಣದಿಂದಾಗಿ ನಿರೀಕ್ಷಿತ ಕಾಮಗಾರಿಯ ನಡೆಯದೆ ಇದರ ಉದ್ದೇಶವನ್ನೇ ಬುಡಮೇಲಾಗತೊಡಗಿದೆ.
ಗ್ರಾಮ ಪಂಚಾಯತಗಳಿಗೆ ವರ್ಷಕ್ಕೆ ಕಾಮಗಾರಿ ಕ್ರಿಯಾ ಯೋಜನೆಯಂತೆ ಹಣ ಖರ್ಚು ಮಾಡಲು ಅನುಮತಿ ನೀಡಲಾಗುತ್ತಿದೆ. ಪಂಚಾಯತಗಳ ಮೂಲಕ ಕೆರೆಗಳು ಮತ್ತು ನಾಲಾ ಹೂಳೆತ್ತುವುದು ಬಿಟ್ಟರೆ, ರೈತರ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೂಂಡ, ಅರಣ್ಯಕರಣ, ರೇಷ್ಮೆ, ತೋಟಗಾರಿಕೆ ಉತ್ತೇಜಿಸುವಂತ ಕಾಮಗಾರಿಗಳನ್ನು ಕೈಗೊಳ್ಳಬೇಕಿರುವ ಸಂಬಂಧಿತ ಅಧಿಕಾರಿಗಳು ನಿರಾಸಕ್ತಿಯಿಂದಲೇ ನಿರೀಕ್ಷಿತ ಕಾಮಗಾರಿ ನಡೆಯದೆ ಒಂದಡೆ ರೈತರ ಅಲೆದಾಟವು ತಪ್ಪುತ್ತಿಲ್ಲ. ಮತ್ತೊಂದಡೆ ಸರ್ಕಾರದ ಹಣವು ಕಾಮಗಾರಿ ಹೆಸರಿನಲ್ಲಿ ಖರ್ಚಾಗುವುದು ನಿಂತ್ತಿಲ್ಲ ಎನ್ನಲಾಗಿದೆ.
ಕಳೆದ ಹಲವು ವರ್ಷಗಳಿಂದಲೂ ಈ ಕಾಯ್ದೆ ರೂಪದಲ್ಲಿ ಉದ್ಯೋಗ ಖಾತ್ರಿ ಜಾರಿಯಲ್ಲಿದೆ. ಆದರೆ ವಾಸ್ತವ್ಯದಲ್ಲಿ ರೈತರ ಹೊರದಲ್ಲಿ ಆದ ಕಾಮಗಾರಿ ಗಮನಿಸಿದರೆ ಬೇರಳೆಣಿಕೆಯಷ್ಟೇ ಎನ್ನುವಂತ್ತಾಗಿದೆ. ಪ್ರತಿವರ್ಷ ಈ ಕಾಮಗಾರಿಯಲ್ಲಿ ಬೆಟ್ಟ ಅಗೆದು ಇಲ್ಲಿ ಹುಡುಕಿದಂತೆ ಕೋಟ್ಯಂತರ ಹಣ ಖರ್ಚಾಗುತ್ತಿದೆ. ವಾಸ್ತವ್ಯದಲ್ಲಿ ನೆಲ, ಜಲದ ಕಾಮಗಾರಿಗೆ ಹಿಂದೇಟಾಗಿದದೆ ಎಂದ ರೈತ ಸಂಘಟನೆಗಳ ಆರೋಪಿಸುತ್ತಲೆ ಬಂದಿವೆ.
ಗುಡ್ಡ ಅಗೆದು ಇಲ್ಲಿ ಹುಡಕಿದ ಹಾಗೇ: ಇಡೀ ಬೇಸಿಗೆ ಅವಧಿಯಲ್ಲಿ ಏನನ್ನೂ ಮಾಡದೆ ಈಗ ಮುಂಗಾರು ಹೊಸ್ತಲಿನಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೃಷಿ ಹೂಂಡಾ ನಿರ್ಮಾಣಕ್ಕೆ ಅನುಮತಿ ಹಾಗೂ ಕೆಲವರು ಕೈಗೊಂಡ ಕಾಮಗಾರಿಯ ಹಣ ಪಡೆಯಲು ರೈತರು ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗೆ ತಂಡೊಪ ತಂಡವಾಗಿ ಅಲೆದಾಡುತ್ತಿರುವುದು ಬುಧವಾರ ಕಂಡುಬಂದಿದೆ.
ಇದಕ್ಕೆ ಸಂಬಂಧಿತ ಶಾಖೆಯ ಅಧಿಕಾರಿ ಬಿ.ಎನ್. ಬಿರಾದಾರ ಎಂಬುವರು ರೈತರಿಗೆ ಸಕಾಲಕ್ಕೆ ಮಾಡದೆ ಎನ್‌ಎಂಆರ್, ವೇತನ ಪಾವತಿಗೆ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಕಚೇರಿಗೆ ಆಗಮಿಸಿದ್ದ ಹಲವು ರೈತ ಫಲಾನುಭವಿಗಳ ಪೈಕಿ ಮಾದನಹಿಪ್ಪರಗಾದ ರೈತನೋರ್ವ ಅಳಲುತೋಡಿಕೊಂಡಿದ್ದು ಇದರರ್ಥ ಒಳಮರ್ಮ ಎನಿದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಕಾಮಗಾರಿ ವೀಕೇಂದ್ರೀಕರಣ: ಗ್ರಾಪಂನ ಕ್ರಿಯಾ ಯೋಜನೆಯಂತೆ ಉದ್ಯೋಗ ಖಾತ್ರಿಯ ಕೈಗೊಳ್ಳಬೇಕಾದ ರೈತರ ಹೊಲಗಳಲ್ಲಿ ಕೃಷಿ ಹೂಂಡಾ, ಬದು ನಿರ್ಮಾಣ, ತೋಟಗಾರಿಕೆ ಉತ್ತೇಜನ ಕಾಮಗಾರಿ, ರೇಷ್ಮೆ ಬೆಳೆ ಉತ್ಪಾದನೆ, ಅರಣ್ಯೀಕರಣದ ಅಡಿಯಲ್ಲಿ ತೆಗ್ಗು ತೋಡುವುದು ಸಸಿ ನೆಡುವುದು ಹೀಗೆ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ವೀಕೇಂದ್ರೀಕರಣಗೊಳಿಸಲಾಗಿದೆ. ಆದರೆ ವಿಕೇಂದ್ರೀಕೃತ ಕಾಮಗಾರಿಗೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಅನುಷ್ಠಾನದ ಹೊಣೆಹೂರಿಸಿದ್ದಾಗಲೂ ಕಾಮಗಾರಿಯ ಅನುಷ್ಠಾನದ ಹೊಣೆಹುತ್ತವರು ನಾಮಕೆವಾಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಅಸಕ್ತ ರೈತರನ್ನು ಹೆಚ್ಚಿನ ರೀತಿಯಲ್ಲಿ ಉತ್ತೇಜಿಸಿ ಕಾಮಗಾರಿ ಕೈಗೊಂಡು ಅನುಕೂಲ ಒದಗಿಸಿದೆ ಇರುವುದು ನಿತ್ಯ ಕಚೇರಿಗಳಿಗೆ ತಂಡೋಪ ತಂಡವಾಗಿ ರೈತರು ಅಲೆಯುದೇ ಸಾಕ್ಷೀಕರಿಸುತ್ತದೆ.
ಗ್ರಾಪಂನಿಂದ ರೈತನೋರ್ವ ಫಾರಂ ನಂ೬ ಪಡೆದು ಕಾಮಗಾರಿಯ ಆದೇಶ ಪಡೆಯಲು ಸಂಬಂಧೀತ ಇಲಾಖೆಯ ಬಾಗಿಲುತಟ್ಟಿ ಅಧಿಕಾರಿಗಳನ್ನು ಹುಡಕಲು ಮತ್ತು ಕಾಮಗಾರಿಯ ಆದೇಶ ಪಡೆಯಲು ಕಚೇರಿಗಳಿಗೆ ರೈತರು ಹಲವು ಬಾರಿ ಎಡತಾಕಿ ಹಾಕುವುದರಲ್ಲೇ ಸುಸ್ತಾಗಿ ಹೋಗುತಾರೆ. ಇನ್ನೂ ಕೆಲವರು ಬೇಸೋತ್ತು ಕೈಬಿಡವರೇ ಹೆಚ್ಚು. ಗ್ರಾಪಂ ಪಿಡಿಒ ಅವರ ಮೂಲಕ ಸಂಬಂಧಿತ ಕಾಮಗಾರಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಫಾರಂನ ೬ನ್ನು ಕೂಲಿಕಾರ್ಮಿಕರ ಪಟ್ಟಿಯೊಂದಿಗೆ ಕಾಮಗಾರಿಯ (ಎನ್‌ಎಂಆರ್) ನೀಡುತ್ತಾರೆ. ಇದನ್ನು ಪಡೆದು ಕಾಮಗಾರಿಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳ ಮೋರೆ ಹೋಗಬೇಕು ಅವರ ನಾಳಾ ಬಾ ನಾಡಿದ್ದು ಬಾ ಹೀಗೆ ಸುತ್ತಾಡಿಸತೊಡಗಿದ್ದಾರೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ.
ಕೃಷಿ ಹೂಂಡ, ಬದು ನಿರ್ಮಾಣ: ಉದ್ಯೋ ಖಾತ್ರಿ ಅಡಿಯಲ್ಲಿ ರೈತರ ಹೊಲದಲ್ಲಿ ಕೃಷಿ ಹೂಂಡ, ಬದು ನಿರ್ಮಾಣ ಕಾಮಗಾರಿಗೆ ಕೃಷಿ ಇಲಾಖೆಯ ಅಧಿಕಾರಿಗಳ ಲಾಗಿನಲ್ಲೇ ಕಾಮಗಾರಿಯ ವಿವರ ದಾಖಲಿಸಿ ಕೂಲಿ ಕಾರ್ಮಿಕರ ಹಾಜರಾತಿ ಪಟ್ಟಿ (ಎನ್‌ಎಂಆರ್) ಕಾಮಗಾರಿ ನಡೆಯುತ್ತಿದೆ. ಈಗ ಹೊಸದಾಗಿ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ ಸಿಸ್ಟ್ಂ) ಬಂದಿದೆ ಇದು ಕೆಲಸದಲ್ಲಿ ತೊಡಗಿದ ಕಾರ್ಮಿಕರ ಪಟ್ಟಿ ಬರುತ್ತದೆ. ಇದರಲ್ಲಿ ಕೆಲಸಕ್ಕೆ ಬಂದವರ ಹಾಜರಾತಿ ದಾಖಲಿಸಲಾಗುತ್ತಿದೆ. ಈ ಹಾಜರಾತಿ ಪ್ರಕ್ರಿಯೆ ದಿನಕ್ಕೆ ೨ ಬಾರಿ ನಡೆಯುತ್ತಿದೆ. ಹೀಗೆ ಏಳು ದಿನವಾದಮೇಲೆ ಕಂಪೂಟರ್‌ನಲ್ಲಿ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳ ಲಾಗಿನಗೆ ಎಂಐಎಸ್ ಕೈಗೊಳ್ಳಲಾಗುತ್ತಿದೆ. ಇದಾದ ಬಳಿಕ ಇದೇ ಲಾಗಿನಿಂದಲೇ ವೇತನ ಪಾವತಿ ಕೈಗೊಳ್ಳಲಾಗುದೆ.
ಅರ್ಜಿ ಸಲ್ಲಿಸಿ ಪ್ರತಿಹಂತದಲ್ಲೂ ಅರ್ಜಿದಾರ ಹಳ್ಳಿಯಿಂದ ಪಟ್ಟಣದ ಕಚೇರಿಗೆ ಅಲೆಯಂತಾಗಿರುವುದು ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚು ಎಂಬಂತೆ ಕಾಮಗಾರಿಯ ಅನುಕೂಲಕ್ಕಿಂತ ಮಧ್ಯದಲ್ಲಿ ಓಡಾಟದ ಖರ್ಚು ಸಮಯ ವ್ಯರ್ಥ ಹೆಚ್ಚಾಗತೊಡಗಿದೆ ಎಂದು ರೈತ ಫಲಾನುಭವಿಗಳು ಹೇಳುತ್ತಾರೆ. ರೀತಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಜಿಪಂ ನೀರು ಸರಬರಾಜು ಹಾಗೂ ಇಂಜಿನಿಯರಿಂಗ ವಿಭಾಗ ಇಲಾಖೆ ಅಧಿಕಾರಿಗಳ ಉದ್ಯೋಗ ಖಾತ್ರಿ ಕಾಮಗಾರಿ ವಾಸ್ತವ್ಯವನ್ನೇ ಪ್ರಶ್ನಿಸುವಂತೆ ಮಾಡತೊಡಗಿದೆ. ಈ ನಡುವೆ ಆದರೆ ವಾಸ್ಯವ್ಯದಲ್ಲಿ ಅರ್ಹರು ಮತ್ತು ಕಾಮಗಾರಿ ಕೈಗೊಳ್ಳಬೇಕು ಎಂಬ ರೈತರಿಗೆ ಇನ್ನೂ ಇದರ ಲಾಭವೇ ತಟ್ಟದೆ ಮಧ್ಯವರ್ತಿಗಳು ರಾಜಕೀಯ ಕೈಗೊಂಭೆಗಳ ಮತ್ತು ಅಧಿಕಾರಿಗಳ ಬಾಲಬಡಕರನ್ನೇ ಆಯ್ಕೆಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ.
ಖಾತ್ರಿ ಕಾಮಗಾರಿಯ ಇಲಾಖೆಗಳಿಗೆ ಅಧಿಕಾರ ವೀಕೇಂದ್ರೀಕರಣ ಮಾಡಲಾಗಿದೆ. ಆದರೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ಇದರ ಉದ್ದೇಶವೇ ಬುಡಮೇಲಾಗುತ್ತಿದೆ. ಇನ್ನೂ ಮುಂದೆಯಾದರು ಸಂಬಂಧಿತರ ಗಮನ ಹರಿಸಿ ನಿಜವಾದ ಅರ್ಥದಲ್ಲಿ ನೆಲ, ಜಲ ಕೃಷಿ ಕೆಲಸಕ್ಕೆ ಕಾಯ್ದೆ ಬಳಕೆಯಾಗುವುದೇ ಎಂಬುದು ಎದುರು ನೊಡುವಂತೆ ಮಾಡಿದೆ.
ಶಿಸ್ತಿನ ಕ್ರಮ: ಕೃಷಿ ಹೂಂಡ ಸೇರಿ ಯಾವುದೇ ಕಾಮಗಾರಿ ಪ್ಲಾನ್ ಮಾಡಿ ಕಾಮಗಾರಿ ಕೈಗೊಳ್ಳಬೇಕು. ಗ್ರಾಪಂ ಸದಸ್ಯರು ಸಹ ಪ್ಲಾನ್ ಮಾಡಬೇಕು. ವಹಿಸಿದ್ದ ಕಾಮಗಾರಿ ಸಂಬಂಧಿತ ಇಲಾಖೆಯ ಅಧಿಕಾರಿಗಳು ಅನುಷ್ಠಾನಕ್ಕೆ ಮುಂದಾಗಬೇಕು. ಅನುದಾನ ಕೊರತೆ ಇದ್ದರೆ ಹೆಚ್ಚುವರಿ ಕ್ರಿಯಾ ಯೋಜನೆ ಸಲ್ಲಿಸಿದರೆ ಅನುದಾನ ಒದಗಿಸಲಾಗುತ್ತದೆ. ಅಧಿಕಾರಿಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುವಂತ್ತಿಲ್ಲ. ಪಾರದರ್ಶಕ ಮತ್ತು ವೈಜ್ಞಾನಿಕ ಕಾಮಗಾರಿಗೆ ಜವಾಬ್ದಾರಿ ಹೊತ್ತು ಕೆಲಸಮಾಡಬೇಕು. ಇಲ್ಲವಾದಲ್ಲಿ ಮೇಲಾಧಿಕಾರಿಗಳಿಂದ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ. ಡಾ. ಸಂಜಯ ರೆಡ್ಡಿ ತಾಪಂ ಇಒ ಆಳಂದ,