ಕಲಬುರಗಿಯಲ್ಲಿ 50 ಸಾವಿರ ಕ್ಕೂ ಮೀರಿ ಹಣ ಜೊತೆ ತೆಗೆದುಕೊಂಡು ಹೋಗುವಂತಿಲ್ಲ

ಕಲಬುರಗಿ: ವಿಧಾನಸಭೆ‌ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೆ ದಾಖಲೆ, ವಿವರಣೆ ಇಲ್ಲದೆ ಯಾವುದೇ ವ್ಯಕ್ತಿ 50,000 ರೂ. ಕ್ಕಿಂತ ಹೆಚ್ಚಿನ ಹಣವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ‌ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.

ಇನ್ನು ದಾಖಲೆ‌ ಇಲ್ಲದ 10,000 ರೂ. ಮೀರಿದ ಯಾವುದೇ
ಸರಕುಗಳನ್ನು ಸಂಗ್ರಹಣೆ ಮತ್ತು ಬೃಹತ್ ಪ್ರಮಾಣದಲ್ಲಿ ಸಹ ಸಾಗಿಸುವಂತಿಲ್ಲ. ಈ ಆದೇಶ‌ ಚುನಾವಣೆ‌ ಮುಕ್ತಾಯದ ವರೆಗೆ ಜಿಲ್ಲೆಯಾದ್ಯಂತ ಜಾರಿಯಲ್ಲಿ ಇರಲಿದ್ದು, ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಶಾಂತಿಯುತವಾಗಿ ಚುನಾವಣೆ ಜರುಗಲು ಜಿಲ್ಲೆಯ ಜನತೆ ಸಹಕರಿಸಬೇಕು‌ ಎಂದು‌ ಮನವಿ ಮಾಡಿದ್ದಾರೆ.

ಚುನಾವಣೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ‌ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ ಲಂಚ ನೀಡಬಾರದು ಅಥವಾ ಹಣವನ್ನು ಲಂಚದ ರೂಪದಲ್ಲಿ ನೀಡಲು ಪ್ರಯತ್ನಿಸಬಾರದು. ಸರಕುಗಳು, ಬೆಲೆಬಾಳುವ ವಸ್ತುಗಳು, ಉಡುಗೊರೆ ಚೀಟಿಗಳು, ಸಿಮ್ ಕಾರ್ಡ್ ಬಾಕಿಗಳು, ಪ್ರಯಾಣ ಆಯೋಜನೆ, ಉಚಿತ ಆಹಾರ (ಬೇಯಿಸಿದ ಅಥವಾ ಬೇಯಿಸದ), ಮದ್ಯ ಅಥವಾ ಇತರೆ ಪಾನೀಯಗಳು, ಉಚಿತ ಇಂಧನ, ಸಬ್ಸಿಡಿ ಹೀಗೆ ಯಾವುದನ್ನು ನೀಡಬಾರದು ಮತ್ತು ಪಡೆಯಬಾರದು. ಮುಂದುವರೆದು, ಇದನ್ನು ಯಾವುದೇ ರೀತಿಯಲ್ಲಿ ಸಂಗ್ರಹಿಸಬಾರದು, ಸಾಗಿಸಬಾರದು ಹಾಗೂ ಅದಕ್ಕೆ ಪೂರಕವಾಗಿ ಸಹಾಯ ಮಾಡಬಾರದು ಎಂದು ತಿಳಿಸಿದ್ದಾರೆ.

ಇನ್ನು ವಸ್ತುಗಳನ್ನು ಮಾರಾಟ ಮಾಡುವ, ಸಂಗ್ರಹಿಸುವ, ಸ್ಟಾಕ್ ಮಾಡುವ ಅಥವಾ ಇತರೆ ರೀತಿಯ ವ್ಯವಹಾರಗಳನ್ನು ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಮೇಲಿನ ನಿಷೇಧಿತ ವಸ್ತುಗಳ ಉದ್ದೇಶಕ್ಕಾಗಿ ಯಾವುದೇ ವಹಿವಾಟು ಶಂಕಿಸಿದರೆ, ಲಿಖಿತವಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾರಾಟದ ಕುರಿತು ವರದಿ ನೀಡಬೇಕು.

ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಚಿಸಿರುವ ಸ್ಥಿರ ಕಣ್ಗಾವಲು ತಂಡಗಳು, ಚೆಕ್ ಪೋಸ್ಟ್‌ ತಂಡ, ವಿಡಿಯೋ ಕಣ್ಗಾವಲು ತಂಡ, ಫ್ಲೈಯಿಂಗ್ ಸ್ಕ್ವಾಡ್‌ಗಳು ಸಾಮಾನ್ಯ ಜನರಿಗೆ ಯಾವುದೇ ಅನಾನುಕೂಲತೆ, ಕಿರಿಕಿರಿ ಆಗದಂತೆ ಖಚಿತಪಡಿಸಿಕೊಳ್ಳಬೇಕು‌ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶದ ಉಲ್ಲಂಘನೆಯಿಂದ ಯಾರಿಗಾದರೂ ಅಡಚಣೆ, ಹಾನಿ, ಕಿರಿಕಿರಿ ಅಥವಾ ಗಾಯ ಇತ್ಯಾದಿಗಳನ್ನು ಉಂಟುಮಾಡಿದರೆ ಅಥವಾ ಮಾನವನ ಜೀವನ, ಆರೋಗ್ಯ ಅಥವಾ ಸುರಕ್ಷತೆ ಅಥವಾ ಗಲಭೆ ಅಥವಾ ಗಲಭೆಗೆ ಬೆದರಿಕೆಯನ್ನು ಉಂಟುಮಾಡುವ ಪ್ರವೃತ್ತಿಗಳನ್ನು ಸೆಕ್ಷನ್ 188 ಐ.ಪಿ.ಸಿ ಅಡಿಯಲ್ಲಿ ಪ್ರತ್ಯೇಕವಾಗಿ ಅಪರಾಧವನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಎಚ್ಚರಿಕೆ ನೀಡಿದ್ದಾರೆ.

emedialine

Recent Posts

ಜೀವನದಲ್ಲಿ ಸವಾರ್ಂಗೀಣ ಸ್ವಾಸ್ಥ್ಯ ಸಾಧಿಸಲು ಭಾರತೀಯ ಜ್ಞಾನ ವ್ಯವಸ್ಥೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಕಲಬುರಗಿ; ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ಜೀವನದಲ್ಲಿ ಸವಾರ್ಂಗೀಣ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸಾಧಿಸಲು ಎಲ್ಲಾ ಸಮಸ್ಯೆಗಳಿಗೆ ಉತ್ತರ ಮತ್ತು…

2 mins ago

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

53 mins ago

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

3 hours ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

4 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

5 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420