ಆಳಂದ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಪ್ರಾದೇಶಿಕ ಕಛೇರಿ ಕಲಬುರಗಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಣ್ಣೂರ್ ಇಂಧನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಳಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ ಹಂಚಿನಾಳ ಸರ್ ಅವರು ಹಾಗೂ ಅತಿಥಿಗಳಾಗಿ ಖಜೂರಿ ವಲಯದ ಶಿಕ್ಷಣ ಸಂಯೋಜಕರಾಗಿರುವ ವಿದ್ಯಾಧರ ಬಾವಿಕಟ್ಟಿ ಸರ್ ಅವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮಾಲಿನಿ ಸ್ವಾಮಿ ಅವರು ಆಯೋಜಿಸಿದ್ದರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವ್ಯಕ್ತಿಯಾಗಿ ಸಾಮಾಜ ಸೇವಕಿ ಕುಮಾರಿ – ಮಾಲಾ ದಣ್ಣೂರ್ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳು ಆಗಿರುವ ವಸಂತ್ ಪುಲಾರಿ ಸರ್ ಅವರು ವಹಿಸಿಕೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿರುವ ಸೋಮಶೇಖರ ಹಂಚಿನಾಳ ಅವರು ಮಾತನಾಡಿ ” ಕಲಿಕೆ ಎಂಬುದು ದ್ವಿಮುಖ ಪ್ರಕ್ರಿಯೆ ಇದು ಸರಿಯಾಗಿ ನಡೆಯಬೇಕು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕು ಹಾಗೂ ಪರಿಸರ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಇರುವಂತೆ ನಾವೆಲ್ಲರೂ ಕರ್ತವ್ಯವನ್ನು ನಿರ್ವಹಿಸಬೇಕು ಎನ್ನುವ ಮೂಲಕ ಹಲವಾರು ಸಲಹೆಗಳನ್ನು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ತಿಳಿಸಿದರು”.
ಈ ಕಾರ್ಯಕ್ರಮದ ಆಯೋಜಕರು ಆಗಿರುವ ಮಾಲಿನಿ ಸ್ವಾಮಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳು ಆಗಿರುವ ಕುಮಾರಿ ಮಾಲಾ ದಣ್ಣೂರ್ ಅವರು ಮಾತನಾಡಿ
ಇಂಧನ ಉಳಿಸುವ ಹಾಗೂ ಪರಿಸರ ಸಂರಕ್ಷಿಸುವ ಕುರಿತು ವಿವಿಧ ರೀತಿಯಲ್ಲಿ ಮಕ್ಕಳಿಗೆ ಸಲಹೆಗಳನ್ನು ನೀಡಿದರು ಜೊತೆಗೆ ಮಾನವ ಸಂಪನ್ಮೂಲಕ್ಕೇ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಉಳಿದ ಜೀವ ಸಂಕುಲ ಹಾಗೂ ಪರಿಸರಕ್ಕೂ ಸಹ ಪ್ರಾಮುಖ್ಯತೆಯನ್ನು ನೀಡಿ, ಉಳಿದೆಲ್ಲ ಸಂಪನ್ಮೂಲಗಳನ್ನು ಕಾಯ್ದು ಕೊಂಡು ಹೋಗುವ ಜವಾಬ್ದಾರಿ ಮನುಷ್ಯ ಸಂಕುಲದ ಮೇಲಿದೆ ಎಂದು ತಿಳಿಹೇಳಿ ಹಲವು ದೈನಂದಿನ ಚಟುವಿಕೆಗಳು ಬದಲಾಗಬೇಕಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ KREDL ನ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೂ ಕುಡಿಯುವ ನೀರಿನ ಸ್ಟೀಲ್ ಬಾಟಲ್ ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಮಕ್ಕಳಿಗೆ ಪ್ಲಾಸ್ಟಿಕ್ ನಿಂದ ಆಗುವ ಹಾನಿಯ ಕುರಿತು ತಿಳಿಸಲಾಯಿತು.
ಕಾರ್ಯಕ್ರಮವನ್ನು ಶಶಿಕಾಂತ ಎನ್ ಶೇರಿ ಸಹ ಶಿಕ್ಷಕರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಯುವಕರು ಆಗಿರುವ ದಣ್ಣೂರ ಗ್ರಾಮದ ನಾಗರಾಜ್ ಇಬ್ರಾಂಪುರ್, ಕಾರ್ತಿಕ್ ಇಬ್ರಾಂಪುರ್, ಶಾಲೆಯ ಅಡುಗೆ ಸಿಬ್ಬಂದಿಯವರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು ಜೊತೆಗೆ ಕ್ಕ್ರೆಡಲ್ ಪ್ರಾದೇಶಿಕ ಕಛೇರಿ ಸಿಬ್ಬಂದಿ ಕಿರಣ್ ಅವರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…