ಶಾಶ್ವತ ಸ್ನೇಹಕಾಪಾಡುವುದುಒಂದು ಕೌಶಲ

0
16

ಕಲಬುರಗಿ: ಪರಸ್ಪರ ನಂಬಿಕೆ, ಪ್ರೀತಿ, ಅನ್ಯೋನ್ಯತೆ ಮತ್ತುಆತ್ಮೀಯತೆ ಇವು ಶಾಶ್ವತ ಸ್ನೇಹತೆಗೆ ಪೂರಕವಾಗುವ ಅಂಶಗಳು. ಪರಸ್ಪರ ಮುಕ್ತ ಮನಸ್ಸಿನ ಚರ್ಚೆ ಮಾಡುವುದರಿಂದಉತ್ತಮ ಪರಿಹಾರ ಕಂಡುಕೊಳ್ಳಬಹುದು. ಉತ್ತಮ ಸ್ನೇಹಿತ, ಉತ್ತಮ ಮಾರ್ಗದರ್ಶಿಯಾಗುತ್ತಾನೆ. ಸ್ನೇಹಿತರು ಸುಖ-ದುಃಖಗಳಲ್ಲಿ ಸಮಭಾಗಿಯಾಗಿ ಪಾಲ್ಗೊಳ್ಳುವಿಕೆ, ಪರಸ್ಪರ ಯಶಸ್ಸಿಗೆ ಶ್ರಮಿಸುವುದುಉತ್ತಮ ಮತ್ತು ಶಾಶ್ವತ ಸ್ನೇಹತೆಯನ್ನುಕಾಪಾಡುವಒಂದು ಕೌಶಲವಾಗಿದೆಎಂದುಚಿಂತಕ ನರಸಪ್ಪ ಬಿರಾದಾರದೇಗಾಂವಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ’ಕೊಹಿನೂರ ಸ್ಪೋಕನ್‌ಇಂಗ್ಲೀಷ್‌ಅಕಾಡೆಮಿ’ಯಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ಸ್ನೇಹ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಉಪನ್ಯಾಸಕಎಚ್.ಬಿ.ಪಾಟೀಲ ಮಾತನಾಡುತ್ತಾ, ಸ್ನೇಹಒಂದು ಪವಿತ್ರವಾದ ನಂಟು. ಇದು ಸಂಬಂಧವನ್ನು ಬೆಸೆಯುವ ಸಾಧನವಾಗಿಕಾರ್ಯನಿರ್ವಹಿಸುತ್ತದೆ.ಇದನ್ನು ಬಹು ಎಚ್ಚರಿಕೆಯಿಂದಕಾಪಾಡಿಕೊಂಡು ಹೋಗಬೇಕು.ಸ್ವಾರ್ಥಪರಚಿಂತನೆ, ಸಂಶಯಗಳು, ಶಾಶ್ವತ ಸ್ನೇಹಕ್ಕೆಧಕ್ಕೆತರುವ ಅಂಶಗಳು.ದುರಾಭಿಮಾನವು ಸ್ನೇಹದ ಬಿರುಕಿಗೆಕಾರಣವಾಗಬಹುದು. ಸ್ವಾರ್ಥ ಹಾಗೂ ವ್ಯವಹಾರಿಕಉದ್ದೇಶದ ಸ್ನೇಹಅಪಾಯಕಾರಿಯಾಗಿದೆ.ಪ್ರತಿಯೊಬ್ಬರು ಪರಸ್ಪರ ಸ್ನೇಹಭಾವದಿಂದ ಬದುಕಿದರೆ, ಜೀವನ ಸುಗಮವಾಗುತ್ತದೆಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ್ ಟಿ.ಸಣಮನಿ, ದತ್ತು ಹಡಪದ, ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪಗಣಮುಖಿ, ಸಿದ್ದರಾಮ ತಳವಾರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here