ಬಿಸಿ ಬಿಸಿ ಸುದ್ದಿ

ಜಾನಪದ ಸಾಹಿತ್ಯದಲ್ಲಿ ಮೌಲ್ಯ ಅಡಗಿದೆ

ಚಿತ್ತಾಪುರ; ಜಾನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಗಿದೆ. ಬದುಕಿನ ಅವಿಬಾಜ್ಯ ಅಂಗವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಾಕಟ್ಟಿ ಹೇಳಿದರು.

ಪಟ್ಟಣದ ಎನ್‍ಇಎಸ್ ಪ್ರೌಢ ಶಾಲೆಯಲ್ಲಿ ಮಂಗಳವಾರ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆ ಹಾಗೂ ಜಾನಪದ ಕಲಾವಿದರಿಗೆ ಸನ್ಮಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಜನರ ಬಾಯಿಂದ ಬಾಯಿಗೆ ಬಂದಿದೆ. ಅನೇಕ ಜಾನಪದ ಕಲಾವಿದರು ಅನಕ್ಷರಸ್ಥರಾಗಿದ್ದರು. ಅವರು ಜಾನಪದ ಹಾಡುಗಳನ್ನು ಹಾಡಿ ಜಾನಪದ ಕಲೆ ಸಾಹಿತ್ಯ ಉಳಿಸುತ್ತಿದ್ದಾರೆ. ಜಾನಪದ ಕಲಾವಿದರಿಗೆ ಪೊತ್ಸಾಹಿಸ ಸಿಗುತ್ತಿಲ್ಲ, ಇಂದು ಜಾನಪದ ಕಲೆಗಳು ಕಣ್ಮೆರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಎಲ್ಲರು ಜಾನಪದ ಕಲೆ ಉಳಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಹಿರಿಯ ಜಾನಪದ ಕಲಾವಿದ ಬುಗ್ಗಪ್ಪ ಪೂಜಾರಿ ನಾಗರ ಪಂಚಮಿ ಹಾಡು ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮಾತನಾಡಿ, ಮುಂಬರುವ ದಿನಗಳಲ್ಲಿ ಅನೇಕ ಜಾನಪದ ಕಾರ್ಯಕ್ರಗಳನ್ನು ಹ ಮ್ಮಿಕೊಂಡು ಕಲಾವಿದರಿಂದ ಪ್ರದರ್ಶನ ಮೂಲಕ ಅವರನ್ನು ಪರಿಚಯಿಸುವ ಕೆಲಸ ಮಾಡಲಾಗುವದು ಎಂದರು.
ಪುರಸಭೆ ಸದಸ್ಯ ಶಾಮ ಮೇಧಾ, ಆಧ್ಯಕ್ಷತೆವಹಿಸಿದ್ದ ಶಾಲೆಯ ಮುಖ್ಯಗುರು ಪ್ರಕಾಶ ಪಾಟೀಲ್ ಮಾತನಾಡಿದರು.

ಜಾನಪದ ಕಲಾವಿದರಿಗೆ ಸನ್ಮಾನ: ತಾಲೂಕಿನ ಜಾನಪದ ಕಲಾವಿದರಾದ ಸಿದ್ದಣ್ಣ ಸ್ವಾಟಿ, ನದಿಮಸಾಬ ಮುಲ್ಲಾ ಭಂಕಲಗಿ, ಲಕ್ಷ್ಮಣ ಕಂಬಾರ ಮರಗೋಳ, ಮುನಿಯಮ್ಮ ಚಿತ್ತಾಪುರ, ಹಣಮವ್ವ ಗುತ್ತೇದಾರ ಅವರಿಗೆ ಶಾಲು ಹೊದಸಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ರಾಮಲಿಂಗ ಪ್ಯಾಟಿ ಕೊಲ್ಲೂರ, ತಿಮ್ಮರಾಯ ಭೀಮಹಳ್ಳಿ, ಶ್ವೇತಾ ಪಾಟೀಲ್, ಸುಲೋಚನಾ, ಶರಣಪ್ಪ ಕೋರವಾರ, ಭೀಮರಾಯ ಕರದಾಳ, ಶಿಕ್ಷಕರಾದ ಸಾಗರ, ಸಿದ್ದಾರೂಢ, ಕಸ್ತೂರಿಬಾಯಿ ಇದ್ದರು. ಶಿಕ್ಷಕ ಶಂಕರ ಬಡಿಗೇರ ಸ್ವಾಗತಿಸಿದರು, ಗಂಗಣ್ಣ ಹೊಸ್ಸೂರ ನಿರೂಪಣೆ. ಲಿಂಗಣ್ಣ ಮಲ್ಕನ್ ವಂದಿಸಿದರು.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

2 hours ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

2 hours ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

2 hours ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

2 hours ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

2 hours ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

2 hours ago