ಕಲಬುರಗಿ: ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸುಜಯ ಎಜ್ಯುಕೇಶನಲ್ ಮತ್ತು ವೆಲಫೇರ್ ಸೋಸೈಟಿ ಕಲಬುರಗಿ, ಕಾಂಡ್ರಾ ಎಜ್ಯುಕೇಶನಲ್ ಟ್ರಸ್ಟ್, ಬಳ್ಳಾರಿ ಅಂತರಂಗ ಸಂಸ್ಕøತೀಕ ಸೇವಾ ಸಂಸ್ಥೆ, ಕಲಬುರಗಿ ಶ್ರೀ ಸಂಗಮ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್, ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ 200 ಕ್ಕೂ ಹೆಚ್ಚು ಶಿಕ್ಷಕರಿಗೆ “ಕಲಿಕಾ ಸ್ನೇಹಿ ಶಿಕ್ಷಕ ಪುರಸ್ಕಾರ” ಮಾಡಲಾಯಿತು.
ಶಾಸಕಿ ಖನಿಜ ಫಾತಿಮಾ ಮಾತನಾಡಿ ಪ್ರಶಸ್ತಿ ಗೌರವಗಳಿಂದ ಜವಾಬ್ದಾರಿ ಹೆಚ್ಚಾಗುತ್ತದೆ, ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ಎಂದೂ ವಿಚಲಿತರಾಗಬಾರದು ಎಂದು ಹೇಳಿದರು.
ಪೆÇಲೀಸ್ ಆಯುಕ್ತರಾದ ಚೇತನ್ ಆರ್ ಮಾತನಾಡುತ್ತಾ ಎಲ್ಲಾ , ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ತುಂಬಾ ಗೌರವ ಮತ್ತು ಜವಾಬ್ದಾರಿಯುತವಾಗಿದೆ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ,ಮಾನವ ಸಂಪನ್ಮೂಲ ನಿರ್ಮಿಸುವ ಕಾರ್ಯ ಶಿಕ್ಷಕರು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
200ಕ್ಕೂ ಹೆಚ್ಚೂ ಜನ ಶಿಕ್ಷಕರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಪ್ರಮುಖರಾದ ರಾಜಗೋಪಾಲ್ ರೆಡ್ಡಿ, ಶಿವಶರಣಪ್ಪ ಮುಳೆಗಾಂವ್, ಡಾ.ಲಕ್ಷ್ಮಿ ಮಾಕಾ, ಎ. ಸಿ. ಕಾಡ್ಲೂರು, ಡಾ.ರಮೇಶ್ ಲಂಡನ್ಕರ್, ಮಹೇಶ್ ಹೂಗಾರ್, ಜೆ ಮಲ್ಲಪ್ಪ, ಡಾ.ಚಂದ್ರಶೇಖರ್ ದೊಡ್ಡಮನಿ, ಡಾ.ಶರಣಪ್ಪ ಸೈದಾಪುರ,ಪೆÇ್ರ.ನೀಲಕಂಠ ಟಿ .ಕಣ್ಣಿ, ಎಚ್ . ಬಿ. ಪಾಟೀಲ್ , ಎಂ.ಬಿ.ನಿಂಗಪ್ಪ ಉಪಸ್ಥಿತರಿದ್ದರು. ಸತೀಶ್ ಕುಮಾರ್ ಕಾಂಡ್ರಾ ಅಧ್ಯಕ್ಷತೆ ವಹಿಸಿದ್ದರು, ಡಾ.ಸುನಿಲ್ ಕುಮಾರ್ ವಂಟಿ ಪ್ರಾಸ್ತಾವಿಕ ಮಾತನಾಡಿದರು, ಎಸ್ . ಬಿ.ಹರಿಕೃಷ್ಣ ಸ್ವಾಗತ ಕೋರಿದರು.
ಕಾರ್ಯಕ್ರಮದ ನಿರೂಪಣೆ ನರಸಪ್ಪ ರಂಗೋಲಿ ಇವರು ನೆರವೇರಿಸಿದರು. ಪ್ರಾರ್ಥನಾ ಗೀತೆ ಮತ್ತು ನಾಡಗೀತೆ ಲಲಿತಾ ಹರಿಕೃಷ್ಣ ಮತ್ತು ರಮೇಶ್ ಯಾಳಗಿ ನಡೆಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…