ಕಲಬುರಗಿ: ನೇಕಾರ ಸಂಘಟನೆ ಪುನರ್ ರಚನೆ ಸಭೆ ನಾಳೆ

0
22

ಕಲಬುರಗಿ: ಡಬರಬಾದ್ ರಿಂಗ್ ರೋಡ್ ನ ದೇವಾಂಗ ಹಠಗಾರ ಸಮಾಜ ದೇವರ ದಾಸಿಮಯ್ಯನಗರದಲ್ಲಿ ನಾಳೆ ಸಂಜೆ 4:30ಕ್ಕೆ ಗಂಟೆಗೆ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ರಚನೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಸುಲ್ತಾನ್‌ಪುರ್ ಅವರು ತಿಳಿಸಿದ್ದಾರೆ.

ಭಾನುವಾರ ಸಭೆ ರಾಜ್ಯಾಧ್ಯಕ್ಷರಾದ B.S. ಸೋಮಶೇಖರ್, ಉಪಾಧ್ಯಕ್ಷರಾದ ಚಂದ್ರಕಾಂತ ಭಂಡಾರಿ, ರವೀಂದ್ರ ಕಲ್ಬುರ್ಗಿ, ಖಜಾಂಚಿ ನವೀನ್ ಚಿಲ್ಲಾಳ್, ರಾಯಚೂರು ಜಿಲ್ಲಾಧ್ಯಕ್ಷರಾದ ಮಾನವಿ ನಾಗರಾಜ್ ಹಾಗೂ ಗುಲ್ಬರ್ಗಾ ನಗರದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಸುಲ್ತಾನ್‌ಪುರ್ ರವರ ನೇತೃತ್ವದಲ್ಲಿ ನೇಕಾರ ಸಂಘಟನೆ ಹಾಗೂ ಪುನರ್ ರಚನೆ ಸಭೆಯನ್ನು ಏರ್ಪಡಿಸಲಾಗಿದ್ದು, ನೇಕಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here