ಬಾಲಕಿಯ ಕೊಲೆ ಘಟನೆಗೆ ಸಂಘಟನೆಗಳ ಪ್ರತಿಭಟನೆ

0
32

ಆಳಂದ: ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಯ 14 ವರ್ಷದ ಅಪ್ರಾಪ್ತೆ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಕೃತ್ಯವನ್ನು ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ವಿವಿಧ ಸಂಘಟನೆಗಳು ಮುಖಂಡರು ಗುರುವಾರ ಜಂಟಿಯಾಗಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಾಲಕಿಯ ಮೇಲೆ ಘೋರ ಕೃತ್ಯ ಎಸಗಿ ಕೊಲೆ ಮಾಡಿದ ದುಷ್ಕರ್ಮಿಯನ್ನು ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ಒದಗಿಸಿ ಕುಟುಂಬದವರಿಗೆ ನೌಕರಿ ನೀಡಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಅಖಿಲ ಭಾರತಿಯ ಮಹಿಳಾ ಒಕ್ಕೂಟ, ಆಲ್ ಇಂಡಿಯಾ ತಂಜಿಮೆ ಇನ್ಸಾಫ್, ಅಖಿಲ ಭಾರತ ಕಿಸಾನ ಸಭಾ ಸೇರಿದಂತೆ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹಿರಿಯ ಮಲ್ಲಿನಾಥ ಯಲಶೆಟ್ಟಿ, ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಕಿಸಾನಸಭಾ ರಾಜ್ಯ ಮುಖಂಡ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಜಿಪಂ ಮಾಜಿ ಸದಸ್ಯೆ ಪೂಜಾ ಆರ್. ಲೋಹಾರ, ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಪದ್ಮಾವತಿ ಎನ್ ಮಾಲಿಪಾಟೀಲ, ನಗರ ಕಾರ್ಯದರ್ಶಿ ಶರಣಮ್ಮಾ ಪೂಜಾರಿ, ನಗರ ಅಧ್ಯಕ್ಷೆ ಶಿವಲಿಂಗಮ್ಮ ಲೆಂಗಟಿ, ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮೀ ಯಳಸಂಗಿ, ಭಾಕರ ಅಲಿ ಜಮಾದಾರ, ಲಾಡಸಾಬ, ಲಕ್ಷ್ಮೀಂಬಾಯಿ ಸರಸಂಬಾ, ದಯಾನಂದ ಶೇರಿಕಾರ, ಶಿವುಪುತ್ರಪ್ಪ ಬಿರಾದಾರ ಮುನ್ನೋಳ್ಳಿ, ಗ್ರಾಪಂ ಸದಸ್ಯೆ ಮಹಾನಂದ ಕೆ. ತುಕಾಣಿ, ಲಕ್ಷ್ಮೀಬಾಯಿ ಜಿರೋಳಿ, ಮೋತಿಬಾಯಿ ದಾಳಿಂಬ, ಶಿವಮ್ಮಾ ಜುಭ್ರೆ ಮತ್ತಿತರು ಭಾಗವಹಿಸಿದ್ದರು. ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here