ಕಲಬುರಗಿ: ನಗರದ ಕಸ್ತೂರಬಾಯಿ ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ವಾಣಿಜ್ಯ ಪಪೂ ಕಾಲೇಜು ಹಾಗೂ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ವಿದ್ಯಾರ್ಥಿಗಳ – ಸ್ವಾಗತ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮತ್ತು ಈ ವೇಳೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಡಾ.ನಾಗಬಾಯಿ ಬುಳ್ಳಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮೊಬೈಲ್ ಹಾಗೂ ಟಿವಿಗಳಿಂದ ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ವಿದ್ಯಾರ್ಥಿ ಜೀವನ ಎಂದರೆ ಬಂಗಾರದಂತ ಜೀವನ ಆಗಿತ್ತು. ವಿದ್ಯಾರ್ಥಿಗಳು ಜೀವನದ ಮಹತ್ವ ಅರಿಯಬೇಕು ಎಂದರು.
ಶಿಕ್ಷಣ ಕಲಿಸಿದ ಸಂಸ್ಥೆಗೆ ಕೀರ್ತಿ ತರಬೇಕು. ನಿಮ್ಮ ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳು ದೇವರಿಗೆ ಸಮಾನ ಎಂದು ತಿಳಿದುಕೊಂಡು, ಮನೆಯ ಮೊದಲು ಪಾಠ ಶಾಲೆ ಜನನಿ ಮೂದಲು ಗುರು ಎಂಬುದನ್ನು ಮರೆಯಬೇಡಿ. ಸತತ ಪ್ರಯತ್ನಪಟ್ಟು ಅಭ್ಯಾಸ ಮಾಡಿದರೆ ಅದರ ಫಲ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಡಾ.ಮಮತಾ ದೇವಣಿ, ಧರ್ಮರಾಜ ಜವಳಿ, ಪ್ರಾಚಾರ್ಯರಾದ ಸೋನಾಲಿ ಬಟಗೇರಿ, ಮುಖ್ಯಶಿಕ್ಷಕಿ ಮಂಜುಳಾ ಗುತ್ತೇದಾರ, ಸೈಬಣ್ಣವಡಗೇರಿ, ನಿವಾಸ ಜಮಾದಾರ ಇತರರಿದ್ದರು. ಸಾವಿತ್ರಿ ಹಿರೋಳಿ ನಿರೂಪಿಸಿದರು. ಅಲ್ಲಮಪ್ರಭು ಕಣ್ಣಿ ವಂದಿಸಿದರು.