ಕಲಬುರಗಿ: ಡಾ ಬಾಬಾಸಾಹೇಬ ಆಶಯದಂತೆ ನಮ್ಮ ಸಮಾಜದಲ್ಲಿ ಪ್ರಬುದ್ದತೆ ಹಾಗೂ ಪ್ರಜ್ಞೆ ಇನ್ನೂ ಬಂದಿಲ್ಲ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ವಿಷಾದಿಸಿದರು.
ಅಫಜಲ್ಪುರ ತಾಲೂಕಿನ ಹೆರೂರು ( ಬಿ) ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಡಾ ಬಾಬಾಸಾಹೇಬ ಅಂಬೇಡ್ಕರ ಅವರ 131 ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವ್ಯಕ್ತಿ ಪೂಜೆ ಯನ್ನು ಬಾಬಾಸಾಹೇಬರು ವಿರೋಧಿಸಿದ್ದರು. ದುರಂತ ಎಂದರೆ ರಾಜಕಾರಣಿಗಳಿಗೆ ದೊಡ್ಡ ದೊಡ್ಡ ಹಾರ ಹಾಕಿ ಸನ್ಮಾನ ಮಾಡುತ್ತೀರಿ. ಇದು ಬಾಬಾಸಾಹೇಬರ ತತ್ವಕ್ಕೆ ವಿರುದ್ದವಾದದರು ಎಂದರು.
ನಿಮ್ಮ ಸೇವೆ ಮಾಡುವುದಕ್ಕೆ ನನಗೆ ನೀವು ವಿಧಾನಸೌಧಕ್ಕೆ ಕಳಿಸಿದ್ದೀರಿ. ಶಾಲೆ, ಕಾಲೇಜು, ರಸ್ತೆ, ಚರಂಡಿ ನಿರ್ಮಾಣ ಮಾಡುವುದು ನನ್ನ ಕರ್ತವ್ಯ ನಾನು ಕೆಲಸ ಮಾಡಿದರೆ ನೀವು ಯಾಕೆ ಹಾರ ತುರಾಯಿ ಹಾಕಿ ಅಭಿಮಾನ ಮೆರೆಯುತ್ತೀರಿ ?ಎಂದು ಪ್ರಶ್ನಿಸಿದರು.
ಅಂಬೇಡ್ಕರ ಅವರನ್ನ ಒಂದು ಜಾತಿಗೆ ಸೀಮಿತಿಗೊಳಿಸುವ ಯತ್ವವನ್ನು ವಿರೋಧಿಸಿದ ಖರ್ಗೆ ಅವರು ಬೇರೆಯವರು ಅಂಬೇಡ್ಕರ ಅವರನ್ನು ಓದಲು ತಯಾರಿಲ್ಲ ಅಥವ ನಾವು ಅವರನ್ನ ಬಿಟ್ಟಿಕೊಡುತ್ತಿಲ್ಲ. ಈ ದೇಶದ ನಾಗರಿಕರು ಸ್ವಾಭಿಮಾನದಿಂದ ತಲೆ ಎತ್ತಿ ಜೀವನ ನಡೆಸಲು ಸಂವಿಧಾನ ರಚಿಸಿದ ಮಹಾಪುರಷನನ್ನ ಒಂದೇ ಜಾತಿಗೆ ಸೀಮಿತಿಗೊಳಿಸಿದ್ದು ಸರಿಯಲ್ಲ ಎಂದರು.
ಲಂಡನ್ ಸ್ಕೂಲ ಆಫ್ ಎಕಾನಮಿಕ್ಸ್ ಮಾದರಿಯ ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ಕಾಂಗ್ರೆಸ್ ಶ್ರಮವಿದೆ. ಆದರೆ ಇಂದು ಮೋದಿ ಅದನ್ನು ಉದ್ಘಾಟಿಸಲು ಬೆಂಗಳೂರಿಗೆ ಬಂದಿದ್ದಾರೆ. ” ನಮ್ಮ ಕೂಸಿಗೆ ಅವರು ಹೆಸರಿಡಲು ಬಂದಿದ್ದಾರೆ ” ಎಂದು ವ್ಯಂಗ್ಯವಾಡಿದರು.
ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಮುಂಬರುವ ದಿನಗಳಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ರಾಜಕೀಯದಲ್ಲಿ ಉನ್ನತ ಸ್ಥಾನಗಳಿಸಲಿದ್ದಾರೆ ಎಂದರು. ಡಾ ಬಾಬಾಸಾಹೇಬರ ಕನಸನ್ನು ನನಸು ಮಾಡುವ ಏಕೈಕ ವ್ಯಕ್ತಿ ಪ್ರಿಯಾಂಕ್, ಅವರು ಬಸವಣ್ಣನ ರೀತಿ ಕ್ರಾಂತಿಕಾರಿಯಾಗಿ ಬಂದಿದ್ದಾರೆ ಎಂದು ಗುಣಗಾನ ಮಾಡಿದರು.
ವೇದಿಕೆಯ ಮೇಲೆ ಶಾಸಕರಾದ ಎಂ.ವೈ.ಪಾಟೀಲ್, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ, ಜೆ.ಎ.ಕೊರಬು,ಸಿದ್ಧಾರ್ಥ, ಶಿವಾನಂದ ಪ್ಯಾಟಿ, ಸುನೀಲ ದೊಡ್ಡಮನಿ ಸೇರಿದಂತೆ ಮತ್ತಿತರಿದ್ದರು.