ತವಗ, ಕಡ್ಡೋಣ, ರೋಡಲಬಂಡ ಗ್ರಾಮಗಳಿಗೆ ತಾಲೂಕು ಅಧಿಕಾರಿಗಳ ಭೇಟಿ

0
224

ಹಟ್ಟಿ: ಸಮೀಪದ ಕಡ್ಡೋಣ ತವಗ ಸೇರಿದಂತೆ ರೊಡಲಬಂಡಾ ಗ್ರಾಮ ಪಂಚಾಯಿತಿಯ ಇತರೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ), ಕರ್ನಾಟಕ ಪ್ರಾಂತ ರೈತ ಸಂಘಟನೆ (ಕೆಪಿಆರ್ಎಸ್), ಕರ್ನಾಟಕ ಪ್ರಾಂತ ಕೂಲಿಕಾರ ಸಂಘಟನೆ ಸಂಘಟನೆಗಳ ನೇತೃತ್ವದಲ್ಲಿ ಎಸಿ ಕಚೇರಿ ಮುಂದೆ ಪ್ರತಿಭಟನಾ ಧರಣಿಗೆ ಸ್ಪಂದಿಸಿ ತಾಲೂಕಿನ ವಿವಿಧ ಅಧಿಕಾರಿಗಳು ಇಂದು ಕಡ್ಡೋಣ, ತವಗ, ರೋಡಲಬಂಡಾ ಗ್ರಾಮಗಳಿಗೆ ಭೇಟಿ ಸಭೆ ನಡೆಸಿ ಸಮಸ್ಯೆಗಳನ್ನು ಪರೀಶಲನೆ ನಡೆಸಿ ನಿಗದಿತ ಸಮಯದಲ್ಲಿ ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್ ಮಾತನಾಡಿ, ಪ್ರತಿಭಟನೆ ಮುಗಿದು 15 ದಿನಗಳು ಕಳೆಯುತ್ತಾ ಬಂದರು, ಅಧಿಕಾರಿಗಳು ನೀವು ಹೋರಾಟದ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ನಿರ್ಲಕ್ಷ ವಹಿಸುತ್ತಾ ಬಂದಿದ್ದೀರಿ ಎಂದು ತರಾಟಗೆ ತೆಗೆದುಕೊಂಡರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡವಾಗಿರುವ ವಿದ್ಯುತ್ ಕಂಬವನ್ನು ಇಂದೇ ತೆರವು ಗೊಳಿಸುವ ಬಗ್ಗೆ ಮಾಹಿತಿ ನೀಡಿದರು.
ಕೆಟ್ಟು ನಿಂತ ರೋಡಲಬಂಡ, ಯಲಗಟ್ಟ ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕ ದ ದುರಸ್ಥಿ ಗೊಳಿಸಲು ಇಓ ಅವ್ರು ಸೂಚಿಸಿದರು. ಈ ಮೂರು ಗ್ರಾಮಗಳಿಗೆ ಸಿಸಿ ರಸ್ತೆ, ನೀರು, ಶಾಲೆಯ ಇತರೆ ಸಮಸ್ಯೆಗಳ ಬಗ್ಗೆ ಹಂತ ಹಂತವಾಗಿ ಪರಿಶೀಲಿಸಿ ಪರಿಹರಿಸುವುದಾಗಿ ಹೇಳಿದರು.

ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಯಾದವ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜೆಸ್ಕಾಂನ ವಿಭಾಗೀಯ ಅಧಿಕಾರಿ ಬನ್ನೆಪ್ಪ, ಸಾರಿಗೆ ಇಲಾಖೆಯ ಕಂಟ್ರೋಲರ್ ದೇವಪ್ಪ, ಜಿಲ್ಲಾ ಪಂಚಾಯತ್ ಜೆ ಇ ತಿಪ್ಪಣ್ಣ, ಆರೋಗ್ಯ ಇಲಾಖೆಯ ಅಧಿಕಾರಿಹಾಗೂ ಸಿಬ್ಬಂದಿ, ಗ್ರಾಪಂ ಪಿಡಿಒ ಸಂಗನಗೌಡ, ಪಂಚಾಯ್ತಿಯ ಸಿಬ್ಬಂದಿ, ತವಗ ಕೆಪಿ ಆರ್ ಎಸ್ ಘಟಕದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಬಸವರಾಜ, ಉಪಾಧ್ಯಕ್ಷ ಮಲ್ಲಣ್ಣ ಪರಸರಡ್ಡಿ, ಡಿವೈಎಫ್ಐ ಮುಖಂಡರಾದ ಕಾಶಿಪತಿ, ಶಂಕರ್, ಸಿದ್ದಣ್ಣ, ಸಂತೋಷ್ ಕಡ್ಡೋಣಿ, ದುರುಗಪ್ಪ, ರಂಗಪ್ಪ, ದವಲ್ ಸಾಬ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here