ಬಿಸಿ ಬಿಸಿ ಸುದ್ದಿ

ಚುನಾವಣಾ ಕಾರ್ಯಕ್ಕೆ ಮಕ್ಕಳ ಬಳಕ್ಕೆ ನಿಷೇಧ

ಕಲಬುರಗಿ; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಮಕ್ಕಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಅಧ್ಯಕ್ಷರು ಆದ ಕಲಬುರಗಿ ಜಿಲ್ಲಾಧಿಕಾರಿಗಳಾದ ಯಶವಂತ ವಿ. ಗುರುಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಕೂಡ ಚುನಾವಣಾ ಕಾರ್ಯಗಳಲ್ಲಿ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೋರಿದೆ.

ಭಾರತ ಸರ್ಕಾರವು ವಿಶ್ವಸಂಸ್ಥೆಯು ಅನುಮೋದಿತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರ ಡಿಸೆಂಬರ್ 11 ರಂದು ಒಪ್ಪಿ ಅನುಮೋದಿಸಿದೆ. ಈ ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ) 2015ರ ಅನ್ವಯ 18 ವರ್ಷದೊಳಗಿನ ಎಲ್ಲರೂ ಮಕ್ಕಳು ಎಂದು ಪರಿಗಣಿಸಲಾಗಿದೆ.

ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

emedialine

Recent Posts

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

16 mins ago

ರಾಮ್ ರಾವ್ ಮಹಾರಾಜರ ಆದರ್ಶ ಮೈಗೂಡಿಸಿಕೊಳ್ಳಿ

ಚಿತ್ತಾಪುರ: ವಿಶ್ವ ರತ್ನ ನಡೆದಾಡುವ ಭಗವಂತ ಬಂಜಾರ ಸಮಾಜದ ಧರ್ಮಗುರುಗಳಾದ ಡಾ,ರಾಮ್ ರಾವ್ ಮಹಾರಾಜರು ಒಬ್ಬ ಮಹಾನ್ ಸರಳ ಸಜ್ಜನಿಕೆಯ…

21 mins ago

ಕಲಾವಿದ ಕಲ್ಪನೆಗಳ ಅಭಿವ್ಯಕ್ತಿಯೇ ಚಿತ್ರಕಲೆ: ಸಂತೋಷ್ ಹೆಗಡೆ

ಬೆಂಗಳೂರು:ಕಲಾವಿದನ ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಯೆ ಚಿತ್ರಕಲೆ,ಹಾಗೂ ಸಾಮಾನ್ಯವಾಗಿ ಒಬ್ಬ ಕಲಾವಿದ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಯೋಚನೆ ಮತ್ತು ಭಾವನೆಗಳು…

2 hours ago

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಶ್ಲಾಘನೀಯ

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜಾÐನದೀಪ ನೃತ್ಯ ಕಲಾಸಂಸ್ಥೆ ರಿ ವತಿಯಿಂದ ಸಾಂಸ್ಕ್ರತಿಕ ಕಲಾಮಹೋತ್ಸ ಮತ್ತು ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ…

4 hours ago

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ನಾಗರಾಜ ಭಂಕಲಗಿ ಅವಿರೋಧ ಆಯ್ಕೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ…

5 hours ago

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

19 hours ago