ಜಾಗತಿಕ ಬಂಡವಾಳ ಹೂಡಿಕೆದಾರ ಸಭೆ ವಿರೋಧಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

0
24

ಕಲಬುರಗಿ: ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ಕಲಬುರಗಿ, ಚಿತ್ತಾಪುರ ಅಫಜಲಪುರ ತಹಸಿಲ್ ಕಚೇರಿ ಸೇರಿದಂತೆ ಜಿಲ್ಲಾದ್ಯಂತ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಯಿತು.

ಕಲಬುರಗಿ ಜಿಲ್ಲಾಧಿಕಾರಿ ಕಚೇಯ ಮುಂದೆ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ ಅವೃ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.

Contact Your\'s Advertisement; 9902492681

ಅಫಜಲಪುರದಲ್ಲಿ ಸಂಘದ ತಾಲ್ಲೂಕು ಕಾರ್ಯದರ್ಶಿ ಶ್ರೀಮಂತ ಬಿರಾದಾರ್ ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಬಂದು ಒದಗಿರುವ ಅತಿವೃಷ್ಟಿ ಬರಗಾಲ ಹಾಗೂ ಕೋವಿಡ್ ಲಾಕ್ಡೌನ್ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಗೆ ಜನಸಾಮಾನ್ಯರು ನಲುಗುತ್ತಿರುವಾಗ ಆದರೂ ಎಂದಿನಂತೆ ರಾಜ್ಯ ಸರ್ಕಾರ ವಿಶ್ವ ಬಂಡವಾಳ ಹೂಡಿಕೆದಾರರ ಸಭೆ ನಡೆಸುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ರೈತರಿಗೆ ಅನುಕೂಲವಾಗುವ ಕಾಯ್ದೆ ತರಬೇಕಾದ ಸರ್ಕಾರ ರೈತ ವಿರೋಧಿ ಕಾನೂನುಗಳು ತರುವುದರ ಮೂಲಕ ರೈತರಿಗೆ ಸಂಕಷ್ಟಕ್ಕೆ ದೂಡುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಭೂಮಿ ವಿದ್ಯುತ್ತು ನೀರು ಸೇರಿದಂತೆ ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಮುಂದಾಗಿರುವುದು. ದುರಂತವಾಗಿದೆ. ಈಗ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮೂಲಕ ಕಂಪನಿಯ ಕೊಡಲು ಮುಂದಾಗಿರೋದು ದುರಂತವಾಗಿದೆ ಎಂದು ಹೇಳಿದರು.

ಇದನ್ನು ತಕ್ಷಣ ಕೈ ಬಿಟ್ಟು ರೈತರಿಗೆ ಅನುಕೂಲವಾಗುವ ಕೃಷಿ ಕಾಯ್ದೆಗಳನ್ನು ಜಾರಿ ತರಬೇಕು ಎಂದು ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾನ್ಯ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು ಮನವಿಯನ್ನು ತಿರಸ್ತೆದಾರ ಗಾಳಪ್ಪ ಕೆ ಸ್ವೀಕರಿಸಿದ್ದರು ಜೊತೆಗೆ ಬಸರೆಡ್ಡಿ ಇದ್ದರು ಪ್ರತಿಭಟನೆಯಲ್ಲಿ ಸಿದ್ದರಾಮ್ ದಣ್ಣೂರ್ ಗುರು ಚಾಂದ್ ಕೋಟೆ ರಾಜುಗೌಡ ಬಾಸಗಿ ಯಲ್ಲಪ್ಪ ನೆಲೋಗಿ ಸಂಗಣ್ಣ ನಾರ್ಸೆರ್ ಶರಣು ಕೌಲಗಿ ಬಸಣ್ಣ ಶಿವಣಗಿ ಭೋಜಪ್ಪ ಪೂಜಾರಿ ಜುಮೇನಶಾ ಮಕಂದರ್ ಶರಣಪ್ಪ ರಾಥೋಡ್ ಲಕ್ಷ್ಮಣ ಸೋನ್ನ ಹನುಮಂತ್ ರಾವ್ ಬಿರಾದರ್ ಖಾಜಪ್ಪ ಪೂಜಾರಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here