ಅಕ್ಷರ ಮಿತ್ರ ಪದನಾಮದಲ್ಲಿ 2, 318 ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕ

  • ಕೆಕೆಆರ್‌ಡಿಬಿ ಅಕ್ಷರ ಮಿತ್ರ ಅತಿಥಿ ಶಿಕ್ಷಕರ ನೇಮಕಾತಿ ಕಲ್ಯಾಣ ನಾಡಿನ ಶಿಕ್ಷಕರ ಬರ ನೀಗಿಸಿದೆ- ಡಾ. ಅಜಯ್‌ ಸಿಂಗ್‌ ಆಶಯ

  • ಅಕ್ಷರ ಅವಿಷ್ಕಾರ ಯೋಜನೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ವಿಭಾಗ ಮಟ್ಟದ ಕಾರ್ಯಾಗಾರ

  • ಅಕ್ಷರ ಮಿತ್ರ ಅತಿಥಿ ಶಿಕ್ಷಕ ನೇಮಕಾತಿಯಿಂದಾಗಿ ಕಲ್ಯಾಣ ನಾಡಲ್ಲಿ ಶೇ 0 . 47 ಮಾತ್ರ ಶಿಕ್ಷಕ ಹುದ್ದೆ ಖಾಲಿ

ಕಲಬುರಗಿ; ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕಂಕಣಬದ್ಧವಾಗಿರುವ ಕೆಕೆಆರ್‌ಡಿಬಿ ಈಗಾಗಲೇ ಪ್ರಸಕ್ತ ಅವಧಿಯನ್ನು ಶಿಕ್ಷಣ ವರ್ಷವೆಂದು, ಶೈಕ್ಷಣಿಕ ಚಟುವಟಿಕೆಗಳಿಗೆ ಮಂಡಳಿಯ ಒಟ್ಟು ಅನುದಾನದ ಶೇ. 25 ರಷ್ಟು ಹಣ ಮೀಸಲಿಡುವುದಾಗಿ ಘೋಷಿಸಿ ಇಡೀ ದೇಶದಲ್ಲೇ ಮಾದರಿಯಾಗಿದೆ ಎಂದಿರುವ ಮಂಡಳಿಯ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ತಾವು ಮಂಡಳಿಯ ಅಧ್ಯಕ್ಷರಾದ ನಂತರ ಕಕ ಭಾಗದಲ್ಲಿ ಖಾಲಿ ಇದ್ದಂತಹ 2, 618 ಶಿಕ್ಷಕ ಹುದ್ದೆಗಳಿಗೆ ಅಕ್ಷರ ಮಿತ್ರ ಪದನಾಮದಲ್ಲಿ 2, 318 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡು ನುಡಿದಂತೆ ನಡೆದಿದ್ದಾಗಿ ಹೇಳಿದ್ದಾರೆ.ಇಡೀ ದೇಶದಲ್ಲೇ ಕೆಕೆಆರ್‌ಡಿಬಿಯ ಅಕ್ಷರ ಅವಿಷ್ಕಾರ ಹಾಗೂ ಅಕ್ಷರ ಮಿತ್ರ ಅತಿಥಿ ಶಿಕ್ಷಕ ನೇಮಕಾತಿ ವಿನೂತನ ಯೋಜನೆಯಾಗಿ ಹೊರಹೊಮ್ಮಿದೆ, ನಮ್ಮ ಈ ಕ್ರಮದಿಂದಾಗಿ ಕಲ್ಯಾಣ ನಾಡಲ್ಲಿ 7 ಜಿಲ್ಲೆಗಳಲ್ಲಿನ ಶಿಕ್ಷಕರ ಕೊರತೆ ಪ್ರಮಾಣ ಇದೀಗ ಶೇ 0 . 47 ಕ್ಕೆ ತಗ್ಗಿದ್ದು ಇದು ದೇಶದಲ್ಲೇ ಗಮನ ಸೆಳೆದಂತಹ ಕೆಕೆಆರ್‌ಡಿಬಿ ಪ್ರಾಯೋಜಿತ ಶಿಕ್ಷಣ ಕ್ಷೇತ್ರದಲ್ಲಿ ಹೊಸತನ ಸಾಧಿಸುವಂತಹ ಉಪಕ್ರಮವಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಕೆಕೆಆರ್‌ಡಿಬಿ ಅಕ್ಷರ ಅವಿಷ್ಕಾರ ಯೋಜನೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಇಲ್ಲಿನ ಅಪರ ಶಿಕ್ಷಣಾಯುಕ್ತಾಲಯದ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ಅರಿವಿನ ಮನೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಭಾಗೀಯ ಮಟ್ಟದ ಅಧಿಕರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲ್ಯಾಣ ನಾಡವರು ಪ್ರಾದೇಶಿಕವಾಗಿ ಹಿಂದುಳಿಯಲು ಐತಿಹಾಸಿಕ ಕಾರಣಗಳಿವೆ ಎಂದು ಪಟ್ಟಿ ಮಾಡಿದ ಡಾ. ಅಜಯ್‌ ಸಿಂಗ್‌ 50 ರ ದಶಕದ ಅಂಕಿ ಸಂಖ್ಯೆ ಪಟ್ಟಿ ಮಾಡಿದರು. 50 ರ ದಶಕದಲ್ಲಿ ಮೈಸೂರು ಪ3ಾಂತದಲ್ಲಿ 48 ಕಾಲೇಜಿದ್ದರೆ, ಕಕ ಬಾಗದಲ್ಲಿ ಈ ಸಂಖ್ಯೆ 3 ಆಗಿತ್ತು, ಇನ್ನು ಮಾಸೂರು ಪ್ರಾಂತದಲ್ಲಿ 266 ಹೈಸ್ಕೂಲ್‌ ಇದ್ದಾಗ ಕಕ ಭಾಗದಲ್ಲಿದ್ದದ್ದು ಕೇವಲ 24 ಹೈಸ್ಕೂಲ್‌ ಮಾತ್ರ. ಪ್ರಾಥಮಿಕ ಶಾಲೆಗಳು ಮೈಸೂರು ಭಾಗದಲ್ಲಿ 4, 763 ಇದ್ದಾಗ, ಈ ಶಾಲೆಗಳ ಸಂಖ್ಯೆ ಕಕ ಭಾಗದಲ್ಲಿ 2, 114 ಆಗಿತ್ತು. ಪ್ರಾದೇಶಿಕವಾಗಿ ಹಳೆ ಮೈಸೂರು ಶಿಕ್ಷಣದಲ್ಲಿ ನಮಗಿಂತ ನಾಗಾಲೋಟದಲ್ಲಿ ಮುಂದಿತ್ತೆಂದು ಹೇಳುತ್ತ ಶತಮಾನಗಳ ಅಸಮಾನತೆ ನಿವಾರಣೆಗೆ ತಾವಿಂದು ಒತ್ತು ನೀಡುತ್ತಿರೋದಾಗಿ ಒತ್ತಿ ಹೇಳಿದರು.

ರಾಜ್ಯ, ದೇಶದೆಲ್ಲೆಡೆ ಶಿಕ್ಷಕರ ಕೊರತೆ ತಾಂಡವವಾಡುತ್ತಿರುವಾಗ ಕಲ್ಯಾಣ ನಾಡಲ್ಲಿ ಕೆಕೆಆರ್‌ಡಿಬಿ ಸಹಯೋಗದಲ್ಲಿ ಈ ಕೊರತೆ ನೀಗಿಸಲಾಗುತ್ತಿದೆ. ಇಲ್ಲಿ ಕೊರೆತೆಯಾಗಿದ್ದ 2, 618 ಅತಿಥಿ ಶಿಕ್ಷಕರನ್ನು ಅಕ್ಷರ ಮಿತ್ರ ಯೋಜನೆಯಲ್ಲಿ ಕೆಕೆಆರ್‌ಡಿಬಿ ನೇಮಕ ಮಾಡಿಕೊಂಡಿದ್ದಿರಂದ ಕಕ ಭಾಗದ ಶಿಕ್ಷಕರ ಕೊರತೆ ಇದೀಗ ಶೇ 0. 47 ಕ್ಕೆ ಇಳಿದಿದೆ. ದೇಶದಲ್ಲೇ ಇದು ಮೊದಲು ಎಂದರು.

ಜಾರ್ಖಂಡದಲ್ಲಿ ಶೇ. 42, ಬಿಹಾರ, ಉಪ್ರದಲ್ಲಿ ಶೇ. 39, ಮಧ್ಯಪ್ರದೇಶದಲ್ಲಿ ಶೇ. 41, ಕೇರಳದಲ್ಲಿ ಶೇ. 2. 63, ತಮೀಳುನಾಡಲ್ಲಿ ಶೇ. 2. 73 ಶಿಕ್ಷಕರ ಕೊರತೆ ಇದೆ. ನಮ್ಮ ರಾಜ್ಯದ ಮೈಸೂರಲ್ಲಿ ಶೇ. 9. 2, ಬಳಗಾವಿ ವಿಭಾಗದಲ್ಲಿ ಶೇ. 21. 38 ರಷ್ಟು ಶಿಕ್ಷಕರ ಕೊರತೆ ಇದೆ. ಆದರೆ ಕೆಕೆಆರ್‌ಡಿಬಿ ಶಿಕ್ಷಣ ವರ್ರಷದ ಘೋಷಣೆಯಿಂದಾಗಿ ನಮ್ಮಲ್ಲಿ ಶಿಕ್ಷಕರ ಕೊರತೆ 0. 41 ತಲುಪಿರೋದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷರಾದ ನಂತರ ತಾವು ಮಾಡಿದ ಘೋಷಣೆಯಂತೆಯೇ ತಿಂಗಳೊಳಗಾಗಿಯೇ ಖಾಲಿ ಇರುವ 2, 618 ಶಿಕ್ಷಕ ಹುದ್ದೆಗಳಿಗೆ ಅಕ್ಷರ ಮಿತ್ರ ಪದನಾಮದಲ್ಲಿ 2, 318 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಮಂಡಳಿ ಶಿಕ್ಷಣ ಇಲಾಖೆಗೆ ಅದಾಗಲೇ 18. 32 ಕೋಟಿ ರು ಸಂಬಳ ಮೊತ್ತದ ಹಣವನ್ನೂ ನೀಡಿದೆ. ಎಂದು ಹೇಳುತ್ತ ಶಿಕ್ಷಣಕ್ಕೆ ತಾವು ನೀಡುತ್ತಿರುವ ಮಹತ್ವ ಜನ ಅರಿಯಬೇಕು, ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರು ಇದನ್ನರಿತು ನಮ್ಮೊಂದಿಗೆ ಕೈ ಜೋಡಿಸಬೇಕು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳೆಲ್ಲವೂ ಇಲ್ಲಿ ಕೈ ಜೋಡಿಸಿದಾಗ ಮಾತ್ರ ಕಲ್ಯಾಣ ನಾಡಲ್ಲಿ ಇದೊದು ಜನಾಂದೋಲನ ಸ್ವರೂಪ ಪಡೆಯೋದಲ್ಲದೆ ಯಶ ಕಾಣೋದು ಸತಸಿದ್ಧ ಎಂದರು.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಕಕ ಭಾಗದ ಸಪ್ತ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಸಧಲ್ಲಿ ಸದೆ ಕೆಳಗಿನಿಂದ ಕೊನೆಯಲ್ಲಿರೋದನ್ನ ಎಲ್ಲರೂ ಕಾಣುತ್ತಿದ್ದೇವೆ. ತಾವಿದನ್ನು ಸುದಾರಣೆ ತರಲು ಸಂಕಲ್ಪಿಸಿದ್ದು ಇಂತಹ ಪ್ರಯೋಗ ಅದಾಗಲೇ ತಮ್ಮ ಕ್ಷೇತ್ರ ಜೇವರಗಿಯಲ್ಲಿ ಫಲ ನೀಡಿದ್ದು ಅದೇ ಮಾದರಿಯನ್ನು ಕಕ ಭಾಕ್ಕೆ ವಿಸ್ತರಿಸಲಾಗುತ್ತಿದೆ ಎಂದರು.

ಕಕ ಭಾಗದಲ್ಲಿರುವ 7 ಜಿಲ್ಲೆಗಳಲ್ಲಿ ಈ ಬಾರಿ 2 ಲಕ್ಷದಷ್ಟು ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು ಈ ಪೈಕಿ 1. 10 ಲಕ್ಷ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇವರಲ್ಲಿ ಶೇ. 30 ರಷ್ಟು ಓದಿನಲ್ಲಿ ತುಸು ಹಿಂದಿರುವ ಮಕ್ಕಳಿದ್ದಾರೆಂಬುದು ಅಂಕಿ ಸಂಖ್ಯೆಗಳೇ ಹೇಳುತ್ತಿವೆ. ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಒತ್ತು ಕೊಟ್ಟು ಸುದಾರಣೆ ತರಬಹುದಾಗಿದೆ. ಇದಕ್ಕೆ ಶಾಲೆಯ ಶಿಕ್ಷಕರು, ಪೋಷಕರು ಒಂದಾಗಿ ಮುಂದಡಿ ಇಡಬೇಕೆಂದರು. ಜನಾಂದೋಲ ಸ್ವರೂಪದಲ್ಲಿ ಸದರಿ ಕಾರ್ಯಕ್ರಮ ಹೊರಹೊಮ್ಮಿದಾಗ ಮಾತ್ರ ಯೋಜನೆಯೆ ಯಶಸ್ಸು ನಮ್ಮ ಭಾಗದ ಮಕ್ಕಳನ್ನು ತಲುಪುತ್ತದೆ ಎಂದು ಡಾ. ಅಜಯ್‌ ಸಿಂಗ್‌ ಆಶಯ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬೂ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌, ಸಿಇಓ ಭಂವರ್‌ ಸಿಂಗ್‌ ಮೀನಾ ಮಾತನಾಡುತ್ತ ಕಲ್ಯಾಣ ನಾಡಲ್ಲಿನ ಶಿಕ್ಷಣ ಸಮಸ್ಯೆಗಳ ಪರಿಹಾರಕ್ಕೆ ಮಂಡಳಿ ಸಿದ್ಧವಾಗಿದೆ, ಅದರ ಸದುಪಯೋಗ ಎಲ್ಲರು ಪಡೆಯಬೇಕು, ಅದಕ್ಕಾಗಿ ಮನಸ್ಸು ಕೊಟ್ಟು ಕೆಲಸ ಮಾಡುವಂತೆ ಕರೆ ನೀಡಿದರು.

ಮಕ್ಕಳು ಶಾಲೆಗೆ ಗೈರು ಹಾಜರಾಗುತ್ತಿರೋದು ಈ ಭಾಗದಲ್ಲಿ ಹೆಚ್ಚಿದ್ದು ಇದನ್ನು ತಪ್ಪಿಸಬೇಕಿದೆ. ಮಕ್ಕಳು ಶಾಲೆಗೆ ಬಂದು ತರಗತಿ ಪಾಠ ಕೇಳಿದರೆ ತಾವೇ ಪಾಸಾಗುತ್ತಾರೆ. ಶಿಕ್ಷಕರು ಮಕ್ಕಳ ಪೋಷಕರನ್ನು ಕಂಡು ಈ ವಿಚಾರದಲ್ಲಿ ಹೆಚ್ಚಿನ ಗಮನ ಸೆಳೆಯಲಿ ಎಂದು ಅಧಿಕಾರಿಗಳು ಕರೆ ನೀಡಿದರು.

ಕಲಬುರಗಿ ಅಪರ ಶಿಕ್ಷಣಾಯುಕ್ತಾಲಯದ ಆಯುಕ್ತರಾದ ಡಾ. ಆಕಾಶ್‌ ಶಂಕರ್‌ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಕ್ಷರ ಅವಿಷ್ಕಾರ ಯೋಜನೆಯಡಿಯಲ್ಲಿ ಶೈಕ್ಷಣಿಕವಾಗಿ ಯೋಜನೆ ಕೈಗೊಳ್ಳಲು ಪ್ರತಿ ಜಿಲ್ಲೆಗೆ ಅಂದಾಜು ಹೆಚ್ಚುವರಿ ತಲಾ 100 ಕೋಟಿ ರುನಂತೆ 700 ಕೋಟಿ ರು ನಷ್ಟು ಹಣ ಬರಲಿದೆ. ಈ ಹಣದ ಸದ್ವಿನಿಯೋಗಕ್ಕೆ ಎಲ್ಲರೂ ಸಂಕಲ್ಪಿಸಬೇಕು, ಶಾಲೆಗಳಿಗೆ ಇರುವ ಕೊರತೆ ನೀಗಿಸಿಕೊಂಡು ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಮುಂದಾಗಬೇಕು ಎಂದರು.

ಅಕ್ಷರ ಅವಿಷ್ಕಾರ ಯೋಜನೆಯ ಶೈಕ್ಷಣಿಕ ಸಲಹೆಗಾರ ಪ್ರೊ . ನಾಗರಾಜಯ್ಯ ಮಾತನಾಡುತ್ತ ಕಕ ಭಾಗದಲ್ಲಿ ಶಿಕ್ಷಕರು, ಮಕ್ಕಳು ತುಂಬ ಜಾಣರು. ಆದರೆ ಸರಿಯಾದಂತಹ ತರಬೇತಿ ಇವರಿಗೆ ದೊರೆತಲ್ಲಿ ಹೆಚ್ಚಿನ ಸಾಧನೆ ಸಾಧ್ಯವೆಂದರಲ್ಲದೆ ಯೋಜನೆ ಅನುಷ್ಠಾನಕ್ಕೆ ಸಹಕಾರ ಕೋರಿದರು.

ಶೈಕ್ಷಣಿಕ ತರಬೇತುದಾರ ಜಯಪ್ರಕಾಶ ನಾಗತಿಹಳ್ಳಿ ಮಾತನಾಡುತ್ತ ಡಾ. ಅಜಯ್‌ ಸಿಂಗ್‌ ಪ್ರಯತ್ನ ಮೆಚ್ಚಿಕೊಂಡರಲ್ಲದೆ ತಮ್ಮಿಂದಲೂ ಈ ಭಾಗದಲ್ಲಿ ಮಕ್ಕಳಿಗೆ ತರಬೇತಿಗೆ ಸಿದ್ಧವೆಂದರು.ಕೆಕೆಆರ್‌ಡಿಬಿ ಉಪ ಕಾರ್ಯದ್ರಶಿಗಳಾದ ಪ್ರಮೀಳಾ ಪೆರ್ಲ, ಮಲ್ಲಿಕಾರ್ಜುನ ರೆಡ್ಡಿ ವೇದಿಕೆ ಮೇಲಿದ್ದರು. ಕಲಬುರಗಿ ಅಪರ ಶಿಕ್ಷಣಾಯುಕ್ತಾಲಯದ ಹಿರಿಯ ಅಧಿಕಾರಿಗಳು, ಎಲ್ಲಾ 7 ಜಿಲ್ಲೆಗಳ ಡಿಡಿಪಿಐಗಳು, ಡಯಟ್‌ ಪ್ರಚಾರ್ಯರು, ಡಿವೈಪಿಸಿಗಳು, ಬಿಇಓಗಳು ಸಭೆಯಲ್ಲಿ ಹಾಜರಿದ್ದು ಇಡೀ ದಿನದ ತರಬೇತಿ, ಚಿಂತನೆಗಳಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420