ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಗ್ರಾಮದಲ್ಲಿ ಪೈಶಾಚಿಕ ಕೃತ್ಯ ವೇಸಗಿ ಕೊಲೆ ಮಾಡಿದ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿದಿಸಲು ಆಗ್ರಹ ರಿಪಬ್ಲೀಕ್ ಯೂತ್ ಫಡರೇಶನ ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ತಿಮ್ಮಾಪೂರಿ ವೃತ್ತದಲ್ಲಿ ಮೇಣದ ಬತ್ತಿ ಮೆರವಣಿಗೆ ಪ್ರತಿಭಟನೆ ನಡೆಸಿದರು.
ಕಳೆದ ಸುಮಾರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಾ ಇದಾವೆ. ಬಿಜಾಪೂರಿನ ಧಾನಮ್ಮ ಪ್ರಕರಣ ಆಗಿರಬಹದು, ಬೀದರ ಪ್ರಕರಣ, ಮಂಡ್ಯ ಪ್ರಕರಣ ಹಾಗೂ ಇತ್ತೀಚಿನ ಮುರಗಾಮಠದ ಕೃತ್ಯವಾಗಿರಬಹುದು ಈ ಎಲ್ಲಾ ಪ್ರಕರಣಗಳು ಕೂಡಾ ರಾಜ್ಯ ಸರ್ಕಾರಗಳ ನಿರ್ಲಕ್ಷವೆಂದು ಕಾಣುತ್ತಿದೆ. ಕರ್ನಾಟಕ ರಾಜ್ಯದ ಪೆÇಲೀಸ ಇಲಾಖೆ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳಲ್ಲಿನ ನಿರ್ಲಕ್ಷತನದಿಂದ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ.
ಸರ್ಕಾರ ಒಂದು ಕಡೆ ಹೇಳುತ್ತಾ ಇದೆ ಪ್ರತಿ ಹಳ್ಳಿಗಳಿಗೂ ಪ್ರತಿ ಮನೆಗೂ ಶೌಚಾಲಯವನ್ನು ನಿರ್ಮಿಸಿದ್ದೇವೆ, ಆದರೆ ನಿನ್ನೆಯ ಪ್ರಕರಣ ನಾವು ನೋಡಿದಾಗ ಸರ್ಕಾರ ಕೇವಲ ಕಾಗದದಲ್ಲಿ ಮಾತ್ರ ಶೌಚಾಲಯವನ್ನು ನಿರ್ಮಿಸಿ ದೊಡ್ಡ ಮಟ್ಟದ ಭ್ರಷ್ಟಚಾರ ಮಾಡಿದೆ. ಮತ್ತು ಈ ಎಲ್ಲಾ ಪ್ರಕರಣಗಳನ್ನು ನಾವು ಗಮನಿಸಿದಾಗ ಕೇವಲ ಹಿಂದುಳಿದ ಮತ್ತು ದಲಿತ ಸಮುದಾಯದ ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ಕೃತ್ಯ ವೇಸಗುವ. ರಾಜ್ಯದಲ್ಲಿ ಹಿಂದುಳಿದ ದಲಿತ ಮತ್ತು ಅಲ್ಪ ಸಂಖ್ಯಾಂತರ ಹೆಣ್ಣು ಮಕ್ಕಳ ಮೇಲೆ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸುನೀಲ ಮಾರುತಿ ಮಾನಪಡೆ ಅಸಮಧಾನ ವ್ಯಕ್ತಪಡಿಸಿದರು.
ಕೇಂದ್ರದ ಅವರದೇ ಬಿ.ಜೆ.ಪಿ ಸರ್ಕಾರ “ಬೇಟಿ ಬಜಾವ ಬೇಟಿ ಪಡಾವ” ಎಂದು ಹೇಳುತ್ತದೆ. ಆದರೆ ಇಡೀ ರಾಜ್ಯ ಮತ್ತು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳೆಯರ ದೌರ್ಜನ್ಯ ಕೊಲೆಗಳು ಹೆಚ್ಚಾಗಿದೆ ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಅದರ ಜೊತೆಗೆ ಈ ದೌರ್ಜನ್ಯ ಪ್ರಕರಣದಲ್ಲಿ ಇವತ್ತು ಇಂತಹ ಕೃತ್ಯ ಮತ್ತು ಕೊಲೆಗಡುಕರಿಗೆ ಬೆಂಬಲವಾಗಿ ನಿಂತಿರುವುದು ಖಂಡನೀಯವಾಗಿದೆ ರಿಪಬ್ಲಿಕ್ ಯೂತ್ ಫೆಡರೇಶನ ಮುಖಂಡರಾದ ಸಂತೋಷ ಮೇಲ್ಮನಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರ್ತಿ ಅಶ್ವೀನಿ ಮಧನಕರ್, ವಿದ್ಯಾರ್ಥಿ ಮುಖಂಡರಾದ ಅನೀಲ ಟೆಂಗಳಿ, ಬಾಬುರಾವ ಬೀಳಗಿ, ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ನಾಗರಾಜ ಗೋಗಿ, ವಕೀಲರಾದ ಧರ್ಮಣ್ಣ ಜೈನಾಪೂರ, ಸತೀಶ ಮಾಲೆ, ರಾಣು ಮುದ್ದನಕರ್, ಹರ್ಷ ಪಟ್ಟೇದಾರ, ಅರುಣ ಗಡದ್, ಶಶಿ ಅಲ್ಲೂರ, ಶಿವಕುಮಾರ ನಂದಿ, ದಶರಥ ತಳಕೇರಿ, ಅನೀಲ ಮಂಗಾ, ಅಶೋಕ ಪಂಚಾಳ, ಸಿದ್ದಲಿಂಗ ಪಾಳಾ, ಸಚಿನ ಮಲ್ಲಾರ ಇತರರು ಇದ್ದರು.