ಶಹಾಬಾದ: ತಾಲೂಕಿನ ಭಂಕೂರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಶರಣಬಸಪ್ಪ ಧನ್ನಾ ಹಾಗೂ ಉಪಾಧ್ಯಕ್ಷರಾಗಿ ಭಾಗಮ್ಮ ಮಲ್ಲಿಕಾರ್ಜುನ ಸೋಮವಾರ ಅಧಿಕಾರ ವಹಿಸಿಕೊಂಡರು.
ಈ ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮಾತನಾಡಿ, ಜನರ ಹಾಗೂ ಗ್ರಾಪಂ ಸದಸ್ಯರ ಆಶೀರ್ವಾದದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ. ಜನರ ಆಶೋತ್ತರಗಳಿಗೆ ಮತ್ತು ಚುನಾಯಿತ ಸದಸ್ಯರ ಧ್ವನಿಗೆ ಸ್ಪಂದಿಸುವ ಕೆಲಸ ಅಧ್ಯಕ್ಷರಿಂದಾಗಬೇಕು.ಆಗಲೇ ಆಡಳಿತ ಸುಲಲಿತವಾಗುತ್ತದೆ. ಇಲ್ಲಿ ಪಕ್ಷಾತೀತವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಗ್ರಾಮದ ಪ್ರತಿಯೊಂದು ವಾರ್ಡಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವರಿಕೆ ಮಾಡಿ ಹೆಚ್ಚಿನ ಅನುದಾನ ತರುವುದರ ಮೂಲಕ ಗ್ರಾಮದ ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಅಧಿಕಾರ ಸ್ವೀಕರಿಸಿಮಾತನಾಡಿದ ಶರಣಬಸಪ್ಪ ಧನ್ನಾ, ನನ್ನ ಅಧಿಕಾರದ ಅವಧಿಯಲ್ಲಿ ಮೂಲಭೂತವಾಗಿ ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ.ನಂತರ ರಸ್ತೆ ಇನ್ನೀತರ ಕೆಲಸಗಳಿಗೆ ಮನ್ನಣೆ ನೀಡುತ್ತೆನೆ. ಭಂಕೂರ ಗ್ರಾಪಂಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಅದಕ್ಕೆ ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರ ಅಗ್ತಯ ಎಂದು ಹೇಳಿದರು.
ಸುರೇಶ್ ಮೆಂಗನ, ಅಜೀತ ಪಾಟೀಲ, ಮಹ್ಮದ ಖದೀರ, ಶಬ್ಬೀರ ಪಟೇಲ, ಮುಜಾಹಿದ್ ಹುಸೇನ್ ಮಾತನಾಡಿದರು. ಈರಣ್ಣ ಗುಡೂರು, ಭೀಮಯ್ಯ ಗುತ್ತೆದಾರ, ಯಶವಂತ ಚಹ್ವಾಣ, ಅಣ್ಣಪ್ಪ ಸರಡಗಿ, ಶರಣಗೌಡ ದಳಪತಿ, ಮಲ್ಲಿಕಾರ್ಜುನ ನಾಲವಾರ, ಮಲ್ಲಿಕಾರ್ಜುನ ಧರಿ, ವಿಜಯಲಕ್ಷ್ಮೀ ವಗ್ಗನ, ರಮೇಶ ಮಲಕೂಡ ಹಡಪದ, ದೇವರಾಜ ರಾಠೋಡ, ಸಿಬ್ಬಂದಿಗಳಾದ ಪಿಡಿಒ ರೇವಣಸಿದ್ದಪ್ಪ ಕಲಶೇಟ್ಟಿ, ಕಾರ್ಯದರ್ಶಿ ಗುರುಪಾದಪ್ಪ ವಾರದ, ಚಿತ್ರಶೇಖರ ದೇವರ, ಗ್ರಾ. ಪಂ. ಸದಸ್ಯರಾದ ಶಕೀಲ್, ಸಾಜೀದ, ಶ್ರೀಮತಿ ಗಂಗಾರಾಮ, ಮುನ್ನಾ ಪಟೇಲ, ವಿಜಯಕುಮಾರ ಮುತ್ತಗಿ, ನಿಂಗಪ್ಪ ನಂದಿಹಳ್ಳಿ, ಶಾಮರಾವ ವಗ್ಗನ, ಶಕೀಲ್, ಸಾಜೀದ, ನಾಗರಾಜ ವಾಘಮೋರೆ, ಶ್ರೀಧರ ಕೊಲ್ಲೂರ ಇದ್ದರು. ಭರತ ಧನ್ನಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…