ಅ. 3 ರಂದು ಲಖೀಂಪುರ ಖೇರಿ ಹತ್ಯಾಕಾಂಡ ಖಂಡಿಸಿ ಕರಾಳ ದಿನ ಆಚರಣೆಗೆ ಕರೆ

0
34

ಕಲಬುರಗಿ: ಉತ್ತರ ಪ್ರದೇಶ ರಾಜ್ಯ ಲಖೀಂಪುರ ಖೇರಿಯಲ್ಲಿ 2021ರಲ್ಲಿ ಕರಾಳ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರ ಮೇಲೆ ಕಾರು ಹರಿಸಿ ಹತ್ಯಾಕಾಂಡ ಖಂಡಿಸಿ ಅಕ್ಟೋಬರ್ 3 ರಂದು ಕರಾಳ ದಿನವಾಗಿ ಆಚರಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಮೌಲಾ ಮುಲ್ಲಾ, ಎಸ್ ಬಿ ಮಹೇಶ್ ಎಂ ಬಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹತ್ಯಾಕಾಂಡದ ಪ್ರಮುಖ ಸಂಚುಕೋರ ಅಜಯ್ ಮಿಶ್ರಾ ತೆಣಿ ಕೇಂದ್ರ ಗ್ರಹ ಖಾತೆ ರಾಜ್ಯ ಸಚಿವರಾಗಿ ಮುಂದುವರೆದಿದ್ದಾರೆ .ಇವರನ್ನು ಕುಡಲೆ ಸಚಿವ ಸಂಪುಟದಿಂದ ಕೈ ಬಿಡಬೆಕೆಂದು ಒತ್ತಾಯಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಹತ್ಯಾಕಾಂಡ ನಡೆದ ಅಕ್ಟೋಬರ್ 3 ರಂದು ದೇಶದಾದ್ಯಂತ ಕರಾಳ ದಿನ ಪ್ರತಿಭಟನೆ ಕರೆಯ ಮೆರೆಗೆ ಕೇಂದ್ರದ ಪ್ರತಿ ಕೃತಿ ದಹನ SVP ಸರ್ಕಲನಲ್ಲಿ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ತಿರ್ಮಾನಿಸಿದೆ ಎಂದು ಅರ್ಜುನ್ ಗೊಬ್ಬುರು ಭೀಮಾಶಂಕರ ಮಾಡಿಯಾಳ. ನಾಗಯ್ಯ ಸ್ವಾಮಿ ಎಸ್ ಆರ್ ಕೊಲ್ಲೂರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here