ಅಂಬೇಡ್ಕರ ಸಂವಿಧಾನ, ವಿಚಾರಗಳು ಈ ದೇಶಕ್ಕೆ ಅನಿವಾರ್ಯ: ಅಣ್ಣಾಸಾಬ್

0
13

ಮಾದನಹಿಪ್ಪರಗಿ: ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರವರನ್ನು ಅರಿತವರು ಜ್ಞಾನಿಗಳಾಗುತ್ತಾರೆ. ಅವರ ವಿಚಾರಗಳನ್ನು ತಿಳಿದವರು ಹೋರಾಟಗಾರರಾಗುತ್ತಾರೆ. ಅವರ ಸಮಾನತೆಯ ವಿಚಾರಗಳನ್ನು ಮೈಗೂಡಿಸಿಕೊಂಡವರು ಸಹೋದರತೆ ಮತ್ತು ಭಾರತೀಯರಾಗುತ್ತಾರೆ. ಹೀಗಾಗಿ ಅಂಬೇಡ್ಕರವರು ಈ ದೇಶಕ್ಕೆ ಅನಿವಾರ್ಯವಾಗುತ್ತಾರೆ ಎಂದು ದರ್ಗಾಶಿರೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಾಸಾಬ್ ಅಂಜುಟಗಿ ಹೇಳಿದರು.

ಇಂದು ನಿಂಗದಳ್ಳಿ ಗ್ರಾಮದ ಭೀಮಜ್ಯೋತ ನವತರುಣ ಸಂಘ ಹಾಗೂ ಗ್ರಾಮಸ್ಥರ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರವರ 132 ನೇ ಜಯಂತಿಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಪನ್ಯಾಸಕ ಶಿವಾನಂದ ಕಡಗಂಚಿ ಮಾತನಾಡಿ, ಅಂಬೇಡ್ಕರರು ಶೋಷಿತ ವರ್ಗದ, ಸಾಮಾಜಿಕಯ ಅಸಮಾನತೆ, ಜಾತಿ ವ್ಯವಸ್ಥೆಯ ವಿರುದ್ದ ಹೋರಾಡಿದ ಮಹಾ ಚಿಂತಕರು. ದೇಶದ ಸ್ವಾತಂತ್ರ್ಯ ನಂತರ ಎಲ್ಲಾ ಸಮುದಾಯಗಳಿಗೂ ಒಪ್ಪುವಂತ ಸಂವಿಧಾನ ರಚಿಸಿದರು. ಸಾಮಾಜಿಕವಾಗಿ ಹಿಂದುಳಿದವರಿಗೆ ಖಾಸಗೀಕರಣದಿಂದ ಅನ್ಯಾಯವಾಗುತ್ತಿದೆ. ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ದಕ್ಕೆಯಾಗಿದೆ ಎಂದರು.

Contact Your\'s Advertisement; 9902492681

ದಲಿತ ಮುಖಂಡ ಮಹಾದೇವ ಮೋಘಾ, ಭಾಷಣಕಾರ ರಾಮಚಂದ್ರ ಝಂಡೆ ತಮ್ಮ ಭಾಷಣಗಳಲ್ಲಿ ಅಂಬೇಡ್ಕರವರ ವಿಚಾರಗಳನ್ನು ಎಲ್ಲರು ಅನುಸರಿಸಿ ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದರು. ವೇದಿಕೆಯ ಮೇಲೆ ವಿಜಯಕುಮಾರ ಪಾಟೀಲ, ಹಿರಿಯ ಮುಖಂಡರಾದ ಚಂಧ್ರಶಾ ಕಂಬಾರ, ನಿಂಗದಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಬಸಪ್ಪ ಪಾಟೀಲ, ಗ್ರಾ. ಪಂ. ಸದಸ್ಯ ಶರಣಬಸಪ್ಪ ಜಕಾಪುರೆ, ಚಂದ್ರಕಾಂತ ಕಡಗಂಚಿ, ಬಸವರಾಜ ಕೋಳಿ, ಚಂದ್ರಕಾಂತ ಪಾಟೀಲ, ಲಕ್ಷ್ಮಣ ರಾಮಪುರೆ, ಬಸವರಾಜ ಮೋರೆ, ಗೌರಾಬಾಯಿ ತಳಕೇರಿ ನಾಗರಾಜು ಸಿಂಗೆ ಇತರರು ಇದ್ದರು.

ಭೀಮಜ್ಯೋತ ಸಂಘದ ಲಕ್ಷ್ಮಣ ಗಾಯಕವಾಡ, ಜೆಟ್ಟಪ್ಪ ಜಂಡೆ, ಶ್ರೀಶೈಲ ತಳಕೇರಿ, ಮತ್ತಣ್ಣ ಗಾಯಕವಾಡ, ಮಾರುತಿ ತಳಕೇರಿ, ಸಿದ್ದರಾಮ ಮುಂದಿನಕೇರಿ, ಮರೆಪ್ ತಳಕೇರಿ, ಅಂಬರೀಶ ಮೈಂದರಗಿ, ರಾಜು ಸಿಂಗೆ, ರಾಜು ಮುಂದಿನಕೇರಿ, ಬಸವರಾಜ, ಶ್ರೀಶೈಲ, ಅನೀಲ್, ಕಾಂತಪ್ಪ, ಭೀಮಶಾ, ಪಂಡಿತ ಮಲ್ಲಿನಾಥ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here