ಪ್ರತಿಯೊಬ್ಬರಿಗೂ ಸ್ವಯಂ ಆತ್ಮರಕ್ಷಣೆ ಅಗತ್ಯ

0
25

ಕಲಬುರಗಿ: ಪ್ರತಿಯೊಬ್ಬರಿಗೂ ಸ್ವಯಂ ಆತ್ಮ ರಕ್ಷಣೆ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲೆ ಕರಾಟೆ ಕಲಿಯುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಅಪರಾಧ ನಿಗ್ರಹ ದಳದ (ಡಿಸಿಆರ್‍ಬಿ) ಡಿವೈಎಸ್ಪಿ ಜೆ.ಎಚ್. ಇನಾಂದಾರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯ್ ಕುಮಾರ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಭಾನುವಾರ ನಡೆದ ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಕಲರ್ ಬೆಲ್ಸ್ ಪರೀಕ್ಷೆ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ವಿಶೇಷವಾಗಿ ಮಹಿಳೆಯರು, ಯುವತಿಯರ ಸುರಕ್ಷತೆಗೆ ಕರಾಟೆ ತರಬೇತಿ ಅಗತ್ಯತೆವಾಗಿದ್ದು, ಈ ದಿಸೆಯಲ್ಲಿ ಪ್ರೌಢ ಶಾಲೆ ಹಂತದವರೆಗೆ ಕರಾಟೆ ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಇಂಡಿಯನ್ ಕರಾಟೆ ಸಂಸ್ಥೆಯ ಸಂಸ್ಥಾಪಕ ಮಾಸ್ಟರ್ ಬಿಎಂ ನರಸಿಂಹನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಆಪಿ ಓಂಕಾ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಭೀಮಶಂಕರ್ ಫಿರೋಜಾಬಾದ, ಜಿಲ್ಲಾ ತರಬೇತಿದಾರ ರಾಜವರ್ಧನ್ ಜಿ, ಚವ್ಹಾಣ, ತರಬೇತಿದಾರ ಅಂಬರೀಶ್ ಜೋಗಿ, ಪ್ರತಾಪ್ ಸಿಂಗ್ ಪವಾರ್, ಶ್ರೀಕಾಂತ್ ಪಿಸಳ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here