ಸೊಲ್ಲಾಪುರ: ಡಾ. ಜಯದೇವಿತಾಯಿ ಲಿಗಾಡೆ ಸಾಂಸ್ಕೃತಿಕ ಕನ್ನಡ ಭವನ ಶಿಲಾನ್ಯಾಸ 26ಕ್ಕೆ

0
53

ಸೊಲ್ಲಾಪುರ : ಭಾರತ ಸ್ವಾತಂತ್ರ್ಯ ಅಮೃತೋತ್ಸವದ ಸವಿನೆನಪಿಗಾಗಿ ೨೦೨೨-೨೩ ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮಂಜೂರು ಮಾಡಿರುವ ಡಾ. ಜಯದೇವಿತಾಯಿ ಲಿಗಾಡೆ ಸಾಂಸ್ಕೃತಿಕ ಕನ್ನಡ ಭವನ ಕಟ್ಟಡದ ಶಿಲಾನ್ಯಾಸ ಸಮಾರಂಭ ಇದೇ ಮಾರ್ಚ್ ೨೬ ರಂದು ಸಾಯಂಕಾಲ ೬.೫ ಗಂಟೆಗೆ ನಾಗನಹಳ್ಳಿ ರಸ್ತೆ, ಅಕ್ಕಲಕೋಟೆಯಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ (ರಿ), ಮಹಾರಾಷ್ಟ್ರ ಹಾಗೂ ಡಾ. ಜಯದೇವಿತಾಯಿ ಲಿಗಾಡೆ ಸಾಂಸ್ಕೃತಿಕ ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಭೂಮಿಪೂಜೆ ಸಮಾರಂಭದಲ್ಲಿ ಅಕ್ಕಲಕೋಟ ವಿರಕ್ತ ಮಠದ ಪೂಜ್ಯ ಶ್ರೀ ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರ ಹಸ್ತೆಯಿಂದ ಭೂಮಿಪೂಜೆ ನೆರವೇರಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶಾಸಕ ಸಚಿನ್ ಕಲ್ಯಾಣಶೆಟ್ಟಿ ಉದ್ಘಾಟಿಸುವರು.

Contact Your\'s Advertisement; 9902492681

ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಸೊಲ್ಲಾಪುರದ ಹಿರಿಯ ಸಾಹಿತಿ ಡಾ.ಮಧುಮಾಲ ಲಿಗಾಡೆ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಸೇರಿದಂತೆ ಸೊಲ್ಲಾಪುರ ಜಿಲ್ಲಾ ಪಂ. ಮಾಜಿ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ, ನಗರಪಾಲಿಕೆ ಮಾಜಿ ಉಪನಗರಾಧ್ಯಕ್ಷ ಮಹೇಶ ಹಿಂಡೋಳೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೈಂದರ್ಗಿಯ ಯುವ ಸಾಹಿತಿ ಗಿರೀಶ ಜಕಾಪುರೆ ಸ್ವಾಗತಿಸುವರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಪ್ರಾಸ್ತಾವಿಕ ನುಡಿಗಳನ್ನಾಡುವರು. ಅಂದು ರಾತ್ರಿ ಸಂಗೀತ ಸಂಜೆ ಹಾಗೂ ಹಾಸ್ಯಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here