ಕಲಬುರಗಿ: ಮಂಡ್ಯ ಚುನಾವಣೆ ನಂತರ ಕಲಬುರಗಿ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಕಲಬುರಗಿ ಲೋಕಸಭಾ ಅಭ್ಯರ್ಥಿ ಡಾ.ಉಮೇಶ್ ಜಾದವ್ ಮತ್ತು ಖರ್ಗೆ ನಡುವೆ ನೇರ ನೇರಾ ಚುನಾವಣೆ ಹೋರಾಟ ಶುರುವಾಗಿದೆ.
ಕಳೆದ 37 ವರ್ಷಗಳ ರಾಜಕೀಯ ವೈಷಮ್ಯವನ್ನು ಮರೆತು ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಅವ ಮನೆಗೆ ಭೇಟಿ ನೀಡಿ ಸಹಕಾರ ಕೋರಿದ್ದಾರೆ. ಈಗಾಗಲೇ ಖರ್ಗೆ ಜೊತೆ ಮುನಿಸಿಕೊಂಡಿರುವ ಹಲವು ನಾಯಕರು ಅವರಿಗೆ ಸೋಲಿನ ರುಚಿ ತೋರಿಸಲು ಶತಾಯಗತಾಯ ಪ್ರಯತ್ನದಲ್ಲಿದ್ದಾರೆ.
ವೈಮನಸ್ಯಕ್ಕೆ ಸದ್ಯ ತಿಲಾಂಜಲಿ ಇಟ್ಟು ಶಾಸಕ ಶರಣಬಸಪ್ಪ ದಶನಾಪುರ, ಕೆ.ಬಿ.ಶಾಣಪ್ಪ, ಕೆ.ಸಿ.ಕೊಂಡಯ್ಯ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ನಾಗನಗೌಡ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿ ಸಹಕಾರ ಕೋರಿದ್ದಾರೆ ಎನ್ನಲಾಗುತ್ತಿದೆ.
ನಮ್ಮ ನಾಯಕರಾದ ಕುಮಾರಸ್ವಾಮಿ ಮೈತ್ರಿ ಧರ್ಮ ಪಾಲಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಇಂದಿನಿಂದ ಖರ್ಗೆ ಪರ ಪ್ರಚಾರ ನಡೆಸುತ್ತೇವೆ ಎಂದು ನಾಗನಗೌಡ ಹೇಳಿದ್ದಾರೆ.