ಸಂಸದ ಜಾಧವ್ ವಿರುದ್ಧ ಖರ್ಗೆ ಸುಳ್ಳು ಆರೋಪ: BJP ಮುಖಂಡರ ಖಂಡನೆ

0
66

ಕಲಬುರಗಿ: ಸಂಸದ ಡಾ. ಉಮೇಶ್ ಜಾಧವ್ ದಲಿತ ದಲಿತರಲ್ಲಿಯೆ ಜಗಳ ಹಚ್ಚುವ ಕೆಲಸ ಮತ್ತು ರೌಡಿ ಶೀಟರಗಳಿಗೆ ಬೆಂಬಲ ನೀಡುತ್ತಿದ್ದಾರೆಂದು ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದ್ದು, ಇದಕ್ಕೆ ದಲಿತರು ಅಲ್ಪಸಂಖ್ಯಾತರು ಕಿವಿಗುಡಬಾರದೆಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಹಿರಿಯ ಮುಖಂಡರು ಮನವಿ ಮಾಡಿದ್ದಾರೆ.

ಸಂಸದ ಡಾ. ಉಮೇಶ ಜಾಧವ ಅವರು ಜನಪರ ಕೆಲಸಗಳನ್ನು ಸಹಿಸಲು ಸಾಧ್ಯವಾಗದಿದಕ್ಕೆ ಕೆಲವರು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ಬೆಳೆ ಬೆಯಿಸಿಕೊಳ್ಳು ಯತ್ನಿಸುತ್ತಿದ್ದಾರೆ ಎಂದು ಕೂಲಿ ಸಮಾಜ ರಾಜ್ಯ ಕಾರ್ಯದರ್ಶಿ ಲಕ್ಷ್ಮಣರಾವ್ ಆವಂಟಿ ಮತ್ತು ಅಲ್ಪಸಂಖ್ಯಾತರ ಘಟಕದ ಹಿರಿಯ ಮುಖಂಡ ಕೆ.ಎಂ ಬಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಜಿಲ್ಲೆಯಲ್ಲಿ ದಿನ ಬೆಳಗಾದರೆ ಹಳ್ಳಿ ಹಳ್ಳಿಗೆ ಸಂಚರಿಸಿ ಜನತೆಯ ಮಧ್ಯೆದಲ್ಲಿದ್ದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಸರಕಾರದಿಂದ ಬರುವ ಸವಲತ್ತುಗಳು ಜನ ಸಾಮಾನ್ಯರಿಗೆ ಮುಟ್ಟಿಸುತ್ತಿರುವುದು ಮತ್ತು ಇತ್ತಿಚ್ಚಿಗೆ ದಲಿತರು ಮತ್ತು ಅಲ್ಪಸಂಖ್ಯಾತರು ಸಂಸದ ಜಾಧವ್ ಅವರ ಬೆಂಬಲಕ್ಕೆ ನಿಂತಿದ್ದು, ಸಹಿಸಿಕೊಳ್ಳಲಾಗದೆ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ.

ಚಿತಾಪೂರ ತಾಲೂಕಿನ ಸನ್ನತಿಯ ವಿಶ್ವ ಪ್ರಸಿದ್ದ ಬೌದ್ಧ ತೋಪಗಳು ಪುನರುತ್ತಾನ ಮಾಡಲು 355 ಕೋಟಿ ರೂಪಕಯಿಗಳೂ ಕೇಂದ್ರ ಸರಕಾರದಿಂದ ಮಂಜೂರುಗೊಳಿಸಿ ಇಲಾಖೆ ವತಿಯಿಂದ ಕೆಲಸ ಪ್ರಾರಂಭಸಿದ್ದು, ಕೆಲಸ ವೀಕ್ಷಿಸಲು ಸಂಸದರು ಸ್ಥಳಕ್ಕೆ ಹೋಗಿದ್ದರು. ಇದಕ್ಕೂ ರಾಜಕೀಯ ಬಣ್ಣ ಬೇರೆಯಿಸಿ ಸ್ಥಳೀಯ ಶಾಸಕರನ್ನು ಅಡಿಗಲ್ಲು ಸಮರಾಂಭಕ್ಕೆ ಕರಿಸಿಲ್ಲ ಎಂಬುವುದು ಸರಿಯಲ್ಲ. ಚಿತಾಪೂರ ಕ್ಷೇತ್ರವು ಸಂಸದ ಡಾ. ಉಮೇಶ ಜಾಧವ ರವರ ವ್ಯಾಪ್ತಿಗೆ ಬರುವ ಕ್ಷೇತ್ರವಾಗಿದ್ದರು, ಹೆಚ್ಚು ಕೆಲಸವನ್ನು  ಜಾಧವ್ ಮಾಡುತ್ತಿದ್ದಾರೆ.

ಉಮೇಶ ಜಾದವ ರವರು ದೇಶದ ಉತ್ತಮ ಸಂಸದರಲ್ಲಿ ಓಬ್ಬರಾಗಿರುವುದರಿಂದ ಹಗಲಿರುಳು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಮತ್ತು ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗುವ ಎಕೈಕ ಸಂಸದರಾಗಿದ್ದಾರೆ. ಇಂತಹ ನಿಷ್ಠಾವಂತಹ ಸಂಸದರ ವಿರುದ್ದ ಹೇಳಿಕೆ ಆತ್ಮ ಸಾಕ್ಷಿಯಾಗಿ ಹೇಳಿಕೆ ಕೊಡಬೇಕು. ರಾಜಕೀಯವಾಗಿ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಖರ್ಗೆ ಅವರ ವಿರುದ್ಧ ಪರೋಕ್ಷವಾಗಿ ಮಾಜಿ ವಕೀಲ ಸಂಘದ ಅಧ್ಯಕ್ಷ ಶ್ರೀಮಂತ ಬಿ ಕಟ್ಟಿಮನಿ, ಎಸಿ ಮೋರ್ಚಾದ ಅಧ್ಯಕ್ಷ ಮಹೇಂದ್ರ ಬೆಡಸೂರ್, ಸದ್ದಾಮ್ ವಜೀರಗಾಂವ, ಆರ್.ಗಣಪತರಾವ್, ಆಷಾರಲೋಡ್ಡನೋರ್, ನಿಲಕಂಠ್ ಪಾಟೀಲ್, ರಮೇಶ್ ಆರ್ ದುತ್ತರಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here