ಚಿತ್ತಾಪುರ:ಪ್ರತಿಭೆಗಳನ್ನು ಪ್ರೋತ್ಸಾಹ ನೀಡುವ ಉದ್ದೇಶದಿಂದ ದಿನಾಂಕ:೧೫ ಜುಲೈ ರಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮಕ್ಕಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ್ ತಿಳಿಸಿದ್ದಾರೆ.
೨೦೨೧-೨೨ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ.ಕನ್ನಡ ಮಾಧ್ಯಮದಲ್ಲಿ ೧೨೫ ಕ್ಕೆ ೧೨೦ಕಿಂತ ಹೆಚ್ಚು ಹಾಗೂ ಇಂಗ್ಲಿಷ್ ಮಾಧ್ಯಮ ಮತ್ತು ಪಿಯುಸಿ ವಿದ್ಯಾರ್ಥಿಗಳು ೧೦೦ಕ್ಕೆ ೯೫ಕಿಂತ ಹೆಚ್ಚು ಅಂಕ ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಶಿಕ್ಷಕರಾದ ಕಾಶಿರಾಯ್ ಕಲಾಲ್ -೯೯೮೦೩೯೧೪೬೦ ಬಸವರಾಜ ಯಂಬತ್ನಾಳ್ -೮೮೮೪೩೭೭೨೪೭ ವಿಜಯಕುಮಾರ ಭಂಕಲಗಿ -೮೪೯೬೮೦೭೦೮೦ ವೀರಭದ್ರಪ್ಪ ಗುರಮೀಟಕಲ್ -೯೪೪೮೬೫೨೦೫೫ ಅವರಿಗೆ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಲು ಕೊಲ್ಲೂರ್ ಅವರು ಮನವಿ ಮಾಡಿದ್ದಾರೆ.
೧೫ರಂದು ಕಾರ್ಯಕ್ರಮ ಪಟ್ಟಣದ ಯರಗಲ್ ರಸ್ತೆಯಲ್ಲಿ ಇರುವ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ ೧೦:೩೦ಕ್ಕೆ ಜರಗಲಿದ್ದು, ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.