50 ಲಕ್ಷ ಮಂದಿ ನೋಟ್ ಬ್ಯಾನ್ ನಿಂದ ಉದ್ಯೋಗ ಕಳೆದುಕೊಂಡಿದ್ದಾರೆ ವರದಿಯಿಂದ ಬಹಿರಂಗ

0
295

ನವದೆಹಲಿ: ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 50ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆಂದು ಅಜೀಮ್ ಪ್ರೇಮ್ ಜೀ ಯೂನಿವರ್ಸಿಟಿಯ ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಸಂಶೋಧಕರ ಅಧ್ಯಯನವೊಂದು ತಿಳಿಸಿದೆ.

ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಳೆದ 8, ನವೆಂಬರ್‌ 2016ರಲ್ಲಿ 500/1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಿರ್ಧಾರವನ್ನು ಘೋಷಿಸಿದ್ದರು. ಇದರ ಪರಿಣಾಂವಾಗಿ  ದೇಶದಲ್ಲಿ ಸುಮಾರು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸ್ಟೇಟ್‌ ಆಫ್‌ ವರ್ಕಿಂಗ್‌ ಇಂಡಿಯಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Contact Your\'s Advertisement; 9902492681

2018ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ.6ಕ್ಕೆ ಹೆಚ್ಚುವ ಮೂಲಕ ಗರಿಷ್ಠ ಪ್ರಮಾಣವನ್ನು ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಗ್ರಾಮೀಣ ಮತ್ತು ನಗರಗಳೆರಡರಲ್ಲೂ ನಿರೋದ್ಯಗಿಗಳ ಪೈಕಿ 20-24 ವರ್ಷದ ಯುವಕರೇ ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here