ಬಿಸಿ ಬಿಸಿ ಸುದ್ದಿ

ಸರ್ಕಾರಿ ಆಸ್ಪತ್ರೆಯಲ್ಲಿ ಕೇರ್ ಕಂಪ್ಯಾನಿಯನ್ ಕಾರ್ಯಕ್ರಮ ಉದ್ಘಾಟನೆ

ಆಳಂದ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕೇರ್ ಕಂಪ್ಯಾನಿಯನ್ ಕಾರ್ಯಕ್ರಮವು ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಯೋಸೈದ್ ಇನ್‍ವೇಶನ್ ಫೌಂಡೇಷನ್ ಒಡೆಬಂಡಿಕೆಯ ಸಹಯೋಗದ ಕೇರ್ ಕಂಪ್ಯಾನಿಯನ್ ಕಾರ್ಯಕ್ರಮವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು.

ಆಸ್ಪತ್ರೆಯ ಡಾ. ಉಮಾಕಾಂತ ರಾಜಗೀರಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರತಿ ಹಂತದಲ್ಲಿ ಪ್ರತಿಯೊಬ್ಬರು ಆರೋಗ್ಯ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ. ಪೋಷಕಾಂಶ ಸೇವನೆ ರೋಗ ನಿರ್ಮೂಲನೆ ಮುಂಜಾಗೃತೆ ವಹಿಸಬೇಕಾಗಿರುವುದು ಅತಿ ಮುಖ್ಯವಾಗಿದೆ. ಮಹಿಳೆ ಗರ್ಭ ಧರಿಸುವ ಮೊದಲು ನಂತರ ಮತ್ತು ಹೇರಿಗೆಯ ಸಂದರ್ಭದಲ್ಲಿ ಕೈಗೊಳ್ಳುವ ಕ್ರಮವನ್ನು ತಿಳಿಸಿದರು.

ಪೌಂಡೇಷನ್ ತರಬೇತಿದಾರ ವೀಣಾ ದೇವೂರ ಅವರು ಮಾತನಾಡಿ, ಕೇರ್ ಕಂಪ್ಯಾನಿಯನ್ ಮುಖ್ಯ ಉದ್ದೇಶ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ನೋಡಿಳ್ಳುವುದಾಗಿದೆ. ಈ ಕುರಿತು ವೈದ್ಯಕೀಯ ಸಿಬ್ಬಂದಿಗಳು ಅನುಸರಿಸುವ ಕ್ರಮ ಬಹುಮುಖ್ಯವಾಗಿದೆ ಎಂದರು.

ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಸಮಸ್ಯೆ ಆಗಬಹುದು. ಸಕಾಲದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಮುಖ್ಯ, ಇದರಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಾರೆ. ಪ್ರತೀ ಎರಡು ತಿಂಗಳಿಗೆ ಒಂದು ಸಲ ಚೆಕ್ ಅಪ್‍ಗೆ ಹೋಗಿ (ಒಂಬತ್ತು ತಿಂಗಳಲ್ಲಿ ಐದು ಬಾರಿ) ನಿಮ್ಮ ತಾಯಿ ಕಾರ್ಡ್‍ನಲ್ಲಿ ಕೆಂಪು ಸಿ ಕಲ್ ಇದ್ದರೆ ಗಾಬರಿ ಆಗಬೇಡಿ! ಗರ್ಭಾವಸ್ಥೆಯಲ್ಲಿ ಸಮಸ್ಯೆ ಇದ್ದರೆ ಇದನ್ನು ಅಂಟಿಸಿರುತ್ತಾರೆ! ನಿಮಗೆ ವೈದ್ಯಕೀಯ ಆರೈಕೆ ಬೇಗನೇ ಸಿಗಲಿದೆ ಎಂದರು.

ಪ್ರತೀ ತಿಂಗಳ ಪಿಎಂಎಸ್‍ಎಂಎ ಯೋಜನೆಯಡಿಯಲ್ಲಿ • ಹೆಚ್ಚು ಅಪಾಯಕಾರಿ ಗರ್ಭಧಾರಣೆ ಆಗಿದ್ದರೆ ಪ್ರತಿ ತಿಂಗಳು 24 ರಂದು (ಎಂಡೆಡ್ ಪಿಎಮ್‍ಎಸ್‍ಎಮ್‍ಎ) 8ನೇ ತಿಂಗಳೊಳಗೆ, ಇವುಗಳನ್ನು ಸಿದ್ಧವಾಗಿಡಿ ನಿಮ್ಮ ಗರ್ಭಧಾರಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಈ ತಾಯಿ ಮತ್ತು ಮಗುವಿನ ಉಡುಪು * ನಿಮ್ಮ ಹತ್ತಿರದ ಹೆರಿಗೆ ಆಸ್ಪತ್ರೆಯ ದೂರವಾಣಿ ಸಂಖ್ಯೆ ಮತ್ತು ವಿಳಾಸ ವೈದ್ಯರಿಗೆ ಕೇಳಿ ಯಾವಾಗ ಹೆರಿಗೆ ಆಗಬಹುದು ಎಂದು ತಿಳಿದುಕೊಳ್ಳಬೇಕು ಎಂದರು.

ಈ ಆಶಾ/ಆರೋಗ್ಯ ಆರೋಗ್ಯ ಸಿಬ್ಬಂದಿಗೆ ಫೆÇೀನ್ ನಂಬರ್ ಬರೆದಿಟ್ಟುಕೊಳ್ಳಿ. ನಿಮಗೆ ಹೊಟ್ಟೆ ನೋವು ಮತ್ತು ಯೋನಿಯಿಂದ ರಕ್ತಸ್ರಾವ ಮತ್ತು ಜಿಗುಟಾದ ಸ್ನಾವ ಇದ್ದರೆ ಆರೋಗ್ಯ ಸಿಬ್ಬಂದಿಗೆ ಅಥವಾ 108 (ಅಂಬ್ಯುಲೆನ್ಸ್) ಗೆ ಕಾಲ್ ಮಾಡಿ ನಿಮ್ಮ ತಾಯಿ ಕಾರ್ಡ್ ಮೇಲೆ ಕೆಂಪು ಸ್ಟಿಕ್ಕರ್ ಇದ್ದರೆ, ನೇರವಾಗಿ ದೊಡ್ಡ ಆಸ್ಪತ್ರೆಗೆ ದಾಖಲಾಗಿ ಮುಂಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.

ನೇತ್ರತಜ್ಞ ಡಾ. ಸುನೀಲ, ಕೇರ್ ಕಾರ್ಯಕ್ರಮ ಸಂಯೋಜಕ ಡಾ. ನಿತೀನ್ ಬಿ. ದಂತ ವೈದ್ಯ ಶ್ವೇತಾ, ಸಮಾಲೋಕಿ ಪಲ್ಲವಿ ಪೂಜಾರಿ, ಸ್ಟಾಪ್‍ನರ್ಸ್ ಪ್ರೀಯಾಂಕಾ, ಹರಿಶ್ಚಂದ್ರ, ಶಿವಲೀಲಾ, ಎನ್‍ಸಿಡಿ ಕೌನ್ಸಲರ್ ಕಲ್ಯಾಣಿ, ಆಸ್ಪತ್ರೆಯ ಸಿಬ್ಬಂದಿ ಶ್ರೀಕಾಂತ ಭೂಸನೂರ, ಪ್ರಕಾಶ, ಜಾಧವ, ಶ್ರೀದೇವಿ, ಎಸ್.ಕೆ. ಪೌಂಡೇಶನ್ ಮಣಿಕಂಠ ಮತ್ತಿತರು ಇದ್ದರು. ಐಸಿಟಿಸಿ ಸಂಯೋಜಕ ಸಿದ್ಧಣ್ಣಾ ವಾಲಿ ನಿರೂಪಿಸಿ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

15 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago