ಬಿಸಿ ಬಿಸಿ ಸುದ್ದಿ

ಸಾಹಿತ್ಯ ಸಂಸ್ಕøತಿ ಒಂದು ನಾಣ್ಯದ ಎರಡು ಮುಖಗಳು

ಜೇವರ್ಗಿ: ಸಗರನಾಡು ಎಂಬುದು ಶರಣರು, ಸಂತರು, ತತ್ವಪದಕಾರರು ಜನಿಸಿದ ಪುಣ್ಯಭೂಮಿಯಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಡಾ. ಡಾ.ಎಚ್.ಟಿ.ಪೆÇೀತೆ ಹೇಳಿದರು.

ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿ ಯಿಂದ ಆಯೋಜಿಸಿದ್ದ ಸಗರನಾಡು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತನ್ನದೆಯಾದ ವೈಶಿμÉ್ಟ ಹೊಂದಿದ ಸಗರ ನಾಡಿನ ಇತಿಹಾಸವನ್ನು ನಾವು ಅರಿತುಕೊಳ್ಳುವದರ ಜೊತೆಗೆ ಜನಮಾನಸಕ್ಕೆ ತಿಳಿಸಲು ಹಿಂದೆ ಬಿದ್ದಿದ್ದೇವೆ. ರಾಜಕಾರಣಿಗಳು, ಯುವಕರು ಸಗರನಾಡಿನ ವೈಭವದ ಹಿರಿಮೆಯನ್ನು ಹೆಚ್ಚಿಸಬೇಕಾಗಿದೆ ಎಂದರು.

ಸಾಹಿತ್ಯವನ್ನು ಉಳಿಸಿ ಬೆಳೆಸು ವುದರ ಜೊತೆಗೆ ಮನುಷ್ಯ ಮನು ಷ್ಯನನ್ನು ಗೌರವಿಸುವ ಪರಿಯನ್ನು ನಾವು ರೂಢಿಸಿಕೊಂಡಾಗ ಶರಣರ ನಾಡಾದ ಸಗರನಾಡಿಗೆ ಒಂದು ಅರ್ಥ ಬರುತ್ತದೆ ಎಂದರು.

ಉತ್ಸವದ ಸರ್ವಾಧ್ಯಕ್ಷ ಡಾ.ಶ್ರೀಶೈಲ ನಾಗರಾಳ ಮಾತನಾಡಿ,‘ಸಾಹಿತ್ಯ ಮತ್ತು ಸಂಸ್ಕೃತಿ ಎರಡು ಮಾನವನಿಗಾಗಿ ಮಾನವನಿಂದಲ್ಲೆ ಹುಟ್ಟಿವೆ. ಒಂದನ್ನು ಬಿಟ್ಟು ಇನ್ನೊಂದು ಬದುಕಲಾರದು, ಬೆಳೆಯಲಾರದು, ಒಂದನ್ನು ತಿಳಿಯದೆ ಇನ್ನೊಂದರ ಅರ್ಥವಾಗಲಾರದು ಎಂದರು.

ಲಿಂ. ಶ್ರೀ ಚಂದ್ರಶೇಖರ (ವಿಗ್ಗು) ಚನ್ನಮಲ್ಲಯ್ಯ ಹಿರೇಮಠ ವೇದಿಕೆ ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ. ಶಿವಾನಂದ ಸ್ವಾಮೀಜಿ, ಅಣಜಿಗಿಯ ಶ್ರೀಸತ್ಯಾನಂದ ಮುತ್ಯಾ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಸುರಪುರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪನಾಯಕ ಉದ್ಘಾಟಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ, ಮಲ್ಲಿ ನಾಥಗೌಡ ಯಲಗೌಡ, ಜಿ.ಪಂ. ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ, ರಾಜಶೇಖರ ಸೀರಿ, ಹಳ್ಳೆಪ್ಪಾಚಾರ್ಯ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಗೌರವಾಧ್ಯಕ್ಷ ಚನಮಲ್ಲಯ್ಯ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ ಬಿರಾದಾರ, ಎಸ್.ಟಿ ಬಿರಾದಾರ, ಚಂದ್ರಶೇಖರ ತುಂಬಗಿ, ಕಲ್ಯಾಣಕುಮಾರ ಸಂಗಾವಿ, ಶ್ರೀಹರಿ ಕರಕಳ್ಳಿ, ಎಸ್.ಎ ಪಡಶಟ್ಟಿ, ಡಾ. ಹಣಮಂತ್ರಾಯ ರಾಂಪೂರ ಸೇರಿದಂತೆ ಇತರರು ಇದ್ದರು.

ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶರಣಗೌಡ ಬಿರಾದಾರ ಯಲಗೋಡ ಸ್ವಾಗತಿಸಿದರು. ಮಲ್ಲಿನಾಥ ಪಾಟೀಲ ನಂದಿಹಳ್ಳಿ ನಿರೂಪಿಸಿದರು.

ಸೌಹಾರ್ದ ನೆಲೆ ಸಗರನಾಡು; ಸುರಪುರ, ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಭೌಗೋಳಿಕ ಪ್ರದೇಶ ಹಾಗೂ ಕೃμÉ್ಣ- ಭೀಮೆಯರ ತೆಕ್ಕೆಯಲ್ಲಿ ಬರುವ ಕ್ಷೇತ್ರವನ್ನು ಸಗರ ನಾಡು ಎಂದು ಕರೆಯಲಾಗುತ್ತಿದೆ. ಈ ನೆಲ ಸೌಹಾರ್ದತೆಯ ನೆಲೆವನೆಯಾಗಿದೆ. ಸಗರ ನಾಡು ಸಂಸ್ಕೃತಿ ಉತ್ಸವದ ಸರ್ವಾಧ್ಯಕ್ಷ ಡಾ. ಶ್ರೀಶೈಲ ನಾಗರಾಳ ತಿಳಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago