ವಿಶ್ವ ಪರಿಸರ ದಿನಾಚರಣೆ

0
29

ಕಲಬುರಗಿ: ಸೋಮವಾರ ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್ ಜೆ.ಆರ್.ನಗರ ಕಲಬುರಗಿಯಲ್ಲಿನ ಸಿಬ್ಬಂದಿ ವರ್ಗ ಮತ್ತು ಅತಿಥಿಗಳಿಂದ ಹಾಗೂ ಪುಟಾಣಿ ಮಕ್ಕಳೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೈ ಎಂ.ಬಿರಾದರ್ ನುರಿತ ಶಿಕ್ಷಕರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಮನುಷ್ಯ ಸಂಕುಲ ಬದುಕಲು ಇರುವುದಂದೆ ಭೂಮಿ ಹಾಗಾಗಿ ಪರಿಸರದಲ್ಲಿನ ಗಾಳಿ ನೀರು ಮಣ್ಣು ಮರಗಳು ಕಾಡುಗಳು ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಾಳ ಮುಖ್ಯ ಆದಕಾರಣ ನಾವೆಲ್ಲರೂ ಮನೆಗೊಂದು ಮರ ಊರಿಗೊಂದು ವನ ಬೆಳೆಸಿ ಸ್ವಚ್ಛ ಪರಿಸರವನ್ನು ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ಉಳಿಸೋಣ ಎಂದು ತಿಳಿಸಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ.ಎನ್.ಮೂಲಗೆ ರವರು ಮಾತನಾಡುತ್ತಾ, ಮೊದಲಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಕೋರಿದರು ಮೊಟ್ಟಮೊದಲ ಬಾರಿಗೆ 1947 ಜೂನ್ ಐದರಂದು ಪ್ರಥಮ ಬಾರಿಗೆ ಈ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

140ಕ್ಕೂ ಹೆಚ್ಚು ದೇಶದಲ್ಲಿ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು 2023ರ ಘೋಷಣೆಯಾದ “ಪ್ಲಾಸ್ಟಿಕ್ ಮಾಲಿನ್ಯವನ್ನು ನಿಷೇಧಿಸಿ” ಆಗಿದೆ ಹಾಗಾಗಿ ನಾವು ಪ್ಲಾಸ್ಟಿಕ್ ಬಳಕೆಯನ್ನು ದಿನದಿನ ಕಡಿತಗೊಳಿಸಿ ಸ್ವಚ್ಛ ಪರಿಸರವನ್ನ ಅಣಿಗೂಳಿಸುವುದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದಕಾರಣ ಇಂದಿನ ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಿ ಸಸಿಗಳನ್ನು ನೆಡುವಂತೆ ಮಾಡಬೇಕು ಎಂದು ಹೇಳಿದರು.

ಈ ಶಾಲೆಯ ಪುಟಾಣಿ ಮಗುವಾದ ಕುಮಾರಿ ಧನುಶ್ರೀ ಭೂಮಿತಾಯಿಯ ಪಾತ್ರವನ್ನು ವಹಿಸಿ ಎಲ್ಲರ ಗಮನ ಸೆಳೆಯಿತು ಹಾಗೂ ಎಲ್ಲಾ ಮಕ್ಕಳಿಂದ ಸಸಿಗಳನ್ನು ನೆಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here