ವಿವಿಧ ಬೇಡಿಕೆ ಈಡೆರಿಸಲು ಕಲ್ಯಾಣ ನಾಡು ವಿಕಾಸ ವೇದಿಕೆಯಯಿಂದ ಬಸವರಾಜ ಪಾಟೀಲ್ ಸೇಡಂಗೆ ಮನವಿ

0
14

ಕಲಬುರಗಿ : ಕಲ್ಯಾಣ ಕರ್ನಾಟಕದ ಬೇಡಿಕೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಅವರಿಗೆ ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಡಿಗಾಣಿಸುತ್ತಿವೆ, ನಮ್ಮ ಭಾಗದ ಯೋಜನೆಗಳನ್ನು ರದ್ದು ಮಾಡುವ ಹಾಗೂ ಸ್ಥಳಾಂತರ ಮಾಡುವ ಮೂಲಕ ಮಲತಾಯಿ ಧೋರಣೆ ತೋರುತ್ತಿರುವುದು ಕಂಡುಬರುತ್ತಿದೆ. ಕಾರಣ ಸದರಿ ಬಸವರಾಜ ಪಾಟೀಲ್ ಸೇಡಂ ರವರ ಮುಂದಾಳತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿಗೆ ನಿಯೋಗವನ್ನು ಕಂಡೊಯ್ಯಬೇಕು ಹಾಗೂ ಚಳಿಗಾಲದ ಅಧಿವೇಶನದಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕಾಗಿ ಮನವಿ ಸಲ್ಲಿಸಲಾಯಿತ್ತು.

Contact Your\'s Advertisement; 9902492681

2020 ರಲ್ಲಿ ತಾವು ನಿಯೋಗವನ್ನು ಕರೆದುಕೊಂಡು ಹೋಗಿದ್ದ ವೇಳೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು, ಕಲಬುರಗಿಯ ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪಿಸುತ್ತೇವೆಂದು ಹೇಳಿದ್ದರು ಸದ್ಯಕ್ಕೆ ರಾಜ್ಯದ ಬೇರೆ ಕಡೆ ಸ್ಥಳಾಂತರವಾಗುತ್ತಿದೆ, “ಕಲಬುರಗಿಯಲ್ಲಿ ಏಮ್ಸ” ಸ್ಥಾಪಿಸುವಂತೆ ಡಾ. ಡಿ.ಎಮ್. ನಂಜುಂಡಮ್ಮ ವರದಿ, ಕೇಂದ್ರ ಸರಕಾರದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಾಗೂ ಮದರಾಸ ಹೈಕೋರ್ಟನ್ ಶಿಫಾರಸ್ಸುಗಳಿವೆ, 1984ರ ಜಸ್ಟಿಸ್ ಸರಿನ್ ಸಮಿತಿಯ ಶಿಫಾರಸ್ಸಿನ ಅನ್ವಯ 2014 ರಲ್ಲಿ “ಕಲಬುರಗಿ ರೇಲ್ವೆ ವಿಭಾಗ”ವನ್ನು ಘೋಷಣೆ ಮಾಡಿದ್ದರು ಅದು ಇದ್ದುವರೆಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ, ಕಲಬುರಗಿ ರೇಲ್ವೆ ವಿಭಾಗವು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ, ಬೀದರ-ಬಳ್ಳಾರಿ (ಎನ್ ಹೆಚ್-150ಎ) “ಕಲ್ಯಾಣಪಥ ಹೆದ್ದಾರಿ”ಯು ಕೇವಲ ಘೋಷಣೆಗೆ ಸೀಮಿತವಾಗಿದೆ ಅದು ಕಾರ್ಯರೂಪಕ್ಕೆ ಬಂದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಹಾಯಕವಾಗುತ್ತದೆ, ಕಲ್ಯಾಣ ಕರ್ನಾಟಕದಲ್ಲಿ ಚತುಷ್ಪಥ ಹೆದ್ದಾರಿಗಳು ಇಲ್ಲದಿರುವುದು ಅಭಿವೃದ್ಧಿಗೆ ತೊಡಕಾಗಿದೆ.

ಕಲಬುರಗಿ ನಗರದ ಸಂಚಾರ ಸುವ್ಯವಸ್ಥೆ ಕಾಪಾಡಲು, ಅಫಘಾತಗಳನ್ನು ನಿಯಂತ್ರಿಸಲು ಮತ್ತು ನಗರದ ಅಭಿವೃದ್ಧಿಗಾಗಿ 2ನೇ ವರ್ತುಲ ರಸ್ತೆ ನಿರ್ಮಾಣ ಮಾಡುವ ಬಗ್ಗೆಯೂ ಕೇವಲ ಹೇಳಿಕೆಗಳಾಗಿ ಉಳಿಯುತ್ತಿದ್ದು ಆದಷ್ಟು ಬೇಗನೆ ವರ್ತುಲ ರಸ್ತೆ ನಿರ್ಮಾಣ ಮಾಡಬೇಕು, ಕಲಬುರಗಿ ಜಿಲ್ಲೆಯ ಜೀವ ಬೆಳೆ ತೊಗರಿ. ಜಿಲ್ಲೆಯಲ್ಲಿ ವಿಶ್ವದಲ್ಲಿ ಗುಣಮಟ್ಟದ ತೊಗರಿ ಬೆಳೆ ಉತ್ಪದಾನೆಯಾಗುತ್ತದೆ. ಅದಕ್ಕೆ 2012 ರಲ್ಲಿ ಸರಕಾರವು ಘೋಷಣೆ ಮಾಡಿದ್ದ “ತೊಗರಿ ಪಾರ್ಕ” ರದ್ದಾಗಿದ್ದು ಇದ್ದರಿಂದ ಕಲ್ಯಾಣ ಕರ್ನಾಟಕದ ರೈತರಿಗೆ ಮೋಸವಾಗಿದೆ, ಇಲ್ಲಿನ ತೊಗರಿ ಬೆಳೆಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮತ್ತು ರೈತರಿಗೆ ಅನುವು ಮಾಡಿಕೊಡಲು ಕೂಡಲೇ ಆರಂಭಿಸಬೇಕು.

ಕಲಬುರಗಿಯಲ್ಲಿನ ತೊಗರಿ ಅಭಿವೃದ್ಧಿ ಮಂಡಳಿಯನ್ನು ಕೆ.ಎಮ್.ಎಫ್. ಮಾದರಿಯಲ್ಲಿ ಬಲಪಡಿಸಬೇಕು, ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗ ನಿರ್ಮಾಣ, ವಲಸೆ ನಿಯಂತ್ರಣ ಹಾಗೂ ಬಡತನ ನಿರ್ಮೂಲನೆ ಮಾಡಲು ಕಲಬುರಗಿಯಲ್ಲಿ “ಟೆಕ್ಸಟೈಲ್ ಪಾರ್ಕ” ನಿರ್ಮಾಣ ಮಾಡಬೇಕು, ಕಲಬುರಗಿಯಲ್ಲಿ ಐ.ಟಿ. ಉದ್ಯಮವನ್ನು ಬೆಳೆಸಲು ಕೇಂದ್ರ ಸರಕಾರದ “ಸಾಫ್ಟವೇರ ಟೆಕ್ನಾಲಜಿ ಪಾಕ್ರ್ಸ ಆಫ್ ಇಂಡಿಯಾ (ಎಸ್.ಟಿ.ಪಿ.ಐ)” ಕೇಂದ್ರವನ್ನು ಆರಂಭಿಸಬೇಕು ಈಗಿರುವ ಐ.ಟಿ. ಪಾರ್ಕನ್ ಪೂರ್ಣ ಬಳಕೆಯ ಜೊತೆಗೆ ಇನಫೋಸಿಸ್, ಟಿ.ಸಿ.ಎಸ್., ಹಾಗೂ ವಿಪ್ರೊದಂತಹ ಕಂಪನಿಗಳ ಶಾಖೆಗಳು ಕಲಬುರಗಿಯಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು,

ಈ ಸಂದರ್ಭದಲ್ಲಿ ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ರಾಜ್ಯ ಉಪಾಧ್ಯಕ್ಷ ಉದಯಕುಮಾರ ಖಣಗೆ, ಜಿಲ್ಲಾಧ್ಯಕ್ಷ ಬಾಬು ಮದನಕರ, ಉಪಾಧ್ಯಕ್ಷ ಅನೀಲ ಕಪನೂರ, ನಗರಾಧ್ಯಕ್ಷ ಸೂರ್ಯಪ್ರಕಾಶ ಚಾಳಿ, ಸಂಘಟಕರಾದ ಸಾಗರ ಪಾಟೀಲ್, ಮೋಹನ ಸಾಗರ, ಪ್ರವೀಣ ಖೇಮನ್, ಜೈಭೀಮ ಮಾಳಗೆ, ಸಾಗರ ಭೈರಾಮಡಗಿ, ಮಹೇಶ ಮಾನೆ, ರಾಹುಲ ಗಾಯಕವಾಡ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here