ಬಿಸಿ ಬಿಸಿ ಸುದ್ದಿ

ತರಬೇತಿ ಪಡೆದು ಸ್ವಾವಲಂಬಿ ಸ್ವಾಭಿಮಾನಿಗಳಾಗಿ ಜೀವನ ನಡೆಸಿ; ಗಂಜಗಿರಿ

ಚಿಂಚೋಳಿ: ಮನುಷ್ಯರು ಯಾವುದೇ ಒಂದು ಕ್ಷೇತ್ರದಲ್ಲಿ ತಾವಂದುಕೊಂಡಿದ್ದನ್ನು ಸಾಧಿಸಿ ಗುರಿ ಮುಟ್ಟಬೇಕಾದರೆ ತರಬೇತಿಯಿಂದ ಮಾತ್ರ ಸಾಧ್ಯವೆಂದು ಬಾಂಸೆಪ ಮತ್ತು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ನವದೇಹಲಿ ಬೆಂಗಳೂರು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಗಂಜಗಿರಿರವರು ಚಿಂಚೋಳಿ ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕಲಬುರ್ಗಿಯವರ ವತಿಯಿಂದ ಹತ್ತು ದಿನಗಳ ಕಾಲ ಹಮ್ಮಿಕೊಂಡ ಕುರಿ ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಉನ್ನತ ವ್ಯಾಸಂಗ ಮಾಡಿ ನಿರುದ್ಯೋಗಿಯಾಗಿದ್ದವರು ಜೀವನದಲ್ಲಿ ಬದುಕುವ ಭರವಸೆ ಕಳೆದುಕೊಂಡವರು ಕುರಿ ಮತ್ತು ಇನ್ನಿತರ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬಿ ಆದರ್ಶದ ಬದುಕು ಮಾಡುತ್ತಿದ್ದಾರೆ ಜಿಲ್ಲಾ ಕೇಂದ್ರಗಳಲ್ಲಿ ಹೋಗಿ ಗ್ರಾಮೀಣ ಭಾಗದ ಜನರಿಗೆ ತರಬೇತಿ ಪಡೆಯುವುದು ಕಷ್ಠವೆಂದರಿತ ಸಂಸ್ಥೆಯವರು ಗ್ರಾಮೀಣ ಭಾಗದಲ್ಲಿ ಈ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ ಆದ್ದರಿಂದ ಆಯ್ಕೆಯಾದ ಪಲಾನುಭವಿಗಳು ತಪ್ಪದೆ ತರಬೇತಿಯಲ್ಲಿ ಭಾಗವಹಿಸಿ ಸರ್ಕಾರದ ಲಾಭವನ್ನು ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕು ಮಾಡಬೇಕೆಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತರಬೇತಿಯ ಮುಖ್ಯಸ್ಥ ತರಬೇತುದಾರರಾದ ಅರ್ಜುನರಾವ ರವರು ನಮ್ಮ ದೇಶವು ಇತರ ದೇಶಗಳಂತೆ ಅಭಿವೃದ್ಧಿಯಾಗಬೇಕಾದರೆ ನಾವು ಮೊದಲು ಗ್ರಾಮೀಣ ಭಾಗಕ್ಕೆ ಒತ್ತು ಕೊಟ್ಟಾಗ ಮಾತ್ರ ಸಾದ್ಯವೆಂಬ ರಾಷ್ಟ್ರಪೀತ ಮಾಹತ್ಮ ಗಾಂಧೀಜಿಯವರ ಕನಸ್ಸಿನಂತೆ ಇಂದು ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಯುವಕರಿಗೆ ವಾಹನ ರಿಪೇರಿ ಮೊಬೈಲ್ ರಿಪೇರಿ ಬಡಿಗೆತನ ಕಂಬಾರಿಕೆ ಕುಂಬಾರಿಕೆ ಮತ್ತು ವಿಶೇಷವಾಗಿ ಯುವತಿಯರಿಗೆ ಮಹಿಳೆಯರಿಗೆ ವಿಧವೆಯರಿಗೆ ಸುಮಾರು ಬಗೆಯ ತರಬೇತಿಗಳನ್ನು ನೀಡುತ್ತಾ ಸಮಾಜದಲ್ಲಿ ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿ ಬದುಕು ತಲೆಯೆತ್ತಿ ಬದುಕು ಮಾಡುವಂತೆ ತಯ್ಯಾರು ಮಾಡುವಲ್ಲಿ ನಮ್ಮ ಸಂಸ್ಥೆಯು ಮುನ್ನುಗ್ಗುತ್ತಿದೆ ಆದ್ದರಿಂದ ತಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಸಂಸ್ಥೆಯ ಕಾರ್ಯಕರ್ತರಾದ ಭಾರತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗೈಬಣ್ಣಾ ವಾಲಿಕಾರ ಗ್ರಾ ಪಂ ಸದಸ್ಯರಾದ ಇಮಾಮ್ ಪಟೇಲ ಕಾರ್ಯದರ್ಶಿಗಳಾದ ನಾಗೇಂದ್ರಪ್ಪ ರವಿ ಪೂಜಾರಿ ಹೀರೆಮಠ ಧನರಾಜ್ ಗೋಪಾಲ ಗಾರಂಪಳ್ಳಿ ವಿಶ್ವನಾಥ್ ಅಂಜುಮ್ ಅಜರಾ ಬೇಗಂ ಮಾತನಾಡಿದರು ಸುಲೋಚನ ನಿರೂಪಿಸಿದರೆ ಶಿವಲೀಲಾ ವಂದಿಸಿದರು.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

1 hour ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

1 hour ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

1 hour ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

1 hour ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

1 hour ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

1 hour ago