ಬಿಸಿ ಬಿಸಿ ಸುದ್ದಿ

ಸೂಫಿ ಸಮಾಜದ ಅವಿಭಾಜ್ಯ ಅಂಗ: ಡಾ. ರಾಯಿಸಾ ನಸರೀನ್

ಕಲಬುರಗಿ: ಹೈದಾರಾಬಾದ ಕರ್ನಾಟಕ ಪ್ರದೇಶ ಸೇರಿದಂತೆ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಸೂಫಿಗಳು ತಮ್ಮ ಉಪದೇಶಗಳ ಮೂಲಕ ಸಮಾಜವನ್ನು ಶಾಂತಿಯುತ, ಸುಂದರ ಹಾಗೂ ನಿಷ್ಕಲ್ಮಷ ಸಮಾಜ ನಿರ್ಮಾಣಕ್ಕೆ ಅಭೂತಪೂರ್ವ ಕೊಡುಗೆ ಅವರದಾಗಿದೆ ಎಂದು ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಅವರ ಜೀವನ ಚರಿತ್ರೆ ಕುರಿತು ಸಂಶೋಧನೆ ನಡೆಸಿದ ಉಪನ್ಯಾಸಕಿ ಡಾ. ರಾಯಿಸಾ ನಸರೀನ್ ತಿಳಿಸಿದರು.

ಅವರು ಸೂಫಿ ಮಾರ್ಗದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಸೂಫಿ ಎಂದರೆ ಸಮಾಜದಲ್ಲಿರುವ ಕೆಟ್ಟ ಆಲೋಚನೆ ಮತ್ತು ವ್ಯಕ್ತಿಗಳ ಮದ್ಯೆ ಉಂಟಾಗುವ ಭಿನ್ನಾಭಿಪ್ರಾಯ ತೊಳೆದು ಹಾಕಿ, ತನ್ನ ಜ್ಞಾನದ ಜ್ಯೋತಿಯಿಂದ ಸಮಾಜದಲ್ಲಿ ಸಮರಸ್ಯ ಸೃಷ್ಟಿಗೆ ಶ್ರಮಿಸುವ ಜಿದ್ಧಾಂತ ಸೂಫಿ.

ಖ್ವಾಜಾ ಅವರು “ತಸೌಉಫ್” ಮೂಲಕ ಜನರಿಗೆ ಅವರಲ್ಲಿರುವ ಆಸೆ, ಅಭಿಲಾಶೆಗಳ ಕತ್ತಲ್ಲ ಪರದೆಯನ್ನು ತೆಗೆದುಹಾಕಿ ಬದುಕಿನ ಅರ್ಥವನ್ನು ಕಲ್ಪಿಸಿ ಕುಡುತಿದ್ದರು. ಈ ಮೂಲಕ ಬಂದಾ ನವಾಜ್ (ರ.ಅ) ಅವರ ತಮ್ಮ ಅನುಯಾಯಿಗಳೊಂದಗೆ ಅವಿನೋಭಾವ ಸಂಬಂಧ ಇಟ್ಟುಕೊಳ್ಳುವ ಸೂಫಿ ಆಗಿದ್ದಾರೆ.

– ಡಾ. ರಾಯಿಸಾ ನಸರೀನ್, ಉಪನ್ಯಾಸಕಿ, ಬಿ.ಬಿ ರಾಜಾ ಮಹಿಳಾ ಪದವಿ ಕಾಲೇಜು ಕಲಬುರಗಿ.

ಈ ಸಿದ್ಧಾಂತ ಜ್ಞಾನದ ಜೊತೆಗೆ ಸಮಾಜದ ಕುರಿತು ನೀಜವಾದ ಪ್ರೀತಿ, ಕಾಳಜಿ ಹಾಗೂ ಸಮಾಜದ ಪರ ಒಲವು ಹೊಂದಿದ ವ್ಯಕ್ತಿಯ ಮೇಲೆ ಅವಲಂಬಿತವಾಗಿದ್ದು, ಜ್ಞಾನದ ಮೂಲಕ ಸಮಾಜದಲ್ಲಿರುವ ವ್ಯಕ್ತಿ ಜೀವನದ ಅಜ್ಞಾನವನ್ನು ತೊಳೆದುಹಾಕಿ, ತನ್ನ ಬದುಕನ್ನು ಸರಳೀಕರಿಸಲು ಮಾರ್ಗದರ್ಶನ ನೀಡುವ ಸಿದ್ಧಾಂತವೆ ಸೂಫಿ ಸಿದ್ಧಾಂತ ಆಗಿದೆ.

ಸೂಫಿ ಎಂಬ ಪದ ಹದೀಸ್, (ಇಸ್ಲಿಂ ವಚನ ಹಾಗೂ ತತ್ವಗಳ) ಹಾಗೂ ಕುರಾನ್ ನಲ್ಲಿ ಈ ಪದದ ಉಲ್ಲೇಖವಿದ್ದು, ಹಜರತ್ ಹಸನ್ ಬಸರಿ (ರ.ಅ) ಕಾಲದಲ್ಲಿ ಸೂಫಿ ಎಂಬ ಪದ ಸಾಮಾನ್ಯವಾಗಿ ಬಳಕೆಯಾಗಿತ್ತು. ನಂತರ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಈ ಸಿದ್ಧಾಂತವನ್ನು ಉತ್ತರ ಕರ್ನಾಟಕ ಭಾಗದ ದಖ್ಖನ್ ಪ್ರದೇಶದಲ್ಲಿ ಹರಡಿಸಿ ಪರಿಚಯಿಸಿದರು.

ಹಜರತ್ ಖ್ವಾಜಾ ಬಂದಾ ನವಾಜ (ರ.ಅ) ಕಾಲದಲ್ಲಿ ಜನರು ಅವರ ಉಪದೇಶ ಕುತೂಹಲದಿಂದ ಕೇಳುತಿದ್ದು, ಅಲ್ಲದೇ ಅವರ ನೀಡಿರುವ ಸಲಹೆ ಜೀವನದಲ್ಲಿ ಅಳವಡಿಸಿಕೊಂಡು, ಚಾಚು ತಪ್ಪದೆ ಪಾಲಿಸುತಿದ್ದರು. ಹಜರತ್ ಖ್ವಾಜಾ ಅವರು ತಮ್ಮ ಜೀವನ ಕಾಲದಲ್ಲಿ ಯಾವುದೇ ಅಸಭ್ಯ ಭಾಷೆ ಹಾಗೂ ವರ್ತನೆಗೆ ಕಟುವಾಗಿ ಖಂಡಿಸಿದರು.

ಸೂಫಿಯ ಜೀವನದಲ್ಲಿ ಮೂಖ್ಯವಾಗಿ “ತಸೌಉಫ್” ಸಿದ್ದಾಂತವನ್ನು ಅನುಸರಿಸುತಾರೆ. ತಸೌಉಫ್ ಎಂದರೆ ಅಪಾರ ಜ್ಞಾನ ಭಂಡಾರದ ಸಂಶೋದನಾತ್ಮಕ ಶಕ್ತಿ ಹಾಗೂ ಗುಣಾತ್ಮಕ ಶಕ್ತಿ ಎ “ತಸೌಉಫ್” ಸಿದ್ಧಾಂತ, “ದೀಲ್: (ಮನಸ್ಸು) ಶುದ್ಧ ಮನಸ್ಸು ಹಾಗೂ “ರೂಹು” (ಆತ್ಮದ) ಶುದ್ಧ ಆತ್ಮದ ಗುಣಗಳು ಈ ಮೂರು ಮುಖ್ಯವಾಗಿದವು.

  1. “ತಸೌಉಫ್”: ತಸೌಉಫ್ ಒಂದು ಆತಂರಿಕ ಶಕ್ತಿ ಮತ್ತು ಸಂಶೋದನಾತ್ಮಕ ಜ್ಞಾನ ಹೊಂದಿರುವ ಜ್ಞಾನದ ಭಂಡಾರ ಶಕ್ತಿಯಾಗಿದೆ.
  2. “ದಿಲ್” (ಮನಸ್ಸು): ತಸೌಉಫ್ ಮೂಲಕ ಸಮಾಜದಲ್ಲಿ ಕೆಟ್ಟ ಪರಿಣಾಮ ಬಿರುವುದು ಮನಸ್ಸಿನಲ್ಲಿರು ಕಲ್ಮಷ ಹಾಗೂ ಕೆಟ್ಟ ಆಲೋಚನೆ ಮತ್ತು ಇತರರ ಬಗ್ಗೆ ಇರುವ ಅಸಹಿಣ್ಣುತೆಗಳಿಂದ ಮುಕ್ತಿ ಗೊಳಿಸಿ, ಗುಣಾತ್ಮಕ ಆಲೋಚನೆಗಳ ಜ್ಞಾನದ ಬೆಳಕ್ಕಿನಡೆಗೆ ಮಿಡಿಯು ಮನಸ್ಸು.
  3. “ರೂಹು” (ಆತ್ಮದ) ಆತ್ಮ ಹಾಗೂ ವ್ಯಕ್ತಿಯ ವ್ಯಕ್ತಿತ್ವದ ಆಹಂಕಾರವನ್ನು ತೊಳೆದು ಹಾಕುವ ಮೂಲಕ ಶುದ್ಧ ಆತ್ಮವನ್ನು ನಿರ್ಮಿಸಿಕೊಳುವುದೆ ರೂಹು.

ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಅವರು ಜ್ಞಾನದ ಬೆಳಕ್ಕಿನ ಮೂಲಕ ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ತಮ್ಮ ಜ್ಞಾನದ ಜ್ಯೋತಿಯಿಂದ ಆಶ್ರಯ ನೀಡಿದ್ದು, ಅಲ್ಲದೇ ಅವರು ತಮ್ಮ ಜೀವನಕಾಲದಲ್ಲಿ ವ್ಯಕ್ತಿಗಳಿಗೆ ತಮ್ಮ ವ್ಯಕ್ತಿತ್ವ ಮತ್ತು ಆತ್ಮದ ಶುದ್ಧಿಗೆ ಪ್ರೇರೆಪಣೆ ನೀಡಿದವರಾಗಿದ್ದಾರೆ.

ಖ್ವಾಜಾ ಬಂದಾ ನವಾಜ್ ಅವರು ಜನರೊಂದಿಗೆ ಸಂಪೂರ್ಣವಾಗಿ ಬೆರೆಯುದ್ದು, ಅಲ್ಲದೇ ಅವರಿಗೆ ಕಷ್ಟ ನೀಡಿದನ್ನು ಮರೆಯುವ ಗುಣ ಹೊಂದಿದರು.

ಪರಿಪೂರ್ಣ ಮನುಷ್ಯ ಅಥವಾ ವ್ಯಕ್ತಿ ಯಾರು?: ಸಮಾಜದಲ್ಲಿ ಯಾವು ವ್ಯಕ್ತಿ ಎಲ್ಲರೊಂದಿಗೆ ಬೆರೆಯುತ್ತಾನೋ, ಎಲ್ಲರನ್ನು ಪ್ರೀತಿಸುತ್ತಾನೋ, ಎಲ್ಲರನ್ನು ಗೌರವಿಸುತ್ತಾನೋ, ಎಲ್ಲವನ್ನು ಸಹಿಸುತ್ತಾನೋ ಹಾಗೂ ಸಮಾಜದಲ್ಲಿ ಇತರರು ನೀಡಿರುವ ಕಷ್ಟ ಕರ್ಮಗಳನ್ನು ಮರೆಯುವ ಗುಣ ಹೊಂದಿರುತ್ತಾನೋ ಅವನೇ ಪರಿಪೂರ್ಣ ವ್ಯಕ್ತಿ ಎಂದರು.

ಬಂದಾ ನವಾಜ್ (ರ.ಅ) ಅವರು ಬರೆದಿರುವ ಸಾವಿರಾರು ಪುಸ್ತಕಗಳ ಅಧ್ಯಾಯನದ ಮೂಲಕ ಅಜ್ಞಾನ ಕತ್ತಲಿಂದ ಹೊರಬಂದು ಜ್ಞಾನ ಜೋತಿಯ ಪಡೆಯಬಹುದಾಗಿದೆ. ಸೂಫಿಗಳಿಗೆ ಯಾರು ಪರಿಕಿಯರಲ್ಲ ಎಂಬುದು ಖ್ವಾಜಾ ಅವರ ಜೀವನ ಚರಿತ್ರೆಯಿಂದ ತಿಳಿಯಬಹುದ್ದಾಗಿದೆ. ಪ್ರತಿಯೊಂದು ಪವಿತ್ರ ಆತ್ಮದೊಂದಿಗೆ ಅವರ ಆತ್ಮೀಯತೆ ಹಾಗೂ ಅವಿನೋಭಾವದ ಸಂಬಂಧ ಹೊಂದಿದ್ದಾರೆ ಎಂಬುದು ಅವರ ಅಧ್ಯಾಯನ ಹಾಗೂ ಬರಹದಿಂದ ತಿಳಿಯಬಹುದಾಗಿದೆ.

ನಿರೂಪಣೆ: ಸಾಜಿದ್ ಅಲಿ

ಮೊ: 9902492681

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago