ಶೋಷಿತ ವರ್ಗಗಕ್ಕೆ ಬೆಳಕಾದ ಸಾವಿತ್ರಿಬಾಯಿ ಫುಲೆ : ಪ್ರೊ, ಕಾಂಬಳೆ

0
88

ಕಲಬುರ್ಗಿ : ಸಾಮಾಜಿಕ ಮೌಢ್ಯ, ಕಂದಾಚಾರ ಮತ್ತು ಸಾಮಾಜಿಕ ನಿಷೇಧಗಳಿಂದ ತತ್ತರಿಸಿ ಹೋಗಿದ್ದ ಬಹುಸಂಖ್ಯಾತ ಅನಕ್ಷರಸ್ಥರ, ಮುಗ್ಧ ಮತ್ತು ಅರಿವು ಇಲ್ಲದ ಶೂದ್ರಾತೀಶೂದ್ರ ಜಾತಿಯ ಜನರಿಗೆ ಶಿಕ್ಷಣ ನೀಡಿ ಅರಿವು ಮೂಡಿಸಿ ಶೋಷಿತ ವರ್ಗಗಕ್ಕೆ ಬೆಳಕಾದ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ, ವಿ.ಟಿ ಕಾಂಬಳೆ ಹೇಳಿದರು.

ಕಲಬುರಗಿ ನಗರದ ಮಾನ್ಯವಾರ್ ದಾದಾ ಸಾಹೇಬ್ ಕಾನ್ಛೀರಾಮ ಪದವಿ ಮಹಾವಿದ್ಯಾಲಯದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಅಂದಿನ ಕಾಲದಲ್ಲಿ ಸಂಪ್ರದಾಯ ಶೀಲ ಸನಾತನವಾದಿಗಳ ಉಪಟಳ ಮಾನಸಿಕ ಹಿಂಸೆ, ಕಿರುಕುಳ, ದೈಹಿಕ ದೌರ್ಜನ್ಯವನ್ನು ಸಹಿಸಿಕೊಂಡು ಶೋಷಿತ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ರಾಂತಿ ಮಾಡಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಅವರನ್ನು ಇಂದು ನಾವೆಲ್ಲರೂ ಸ್ಮರಿಸುವ ದಿನ ಆಗಿದೆ.

Contact Your\'s Advertisement; 9902492681

ಮಹಿಳೆಯರ ಸ್ವಾವಲಂಬಿತನಕ್ಕೆ ಮುಖ್ಯವಾಗಿ ವಿಧವೆಯರ ಕಲ್ಯಾಣಕ್ಕೆ ಫುಲೆ ದಂಪತಿಗಳು ಮಾಡಿದ ಪ್ರಯತ್ನವನ್ನು ಅನನ್ಯ. ಜಾತಿಯಿಂದ ಗುಣವನ್ನು ಅಳೆಯುವ ದುಷ್ಟ ಪದ್ಧತಿಯನ್ನು ಅವರು ಖಂಡಿಸಿದರು. ಅವರ ಹೋರಾಟ ಬ್ರಾಹ್ಮಣ ಶಾಹಿತ್ವದ ವಿರುದ್ಧವೇ ಹೊರತು ಬ್ರಾಹ್ಮಣರ ವಿರುದ್ಧ ಆಗಿರಲಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಕಾಂಬಳೆ ವಹಿಸಿದ್ದರು. ಕೆ. ನವರಂಗ, ಪ್ರಸಾದ ಅಷ್ಟಗಿಕರ್ , ಈರಮ್ಮ ಪಾಟೀಲ, ಭೀಮೇಶ, ಚಂದ್ರಶೇಖರ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here