ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಅಮೀನ್ ಮಟ್ಟು ಕಳವಳ

0
98

ದೊಡ್ಡ ದೊಡ್ಡ ಪತ್ರಕೆಗಳು ಇಂದು ಉದ್ಯಮಿಗಳ ಮಾತು ಕೇಳುತ್ತಿವೆ. ಆದರೆ ಪ್ರಾದೇಶಿಕ ಒತ್ರಿಕೆಗಳು ಇಂದಿಗೂ ತಮ್ಮ ಆಸ್ಮಿತೆ ಉಳಿಸಿಕೊಮಡಿವೆ. ಆದ್ದರಿಂದ ಇಂದು ಪ್ರತಿ ಪತ್ರಿಕೆ ಪ್ರಾದೇಶಿಕವಾಗಿ ಕಚೆರಿ ತೆರೆದು ಅಲ್ಲಿನ ತಳಮಳಗಳನ್ನು ತೋರಿಸಿಕೊಡುವ ಕೆಲಸ ಮಾಡುತ್ತಿವೆ. ಇದು ನಿರಂತರವಾಗಿ ನಡೆಯಬೇಕಾಗಿದೆ. – ದಿನೇಶ ಅಮೀನಮಟ್ಟು, ಹಿರಿಯ ಪತ್ರಕರ್ತ

ಕಲಬುರಗಿ: ಸಾಹಿತಿ ಹಾಗೂ ಪತ್ರಕರ್ತರು ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಾಹಿತ್ಯ ಹವ್ಯಾಸಕ್ಕಾಗಿ ಶುರುವಾಗುತ್ತದೆ, ಆದರೆ ಪತ್ರಕರ್ತ ತನ್ನ ಜೀವನಕ್ಕಾಗಿ ಸಮಾಜದ ಕೆಲಸ ಮಾಡುತ್ತಾನೆ. ಸಾಹಿತಿ ಕಲ್ಪನಾ ಲೋಕದಲ್ಲಿ ಯುದ್ಧದ ಭೀಕರತೆ ಬರೆಯುತ್ತಾನೆ, ಆದರೆ ಪತ್ರಕರ್ತ ಅದನ್ನು ಅನುಭವಿಸಿ ಬರೆಯುತ್ತಾನೆ. ಇದು ಪತ್ರಕರ್ತರಿಗೂ ಸಾಹಿಗಳಿಗೂ ಇರುವ ವ್ಯತ್ಯಾಸವಾಗಿವೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ತಿಳಿಸಿದರು.

Contact Your\'s Advertisement; 9902492681

ಅವರು ನಗರದ ಕನ್ನಡ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತ ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದಿಂದ ಪತ್ರಿಕೋದ್ಯಮ, ಪತ್ರಿಕೋದ್ಯಮದಿಂದ ಸಾಹಿತ್ಯ ಲೋಕ ಬೆಳೆಯುತ್ತದೆ. ಇಂದಿನ ಪತ್ರಕರ್ತರಿ ನಿರಂತರ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಇದರಿಂದ ಅವರಿಂದ ಸಾಹಿತ್ಯ ಕೃಷಿ ನಿರೀಕ್ಷಿಸುವುದು ಕಷ್ಟ ಸಾಧುಯವಾಗಿದೆ ಎಂದು ಹೇಳಿದರು.

ನೂತನ ವಿದ್ಯಾಲಯದ ನಿವೃತ್ತ ಪಾಚಾರ್ಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಅರಿವು ಪಸರಿಸುವ ಕೆಲಸವನ್ನು ಮಾಧ್ಯಮ ಹಾಗೂ ಸಾಹಿತ್ಯ ಮಾಡಬೇಕಾಗಿದೆ. ಮನುಷ ಮನುಷರ ನಡುವೆ ಜಗಳ ಹಚ್ಚುವ ಕೆಲಸ ಮಾಡಬಾರದಾಗಿದೆ ಎಂದು ಹೇಳಿದರು.

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಯಷ: ಸಧ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಯವಾಗಿದ್ದು, ಅದು ಕೇವಲ ಇದ್ದವರ ಸ್ವತ್ತಾಗುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ವಿಷಧ ವ್ಯಕ್ತಪಡಿಸಿದರು. ದೇಶದ ಉದ್ಯಮಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವು ಬಡವರು, ಕಾರ್ಮಿಕರು, ರೈತರಿಗೆ ಸಿಗುವಂತೆ ಆಗಬೇಕಾಗಿದೆ. ಉಳ್ಳವರ ಮಾತನ್ನು ಮಾತ್ರ ಕೇಳುವ ಆಡಳಿತ ಜಾರಿಯಾಗುತ್ತಿದೆ. ಸಧ್ಯದ ಸ್ಥಿತಿಯಲ್ಲಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತೊಮ್ಮೆ ರಾರಾಜಿಸುವುದು ಕಷ ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ವಿಜಕುಮಾರ ತೆಗಲತಿಪ್ಪಿ ದಿಕ್ಸೂಚಿ ಬಾಷಣ ಮಾಡಿದರು.ಎಚ್‌ಕೆಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಎಸ್.ಬಿ.ಕಾಮರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಜಿ.ಎಂ.ಸಿದ್ದೇಶ್ವರಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಮಾಧ್ಯಮ ಅಕಾಡೆಮಿ ಸದಸ್ಯ ದೇವೆಂದ್ರಪ್ಪ ಕಪನೂರು, ಕಸಾಪದ ಯಶವಂತ ಅಷ್ಟಗಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಪತ್ರಕರ್ತರಾದ ಅಶೋಕ ಕಪನೂರು, ಸಂಗಮನಾಥ ರೇವತಗಾಂವ್, ಪಿ.ಎಂ.ಮಣೂರ, ದೇವೆಂದ್ರಪ್ಪ ಆವಂಟಿ, ಡಾ. ಶಿವರಂಜನ ಸತ್ಯಂಪೇಟೆ ಸೇರಿ ಜಿಲ್ಲೆಯ ಹಲವು ಪತ್ರಕರ್ತರು ಸಾಹಿತಿಗಳು ಪಾಲ್ಗೊಂಡಿದ್ದರು.

ಸಿದ್ಧಾರ್ಥ ಚಿಮ್ಮಾಯಿದಲಾಯಿ ಅವರು ಸಂಗೀತ ಸೇವೆ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here