ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿಗಳಿಗೆ ಅತಿಯಾದ ಡಿಜಿಟಲ್ ವ್ಯಸನ ವಿದ್ಯಾಭ್ಯಾಸಕ್ಕೆ ಅಡಚಣೆ

ಕಲಬುರಗಿ: ಡಿಜಿಟಲ್ ತಂತ್ರಜ್ಞಾನದ ಬಳಕೆ ಮಿತಿಮೀರಿದರೆ ಅಪಾಯ ತಪ್ಪಿದ್ದಲ್ಲ. ಅವಶ್ಯ ವಿದ್ದಷ್ಟು ಬಳಸಿದರೆ ಸೂಕ್ತ ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಹಾಗೂ ಮನೋತಜ್ಞ ಭುಜಬಲಿ ಬೋಗಾರ್ ಹೇಳಿದರು.

ಅವರು ಶನಿವಾರ ನಗರದ ಚಂದ್ರಕಾಂತ ಪಾಟೀಲ್ ಪಿ ಯು ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಸುಬೇದಾರ್ ಕೇರ್ ಆಸ್ಪತ್ರೆ ವತಿಯಿಂದ ಇಂದು ಆಯೋಜಿಸಿದ್ದ ಗುಡ್ ಬೈ ಟು ಡಿಜಿಟಲ್ ಅಡಿಕ್ಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಅಧ್ಯಯನ ಕುರಿತು ಮಾಹಿತಿ ಕಲೆಹಾಕಲು ಮೊಬೈಲ್ ಬಳಸಿದರೆ ಒಳ್ಳೇದು, ಕೇವಲ ಮನರಂಜನೆಗೆ ಮಾತ್ರ ಸೀಮಿತವಗಬಾರದು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದರಿಂದ ಏಕಾಗ್ರತೆ ನಿದ್ರಾಹೀನತೆ ಓದಿದ್ದು ನೆನಪಿನಲ್ಲಿ ಉಳಿಯದಿರುವುದು ಸೇರಿದಂತೆ ಹತ್ತಾರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮೊಬೈಲ್ ನಲ್ಲಿ ವ್ಯಸನಿ ತಂತ್ರಜ್ಞಾನ ಅಡಿಕ್ಷನ್ ಟೆಕ್ನಾಲಜಿ ಅಳವಡಿಸಿರುತ್ತಾರೆ. ಇದೇ ಕಾರಣಕ್ಕೆ ಎಲ್ಲರೂ ಬೇಗ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ.

ಕಲರ್,ಸೈಜ್, ಫಾಂಟ್ ಹೀಗೆ ಮೊಬೈಲ್ ಬಳಸುವ ವೀಕ್ಷಕರ ಮನಸ್ಥಿತಿ ಅರಿತು ಅದನ್ನೇ ಮೊಬೈಲ್ ಮೂಲಕ ಉತ್ಪಾದಕರು ಕೊಡುತ್ತಾ ಹೋಗುತ್ತಾರೆ. ಮಕ್ಕಳನ್ನು ದಾರಿಗೆ ತರುವುದು ಪಾಲಕರ ಜವಾಬ್ದಾರಿ.ಮನೆಯಲ್ಲಿ ಪಾಲಕರು ಮೊಬೈಲ್ ನೋಡುತ್ತಾ ಕುಳಿತು, ಮೊಬೈಲ್ ಬಿಡಿ ಎಂದು ಮಕ್ಕಳಿಗೆ ಹೇಳಿದರೆ ನಡೆಯುವುದಿಲ್ಲ.ಮೊದಲು ನೀವು ನೋಡುವುದನ್ನು ನಿಲ್ಲಿಸಬೇಕು. ರಾತ್ರಿ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ ಕಾಡುತ್ತದೆ. ಬದ್ಧತೆ ರೂಢಿಸಿಕೊಂಡು ದಿನದಲ್ಲಿ ಇಷ್ಟೇ ಹೊತ್ತು ಮೊಬೈಲ್ ನೋಡಬೇಕು ಎಂಬುದನ್ನು ನಿರ್ಧರಿಸಬೇಕು.ಬೆಳಿಗ್ಗೆ ಎದ್ದ ತಕ್ಷಣ ಮೊದಲು ಒಂದು ಗಂಟೆ ಮೊಬೈಲ್ ಅನ್ನು ಮುಟ್ಟಲೇಬಾರದು.

ತಮ್ಮ ವಿದ್ಯಾಭ್ಯಾಸ, ಯೋಗ ಧ್ಯಾನಗಳನ್ನು ಮಾಡಬೇಕು. ಹಂತ ಹಂತವಾಗಿ ಮೊಬೈಲ್ ಬಳಕೆ ಅವಧಿ ಕಡಿಮೆ ಮಾಡುತ್ತಾ ಹೋಗಬೇಕು. ಪಾಲಕರು ಮಕ್ಕಳಿಗೆ ಟೈಮ್ ಟೇಬಲ್ ಹಾಕಬೇಕು. ಒಳ್ಳೆಯದಕ್ಕಾಗಿ ಮೊಬೈಲ್ ಅನ್ನು ಬಳಸಬೇಕೆಂದು ಪ್ರೀತಿಯಿಂದ ತಿಳಿ ಹೇಳಬೇಕು ಜೊತೆಗೆ, ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಕು.

ಮನುಷ್ಯನ ಬಲಮಿದುಳು ಕ್ರಿಯೇಟಿವಿಟಿ ಕೇಂದ್ರವಾಗಿದ್ದು ಪಾಠದ ಜೊತೆಗೆ ಕಲೆ ಸಾಹಿತ್ಯ ಸಂಗೀತ ಆಟ ಇದೆಲ್ಲವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಮೊಬೈಲನ್ನು ನಮ್ಮ ಜ್ಞಾನ ವಿಕಸನೆಗೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.

ಡೊಪಮೈನ್, ಎಂಡೊರ್ಫಿನ್, ಆಕ್ಸಿಟೋಸಿನ್ ಮತ್ತು ಸೆರಾಟೋನಿನ್ ಎಂಬ ರಾಸಾಯನಿಕಗಳ ಪ್ರಮಾಣ ನಮ್ಮ ದೇಹದಲ್ಲಿ ಕಡಿಮೆಯಾದಾಗ ಒತ್ತಡಕ್ಕೆ ಒಳಗಾಗುತ್ತೇವೆ. ಆ ಒತ್ತಡದಿಂದ ಹೊರಬರಲು ಅತಿಯಾದ ಮೊಬೈಲ್ ಧೂಮಪಾನದಂತ ಚಟಗಳಿಗೆ ಮೊರೆ ಹೋಗುತ್ತೇವೆ. ಇದರಿಂದ ಹೊರ ಬರಬೇಕಾದರೆ ಈ ನಾಲ್ಕು ರಾಸಾಯನಿಕ ಪ್ರಮಾಣ ಹೆಚ್ಚಾಗಬೇಕು. ಹೀಗಾಗಿ ನಾವು ಪುಸ್ತಕ ಓದಬೇಕು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡಬೇಕು ಸಲಹೆ ಕೊಡಬೇಕು.ಪ್ರತಿದಿನ ಕುಟುಂಬದ ಸದಸ್ಯರೊಂದಿಗೆ ಸಮಯ ಮೀಸಲಿಟ್ಟು ಬೆರೆಯಬೇಕು. ಇದರಿಂದ ಮನಸ್ಸು ಉಲ್ಲಾಸಗೊಂಡು ರಾಸಾಯನಿಕ ಬಿಡುಗಡೆಗಳ ಪ್ರಮಾಣ ನಿಯಮಿತದಲ್ಲಿರುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸುಬೇದಾರ್ ಕೇರ್ ಆಸ್ಪತ್ರೆ ನಿರ್ದೇಶಕ ಡಾ ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕ ಬಿ ವಿ ಪಾಟೀಲ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago