ನಾಗರಿಕ ಪ್ರಜ್ಞೆ ಉತ್ತಮ; ಚೀನಾದಲ್ಲಿ ಶೇ. 90ರಷ್ಟು ರಸ್ತೆಗಳು ಚೆನ್ನಾಗಿವೆ. ಅಲ್ಲಿನ ಜನರಿಗೆ ಸವಿಕ್ ಸೆನ್ಸ್ ಜಾಸ್ತಿ ಇದೆ. ಒಂದು ಬಾರಿ ಶೌಚಾಲಯ ಮಾಡಿದರೆ ಸಾಕು ಎಲ್ಲವೂ ಅಟೋಮೆಟಿಕ್ ಬಾಡಿ ಚೆಕ್‍ಅಪ್ ಆಗುವ ಮೂಲಕ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತುಕೊಟ್ಟಿರುವುದು, ಬೊಜ್ಜು ಕಡಿಮೆ ಇರುವ ಜನ ಕಚೇರಿ ಸಮಯ ನಿರ್ವಹಣೆ ಕೂಡ ಕಟ್ಟು ನಿಟ್ಟಾಗಿ ಪಾಲಿಸುವುದು ಕಂಡು ಬಂದಿತು ಎಂದು ಡಾ. ತಂಗಾ ಚಿತ್ರ ಸಮೇತ ತೋರಿಸಿದರು.
ಕಲಬುರಗಿ: ಮುಂಬೈನಿಂದ ಟಿಬೆಟ್ ಹಾಗೂ ಚೀನಾ ದೇಶಕ್ಕೆ ಸುಮಾರು 8000 ಕಿ.ನೀ. ಪ್ರಯಾಣವನ್ನು ಸೆಲ್ಫ್ ಡ್ರೈವ್ ರೋಡ್ ಟ್ರಿಪ್ ಅನ್ನು ಇಲ್ಲಿನ ಡಾ. ಶರದ್ ತಂಗಾ ಅವರು ಮೂರು ದೇಶಗಳ ನೂರು ಅನುಭವಗಳನ್ನು ಬಿಚ್ಚಿಟ್ಟರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ವೀಸಾ ಪರವಾನಗಿ ಪಡೆಯುವುದರಿಂದ ಹಿಡಿದು ಅಲ್ಲಿನ ರಸ್ತೆ, ಮೂಲಸೌಕರ್ಯ, ಶಿಖರಗಳು, ಜನರ ಶಿಸ್ತು, ಪರಿಶ್ರಮ ಇತ್ಯಾದಿಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
5 ಶಿಖರಗಳು, 16ರಿಂದ 17 ಸಾವಿರ ಫೀಟ್‍ನಷ್ಟು ಎತ್ತರದ ಶಿಖರಗಳನ್ನು ಸುಮಾರು 15 ತಾಸುಗಳವರೆಗೆ ಕಾರ್ ಮೂಲಕ ಹತ್ತುವುದು ಇವೆಲ್ಲವೂ ರೋಮಾಂಚನದ ಗಳಿಗೆಗಳಾಗಿದ್ದವು. ಮೇಲಾಗಿ ಅಷ್ಟು ದಿನಗಳವರೆಗೆ ಆರೋಗ್ಯ ಕಾಪಾಡಿಕೊಂಡು ಬರುವುದು ಇವೆಲ್ಲವೂ ದೊಡ್ಡ ಸವಾಲುಗಳಾಗಿದ್ದವು ಎಂದು ವಿವರಿಸಿದರು.
ವಾಹನದ ಸ್ಪೇರ್ ಪಾಟ್ಸ್‍ಗಳನ್ನು ಏರ್ ಲೈನ್ ಮೂಲಕ ತರಿಸಿ ಆ ದೇಶಗಳ ಸಾಫ್ಟ್ ವೇರ್ ಮೂಲಕ ಗಾಡಿ ದುರಸ್ತಿ ಮಾಡಿಸಿಕೊಂಡಿದ್ದು, 46 ಕಿ.ಮೀ.ವರೆಗಿನ ಸುರಂಗಮಾರ್ಗದಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಅನೇಕ್ ಟಾಸ್ಕ್‍ಗಳು ಎದುರಾದವು ಎಂದು ತಮ್ಮ ಪ್ರವಾಸದ ರೋಚಕ ಕ್ಷಣಗಳನ್ನು ಪವರ್ ಪಾಯಿಂಟ್ ಮೂಲಕ ಪ್ರಸ್ತುತಪಡಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ವೈವಿದ್ಯತೆ ಕಂಡು ಬರುತ್ತಿದ್ದರೂ ಟಿಬೆಟಿಯನ್ ಸಮಸ್ಯೆ, ಮಾನವ ಹಕ್ಕು ದಮನ, ಸಂಸ್ಕøತಿ ಬೇಧ ಇತ್ಯಾದಿ ನ್ಯೂನತೆಗಳು ಕಂಡು ಬಂದವು ಎಂದು ತಮ್ಮ ಆ ಸಾಹಸಮಯ ಪ್ರಯಾಣವನ್ನು ತೆರೆದಿಟ್ಟರು.
ಕಲಬುರಗಿ ; ಗ್ರಾಮೀಣಾಭಿವೃದ್ಧಿ ಪಂಚಾಯತ, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ಬುದ್ಧ ವಿಹಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕಿನ ಯಾಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…
ಶಹಾಬಾದ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ. ನಾರಾಯಣಗೌಡ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಆನಂದ ದೊಡ್ಡಮನಿ ಹಾಗೂ…
ಶಹಾಬಾದ: ನಗರಸಭೆ ವಾರ್ಡ ನಂ. 3 ರ ಉಪಚುನಾವಣೆ ಪ್ರಯುಕ್ತ ಗುರುವಾರ ಬೆಳಿಗ್ಗೆ ಕಲಬುರಗಿ ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮಡು…
ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…