– ಜಗದೇವ ಎಸ್ ಕುಂಬಾರ
ಚಿತ್ತಾಪುರ: ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 15ಕ್ಕೂ ಅಧಿಕ ಸಿಎಲ್,2 ಮದ್ಯದ ಅಂಗಡಿಗಳು ಇದ್ದು ಈ ಅಂಗಡಿಗಳಲ್ಲಿ ಮದ್ಯ ತೆಗೆದುಕೊಂಡು ಹೋಗುವ ಸರ್ಕಾರದ ನಿಯಮ ಇದೆ ಆದರೆ ಅಲ್ಲಿಯೇ ಕುಳಿತು ಮದ್ಯೆ ಸೇವನೆ ಮಾಡುವ ಮೂಲಕ ಸರ್ಕಾರದ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ಚಿತ್ತಾಪುರ ಪಟ್ಟಣ ಸೇರಿ, ರಾವೂರ, ವಾಡಿ, ಶಹಾಬಾದ್, ಕಾಳಗಿ ನಾಲವಾರ ಹೀಗೆ ಅನೇಕ ಕಡೆ ಇರುವ ಸಿಎಲ್,2 ಮದ್ಯದ ಅಂಗಡಿಗಳಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಮದ್ಯ ಮಾರಾಟವಾಗುತ್ತಿದ್ದರು ಅಬಕಾರಿ ಇಲಾಖೆಯರು ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಹಾಗೂ ಕೆಲ ಮಧ್ಯದ ಅಂಗಡಿಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ವೈನ್ಸ್ ಗಳಲ್ಲಿ, ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕಾಯಿದೆಯ ಸೆಕ್ಷನ್ 23 ರ ಪ್ರಕಾರ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರನ್ನೂ ಮದ್ಯ ಮಾರಾಟ ಮಾಡುವ ಮತ್ತು ಸೇವಿಸುವ ಸ್ಥಳದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುತ್ತದೆ. ಎಂಬುದು ಗೊತ್ತಿದ್ದರೂ ಸಹ ಅಬಕಾರಿ ಇಲಾಖೆ ಕ್ರಮಕ್ಕೆ ಏಕೆ ಮುಂದಾಗುತ್ತಿಲ್ಲ ಏಕೆ? ಕಲಿಕೆಯ ಸ್ಥಾನವಾದ ಶಾಲೆಗಳು, ಕಾಲೇಜುಗಳು, ಪೂಜೆ ಸ್ಥಳಗಳು, ಇರುವ ಕಡೆ ವೈನ್ಸ್ ಅಂಗಡಿಗಳು ಇರಬಾರದು ಎಂಬ ಸರ್ಕಾರದ ನಿಯಮ ಇದೆ ಆದರೆ ಇಲ್ಲಿ ಅವು ಯಾವು ಅನ್ವಯ ಆಗುತ್ತಿಲ್ಲ ಏಕೆ ಎಂಬುವುದು ಸರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಪಟ್ಟಣ ಸೇರಿ ತಾಲೂಕಿನ ಪ್ರತಿ ಹಳ್ಳಿಗಲ್ಲಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿದೆ. ಚಿಲ್ಲರೆ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ನಗರ, ಪಟ್ಟಣದ ವೈನ್‌ಶಾಪ್ ಗಳಿಂದ ಖರೀದಿಸಿ 10-20 ರೂ. ಹೆಚ್ಚುವರಿ ದರ ವಿಧಿಸಿ ಮಾರಾಟ ಸಹ ಮಾಡುತ್ತಾರೆ. ಸರ್ಕಾರ ಈಗಾಗಲೇ ಕೆಲ ವೈನ್ಸ್ ಗಳಿಗೆ ದರ ಹೆಚ್ಚಿಸಿದ್ದು ಇನ್ನೊಂದು ಕಡೆ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದು ಮಧ್ಯಪ್ರಿಯರಿಗೆ ಕಷ್ಟಕರವಾಗಿದೆ.
ತಾಲೂಕಿನಾದ್ಯಂತ ಕಳೆದ ಹಲವಾರು ವರ್ಷಗಳಿಂದ ಕೋವಿಡ್ ಪ್ರವಾಹ, ಸತತ ಮಳೆಯ ಹಾನಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯೂ ಬೆಲೆ ಇಲ್ಲದಾಗಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗ್ರಾಮೀಣ ಭಾಗದ ಕೆಲವರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆ ಇಂದ ಇದರ ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಗಸ್ಟ್ 4ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪಟ್ಟಣ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಧಾಬಾಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಅವಧಿಗೆ ಮೀರಿದ ಸಮಯದವರೆಗೆ ಧಾಬಾಗಳು ತೆರೆದಿರುತ್ತವೆ ಈ ಬಗ್ಗೆ ಅಬಕಾರಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಬೇರೆ ಜಿಲ್ಲೆಯವರು ಎಷ್ಟಾದರೂ ಮದ್ಯ ಮಾರಾಟ ಮಾಡಲಿ ಚಿತ್ತಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮದ್ಯ ಮಾರಾಟ ಮಾಡಲು ಅನುವು ಮಾಡಿಕೊಡಬೇಡಿ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಬಕಾರಿ ಅಧಿಕಾರಿಗಳಿಗೆ ಹೇಳಿದರು
ಈ ವಿಷಯದ ಕುರಿತು ಸೆಪ್ಟೆಂಬರ್ ತಿಂಗಳ 18ರಂದು ಸಂಜೆವಾಣಿ ಪತ್ರಿಕೆಯಲ್ಲಿ ಹಳ್ಳಿ ಗಲ್ಲಿಗಳಲ್ಲಿ ಮಧ್ಯ ದಂಧೆ ಜೋರು ಅಕ್ರಮ ಸರಾಯಿ ಮಾರಾಟಕ್ಕೆ ಅಧಿಕಾರಿಗಳ ಸಾಥ್ ಎಂಬ ವರದಿ ಮಾಡಿತ್ತು. ವರದಿಗೆ ಎಚ್ಚೆತ್ತುಕೊಂಡು ಅಬಕಾರಿ ಇಲಾಖೆ ಬಾರ್ ಅಂಡ್ ರೆಸ್ಟೋರೆಂಟ್ ಒಂದರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮಕ್ಕೆ ಮುಂದಾಗೆದೆ. ಆದರೂ ಸಹ ಹಳ್ಳಿಗಳಿಗೆ ಅಕ್ರಮ ಮದ್ಯ ಮಾರಾಟ ಸಾಗಾಟ ಆಗುತ್ತಿದೆ. ಇನ್ನು ಮುಂದೆಯಾದರೂ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗುತ್ತಾ ಕಾದು ನೋಡಬೇಕಾಗಿದೆ.
ಚಿತ್ತಾಪುರ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಮಾರಾಟ ನಿಲ್ಲಬೇಕಾದರೆ ಚಿತ್ತಾಪುರ ಅಬಕಾರಿ ಇಲಾಖೆಗೆ ನಿಷ್ಠಾವಂತ, ಖಡಕ್ ಅಧಿಕಾರಿಗಳನ್ನು ಸರಕಾರ ಆಯೋಜಿಸಿದರೆ ಮಾತ್ರ ಸಾಧ್ಯ ಎಂದರು. – ಯುವರಾಜ್ ರಾಠೋಡ್
ಕೆಲವು ಕಡೆಗಳಿಂದ ದೂರುಗಳು ಬರುತ್ತವೆ. ಅಕ್ರಮ ಮದ್ಯ ಮಾರಾಟವನ್ನು ಇಲಾಖೆ ಸಹಿಸಲು ಸಾಧ್ಯವಿಲ್ಲ. ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಯಾವುದೇ ಮುಲಾಜಿಲ್ಲದೆ ರೈಡ್ ಮಾಡಲಾಗುತ್ತಿದೆ ಎನ್ನುತ್ತಾರೆ. – ರಮೇಶ್ ಬಿರಾದಾರ್, ಅಬಕಾರಿ ಅಧೀಕ್ಷಕರು ಚಿತ್ತಾಪುರ.
ಕಲಬುರಗಿ ; ಗ್ರಾಮೀಣಾಭಿವೃದ್ಧಿ ಪಂಚಾಯತ, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ಬುದ್ಧ ವಿಹಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕಿನ ಯಾಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…
ಶಹಾಬಾದ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ. ನಾರಾಯಣಗೌಡ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಆನಂದ ದೊಡ್ಡಮನಿ ಹಾಗೂ…
ಶಹಾಬಾದ: ನಗರಸಭೆ ವಾರ್ಡ ನಂ. 3 ರ ಉಪಚುನಾವಣೆ ಪ್ರಯುಕ್ತ ಗುರುವಾರ ಬೆಳಿಗ್ಗೆ ಕಲಬುರಗಿ ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮಡು…
ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…