RSS,ABVP ಸಂಘಟನೆಗಳ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಪಾದಯಾತ್ರೆ ಶುರು

0
27

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಾಪನೆಗೊಂಡಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು, 2009ರಲ್ಲಿ ಸ್ಥಾಪನೆಯಾದ ಇದು ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಸಬಲಿಕರಿಸುವ ಉದ್ದೇಶ ಹೊಂದಿದೆ, ದುರಂತವೆಂದರೆ ತನ್ನ ಸದುದ್ದೇಶದಿಂದ ದೂರಸರಿದ ಇದು ಸದ್ಯ ಮನುವಾದಿ ಆರ್ಎಸ್ಎಸ್ï ಮತ್ತು ಎಬಿವಿಪಿಗಳ ಸಮಾಜ ವಿರೋಧಿ ಚಟುವಟಿಕೆಗಳ ಅಡ್ಡಾ ಆಗಿದೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಜಗತ್ ವೃತ್ತದಿಂದ ಮಂಗಳವಾರ ಪಾದಯಾತ್ರೆ ಆರಂಭಿಸಿದರು.

ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಎಲ್ಲ ಸಿದ್ಧಾಂತ ಗಳಿಗೆ ಸಮನಾಗಿ ಮಾನ್ಯತೆ ಕೊಡಬೇಕು, ವಿ ವಿ ಆವರಣದಲ್ಲಿ,ಆಡಳಿತದಿಂದ ಕೋಮುವಾದಕ್ಕೆ ಪೆÇ್ರೀತ್ಸಾಹ ಕೊಡಬಾರದು, ವಿವಿ ನೇಮಕಾತಿ ಗಳಲ್ಲಿ ಕಲ್ಯಾಣ ಕರ್ನಾಟಕದ ರೈತರ ಕೂಲಿಕಾರರ ಮಕ್ಕಳಿಗೆ ಆದ್ಯತೆ ನೀಡಬೇಕು, ವಿವಿಯಲ್ಲಿ ಕೇವಲ ಆಂಧ್ರತೆಲಂಗಾಣಾ ಜನರಿಗೆ ನೇಮಕಾತಿ ಮಾಡುವುದನ್ನು ನಿಲ್ಲಿಸಬೇಕು, ಅಲ್ಲಿನ ನೌಕರರ ಮತ್ತು ಶಿಕ್ಷಕರ ಮೇಲೆ ಆಡಳಿತ ನಡೆಸುತ್ತಿರುವ ದಾಳಿ ದಬ್ಬಾಳಿಕೆ ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದರು.

Contact Your\'s Advertisement; 9902492681

ಮಂಗಳವಾರ ರಾತ್ರಿ ಜವಳಿ ಅವರ ತೋಟದಲ್ಲಿ ವಾಸ್ತವ್ಯ ಮಾಡಿ 11ರಂದು ಮಧ್ಯಾಹ್ನ 12 ಗಂಟೆಗೆ ವಿವಿ ತಲುಪಿ ಅಲ್ಲಿ ಪ್ರತಿಭಟನೆ ನಡೆಸಲಾಗುವುದು.

ಶರಣಬಸಪ್ಪ ಮಮಶೆಟ್ಟಿ, ನಾಗೆಂದ್ರಪ್ಪಾ ಥಂಬೆ, ಅರ್ಜುನ್ ಗೊಬ್ಬುರು, ಭಿಮಶಟ್ಟಿ ಯಂಪಳ್ಳಿ, ಮೇಘ ರಾಜ ಕಠಾರೆ, ಎಂ. ಬಿ. ಸಜ್ಜನ, ಪ್ರಭು ಪ್ಯಾರಬದ್ದಿ, ಗುಂಡಪ್ಪ ಅರಣಕಲ್ ಜಾಫರ್ ಖಾನ್. ಶಂಕ್ರಯ್ಯಾ ಘಂಟಿ, ಪದ್ಮಾ ಎನ್ ಮಾಲಿ ಪಾಟೀಲ, ಶಿವಲಿಂಗಮ್ಮ ಲೆಂಗಟಿಕರ, ಜೈ ಶ್ರೀ ಕುಸಾಳೆಪಾಂಡುರಂಗ ಮಾವಿನಕರ ಅನಿಲ್ ಗುತ್ಯೆದಾರ. ಜಾವೇದ್ ಹುಸೇನ್, ಸಾಗರ ಗಾಳೆ  ಅಲ್ತಾಫ್ ಇನಾಮದಾರ ಸಾಯಬಣ್ಣ ಗುಡುಬಾ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here