ಜೇವರ್ಗಿ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ತಾಲ್ಲೂಕಿನ ಸೊನ್ನ ಗ್ರಾಮದ ದಾಸೋಹ ವಿರಕ್ತಮಠದಲ್ಲಿ ಪೂಜ್ಯ ಡಾ.ಶಿವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀಮಠದ ಶ್ರೀ ಸಿದ್ದಲಿಂಗೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಮಹಾಪೂಜೆ,ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ಪೂಜೆ ನೆರವೇರಿಸಲಾಯಿತು.
ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ಮೊದಲನೇ ಸೋಮವಾರದಂದು ಪೂಜೆ ಪ್ರಾರಂಭವಾಗಿ ನಿರಂತರ ಒಂದು ತಿಂಗಳವರೆಗೆ ಪ್ರತಿನಿತ್ಯ ಬೆಳಿಗ್ಗೆ ಪಾದ ಪೂಜೆ ಮತ್ತು ವಿಶೇಷ ಪೂಜೆ ಕಾರ್ಯಕ್ರಮ ಜರುಗುತ್ತದೆ.ಪ್ರತಿ ದಿವಸ ಪೂಜೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಶ್ರೀಮಠದ ವತಿಯಿಂದ ನಿರಂತರವಾಗಿ ನಡೆಯುತ್ತದೆ.
ನಂತರ ಭಕ್ತರ ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಪೂಜ್ಯ ಶಿವಾನಂದ ಸ್ವಾಮೀಜಿಯವರು ನಮ್ಮ ಸೊನ್ನ ಗ್ರಾಮದ ಶ್ರೀಮಠದಲ್ಲಿ ಶ್ರಾವಣ ಮಾಸದ ಮೊದಲನೇ ಸೋಮವಾರದಿಂದ ಶ್ರಾವಣ ಮಾಸದ ಕೊನೆಯ ಸೋಮವಾರದವರೆಗೆ ನಿರಂತರ ಮಹಾಪೂಜೆ ಹಾಗೂ ಪಾದಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.ಆದ್ದರಿಂದ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮದ ಭಕ್ತರಾದ ಸಿದ್ದಣ್ಣ ಮಾಕಾ.ಸಾಹೇಬಗೌಡ ಬಿರಾದಾರ.ಶಿವಲಿಂಗಪ್ಪ ಮುಧೋಳ.ಪ್ರಕಾಶ ಮಾಕಾ.ಶಿವಾನಂದ ಮುಧೋಳ.ಕಲ್ಲಯ್ಯ ಸ್ವಾಮಿ.ರೇವಣಸಿದ್ಧ ಅಕ್ಕಿ.ಮಲ್ಲಿಕಾರ್ಜುನ ಬಿರಾದಾರ.ಗುರುರಾಜ ಸಿಲವಂತ್ರ.ವೀರೇಶ ಮಾಕಾ.ನಾಗಪ್ಪ ಹಿರೇಗೌಡ.ಸಿದ್ದು ಹಳ್ಳಿ.ಗೊಲ್ಲಾಳಪ್ಪ ಮೇತ್ರಿ.ಸಂತೋಷ ಹೇರೂರ.ಪ್ರದೀಪ ಬಡಿಗೇರ.ಆನಂದ ಶಿವಮಠ.ಶರಣಗೌಡ ಮರೆಪ್ಪಗೋಳ ಸೇರಿದಂತೆ ಸೊನ್ನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.