ಕಲಬುರಗಿ; ಜಿಲ್ಲೆಯಲ್ಲಿ ಅಗಸ್ಟ್ ತಿಂಗಳಲ್ಲಿ ಮಳೆಯ ಕೊರತೆ ನಂತರ ಇತ್ತಿಚೀಗೆ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 03 ರಿಂದ 05 ರವರೆಗೆ ಸುರಿದ ಮಳೆಯ ನಂತರ ಹತ್ತಿ ಅಲ್ಲಲ್ಲಿ ಹಸಿಯಾಗಿ ಸೊರಗಲಾರಂಭಿಸಿದ್ದು, ಹತ್ತಿ ಬೆಳೆದ ರೈತರಿಗೆ ಹವಾಮಾನ ಬದಲಾವಣೆ ವ್ಯಾಪಕ ತೊಂದರೆಯಾಗುತ್ತಿದೆ.
ಈ ಸಮಸ್ಯಯನ್ನು ಹತ್ತಿಯ ಪಾರಾವಿಲ್ಟ್ ಎಂದು P್ಪರೆಯಲಾಗುತ್ತಿದೆ. ಭೂಮಿಯಲ್ಲಿ ಅತಿಯಾದ ಮಳೆಯ ನೀರು ಬಸಿದುಹೋಗುವಂತೆ ಬಸಿಗಾಲುವೆ ನಿರ್ಮಿಸುವುದು, ಕಾಪರ್ ಆಕ್ಸಿಕ್ಲೋರೈಡ್ 25 ಗ್ರಾ. ಮತ್ತು ಬೇವು ಮಿಶ್ರಿತ ಯೂರಿಯಾ 3 ಗ್ರಾ. 10 ಲೀಟರ್ ನೀರಿನಲ್ಲಿ ಬೆರೆಸಿ ಬಡ್ಡೆ ಭಾಗ ನೆನೆಯುವಂತೆ ಮಾಡಿ ಸಿಂಪಡಿಸುವುದು ಅಥವಾ ಕಾರ್ಬನ್‍ಡೈಜಿಂ 20ಗ್ರಾ. ಹಾಗೂ ಯೂರಿಯಾ 100ಗ್ರಾ. ಪ್ರತಿ 10 ಲೀಟರ್ ನೀರಿಗೆ ಬೆರೆಸಿ ಬುಡಭಾಗ ಮತ್ತು ಕವಲುಗಳು ನೆನೆಯುವಂತೆ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಆಳಂದ ರಸ್ತೆಯಲ್ಲಿರುವ ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ಮತ್ತು ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ಅಥವಾ ರೈತರು ತಮ್ಮ ಸಮೀಪದ ಹೋಬಳಿಯ ರೈತ ಸಂರ್ಪಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಬಿಸಿಲಿನ ಅವಧಿಯಲ್ಲಿ ಬೆಳೆಯ ಸಾಲಿನಲ್ಲಿ ಎಡೆಕುಂಟೆ ಹೊಡೆವುದರಿಂದ ಗಿಡದ ಉಸಿರಾಟ ಕ್ರೀಯೆಗೆ ಸಹಕಾರಿಯಾಗಲಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…