ಬಿಸಿ ಬಿಸಿ ಸುದ್ದಿ

ಬಾಲ್ಯದಲ್ಲಿಯೇ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸಿ

ಕಲಬುರಗಿ: ಮಕ್ಕಳು ಬಾಲ್ಯದಲ್ಲಿರುವಾಗಲೇ ಅವರಿಗೆ ಶಿಕ್ಷಣದ ಜೊತೆಗೆ ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಇದು ಮುಂದೆ ಅವರ ಜೀವನ ಸುಂದರಗೊಳಿಸಿಕೊಳ್ಳಲು ಪೂರಕವಾಗುತ್ತದೆ. ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿದ್ದು, ಅದನ್ನು ಪಾಲಕ-ಪೋಷಕ ವರ್ಗ, ಶಿಕ್ಷಕರು ಗುರ್ತಿಸಿ ಪ್ರೋತ್ಸಾಹ ನೀಡಿದರೆ, ಮುಂದೆ ಉನ್ನತವಾದ ಸಾಧನೆ ಮಾಡಿ ದೇಶದ ಅಮೂಲ್ಯ ಆಸ್ತಿಯಾಗಲು ಸಾಧ್ಯವಾಗುತ್ತದೆ ಎಂದು ಪರಮ ಪೂಜ್ಯ ಮಾತೋಶ್ರೀ ನಾಗವೇಣಿ ತಾಯಿ ಕಿಟ್ಟಾ ಹೇಳಿದರು.

ಆದರ್ಶ ಶಿಕ್ಷಕ ದಂಪತಿಯಾದ ಭಾಗ್ಯಶ್ರೀ ಸಂಜೀವಕುಮಾರ ಪಾಟೀಲ ಸುಪುತ್ರ ನಂದೀಶ್‍ನ 6ನೇ ಜನ್ಮದಿನದ ಪ್ರಯುಕ್ತ ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ವಿಜಯನಗರ ಕಾಲನಿಯ ಶ್ರೀ ದಂಡಗುಂಡ ದೇವಸ್ಥಾನ ಮತ್ತು ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ‘ಬಾಲ ಪ್ರತಿಭೆಗಳಿಗೆ ಸತ್ಕಾರ’ದಲ್ಲಿ ಮಾತನಾಡಿದರು.

ಹೊದಲೂರ ಸಿಆರ್‍ಪಿ ವೀರೇಶ ಬೋಳಶೆಟ್ಟಿ ನರೋಣಾ ಮಾತನಾಡಿ, ಪ್ರಸುತ್ತ ದಿನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ, ಮಕ್ಕಳನ್ನೆ ದೊಡ್ಡ ಆಸ್ತಿಯನ್ನಾಗಿ ಮಾಡಬೇಕಾಗಿದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ, ಉನ್ನತವಾದ ಸಾಧನೆಯನ್ನು ಮಾಡಬೇಕಾದರೆ, ನಿರಂತರವಾದ ಪ್ರಯತ್ನ ತುಂಬಾ ಅಗತ್ಯವಾಗಿದೆ. ಮಕ್ಕಳಿಗೆ ಸೋಮಾರಿ ಗುಣಗಳನ್ನು ಕಲಿಸದೆ, ಪ್ರಯತ್ನಶೀಲ ಗುಣಗಳನ್ನು ಬೆಳೆಸಬೇಕು. ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಅವರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯಜರುಗಬೇಕಾಗಿದೆ. ಈ ನಿಟ್ಟಿನಲ್ಲಿ ಬಳಗವು ಉತ್ತಮ ಕಾರ್ಯ ಮಾಡುತತಿದೆ ಎಂದರು.

ಪ್ರತಿಭಾವಂತ ಮಕ್ಕಳಾದ ನಂದೀಶ್ ಎಸ್.ಪಾಟೀಲ, ರೋಹಿತ್ ಜಮಾದಾರ, ಮಹೇಶ ಪಾಟೀಲ್, ವೃಷಾಲಿ ಮದಗುಣಕಿ, ಪಲ್ಲವಿ ಕಾಮಜಿ ಅವರಿಗೆ ಸತ್ಕರಿಸಿ, ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸ, ಎಚ್.ಬಿ.ಪಾಟೀಲ, ಪ್ರಮುಖರಾದ ಶಾರದಾಬಾಯಿ ವಿ.ಪಾಟೀಲ, ಡಾ.ಸಂತೋಷ ಪಾಟೀಲ ಕೋಟನುರ, ಶರಣು ಗುತ್ತೇದಾರ, ನಾಗರಾಜ ಪಾಟೀಲ ಆಲೂರ, ಪ್ರಕಾಶ ಚೌದ್ರಿ, ಶಿವರಾಯ ಅಟ್ಟೂರ, ಶರಣು ಪಟ್ಟಣ, ಬಿ.ಜಯಸಿಂಗ್, ಮಲ್ಲಿಕಾರ್ಜು ಭಾಗೋಡಿ ಮಣೂರ, ಮಲ್ಲಿಕಾರ್ಜು, ಚಿ.ಮೋರಟಿ, ಭಾಗ್ಯಶ್ರೀ ಎಸ್.ಪಾಟೀಲ, ಸಂಜೀವಕುಮಾರ ಎಂ.ಪಾಟೀಲ, ಚಂದ್ರಶೇಖರ ಪಾಟೀಲ, ಶಿವಯೋಗಪ್ಪ ಬಿರಾದಾರ, ಅನೀಲಕುಮಾರ ಧೋತ್ರೆ, ಶಿವಕುಮಾರ ಪಾಟೀಲ ಬೆಡಜೂರ್ಗಿ, ಸೋಮಶೇಖರ ಕಲ್ಯಾಣಿ, ಮಲ್ಲಣ್ಣ ಮಲ್ಲೇದ್ ಶಿವಾನಂದ ದಿಂಡೂರೆ, ಶಿವಶರಣ ಪಾಟೀಲ, ವೀರೇಶ ಮಾಕಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago