ಕಲಬುರಗಿ: ಮಾಜಿ ಎಂಎಲ್ಸಿ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ಅಲ್ಲಮಪ್ರಭು ಪಾಟೀಲಿ ನೆಲೋಗಿ ಅವರನ್ನು ಏಕ ವಚನದಲ್ಲಿ ಮಾತಾಡಿ ಅವಹೇಳನಕಾರಿ ಹೇಳಿಕೆ ನೀಡಿರುವ ಅನುಭವವಿಲ್ಲದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಯುವ ನಾಯಕ ಸುರೇಶ ಪಾಟೀಲ ಜೋಗೂರ ಒತ್ತಾಯಿಸಿದ್ದಾರೆ.
ಅಲ್ಲಮಪ್ರಭು ಪಾಟೀಲ ಅವರ ಅನುಭವ ಇದ್ದಷ್ಟು ದತ್ತಾತ್ರೇಯ ಪಾಟೀಲ ಅವರಿಗೆ ವಯಸ್ಸಿಲ್ಲ. ಆದಾಗ್ಯೂ ಹಿರಿಯರ ಬಗ್ಗೆ ಹೇಗೆ ಮಾತಾಡಬೇಕೆಂದು ಮೊದಲು ಶಾಸಕರು ಅರಿತುಕೊಳ್ಳಬೇಕು. ಆಮೇಲೆ ಆರೋಪ ಮಾಡಲಿ.
ಅಲ್ಲಮಪ್ರಭು ಪಾಟೀಲ ಅವರು ತಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಹಾಕಿಕೊಳ್ಳದೇ ಪ್ರಾಮಾಣಿಕತೆ ಮತ್ತು ನಿμÉ್ಠಯಿಂದ ಕಾರ್ಯ ಮಾಡಿ, ಜನರ ಹೃದಯವನ್ನು ಗೆದ್ದವರು. ಇಂಥ ಅನಿಭವಿ ರಾಜಕಾರಣಿಯೊಬ್ಬರ ಬಗ್ಗೆ ಏಕವಚನದಲ್ಲಿ ಮಾತಾಡಿ ಶಾಸಕರು ಮುಂದಿನ ತಮ್ಮ ಸೋಲಿನ ಬಗ್ಗೆ ಹತಾಶೆಭಾವನೆಯಿಂದ ಮಾತನಾಡುತ್ತಿದ್ದಾರೆ.
ಹಾಗಾಗಿ ಇಂಥ ಸರ್ವಜನಾಂಗದವರ ನಾಯಕರಾದ ಅಲ್ಲಮಪ್ರಭು ಪಾಟೀಲ ಅವರ ಬಗ್ಗೆ ಅವಹೇಳನಕಾರಿ ಮಾತಾಡಿ ಸುಳ್ಳು ಆರೋಪ ಮಾಡಿರುವ ದತ್ತಾತ್ರೇಯ ಪಾಟೀಲ ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ವೀರಶೈವ ಲಿಂಗಾಯತ ಜನಾಂಗದವರು ಸೇರಿದಂತೆ ಎಲ್ಲಾ ವರ್ಗದ ಸಂಘಟನೆದವರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗೂರ ಎಚ್ಚರಿಕೆ ನೀಡಿದ್ದಾರೆ.