ಬಿಸಿ ಬಿಸಿ ಸುದ್ದಿ

ವಿದ್ಯುತ್ ಸಮಸ್ಯೆಗೆ ಬೇಸತ್ತು ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದಾಗಿ ಬೆಳೆಗಳು ಹಾಳಾಗುತ್ತಿವೆ,ಆದರೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಸಮಸ್ಯೆ ನಿವಾರಿಸುತ್ತಿಲ್ಲ ಎಂದು ಆರೋಪಿಸಿ ನೂರಾರು ರೈತರು ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕ ರೈತರು ಮಾತನಾಡಿ, ಹಸನಾಪುರ ಜೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ವಿಭಾಗ ಕಚೇರಿಗೆ ಭೇಟಿ ನೀಡಿ ನಮ್ಮ ಸಮಸ್ಯೆ ಹೇಳಿದರೆ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ಸ್ಪಂದಿಸಿಲ್ಲದ ಕಾರಣಗಳಿಂದ ರಸ್ತೆ ತಡೆ ಮಾಡುತ್ತಿದ್ದೇವೆ. ವಿದ್ಯುತ್ ಸರಿಯಾಗಿ ಸರಬರಾಜು ಮಾಡದ ಕಾರಣ ಕೃಷಿ ಪಂಪ್ಸೆಟ್‌ಗಳು ಬಂದಾಗಿವೆ, ಒಂದೆಡೆ ಕಾಲುವೆಗಳಿಗೆ ನೀರಿಲ್ಲ,ಹಳ್ಳದ ನೀರು ತೆಗೆದುಕೊಳ್ಳಲು ವಿದ್ಯುತ್ ಇಲ್ಲ, ಕೋಟ್ಯಾಂತರ ರೂಪಾಯಿ ಬೆಳೆಗಳು ಒಣಗುತ್ತಿವೆ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭತ್ತ, ಹತ್ತಿ ,ಮೆಣಸಿನಕಾಯಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ ಎಂಬ ಆತಂಕ ರೈತರಿಗೆ ಕಾಡುತ್ತಿದ್ದು . ಆದರಿಂದ ಸರ್ಕಾರ ನೀಡಿರುವ ಭರವಸೆಯಂತೆ 7 ತಾಸು ಗುಣಮಟ್ಟದ ವಿದ್ಯುತ್ತು ನೀಡಲು ಸೂಕ್ತ ಕ್ರಮ ವಹಿಸಬೇಕೆಂದು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮಾತನಾಡಿದರು.

ರೈತ ಮುಖಂಡರಾದ ಮಲ್ಲಯ್ಯ ಕಮತಗಿ,ಶಿರುದ್ರ ಉಳ್ಳಿ, ಶಿವಾನಂದ ಕೆಂಭಾವಿ ಮಾತನಾಡಿದರು.ನಂತದ ತಹಶೀಲ್ದಾರ್ ವಿಜಯಕುಮಾರ್ ಕೆ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳ ಆಲಿಸಿ ನಂತರ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳ ಕರೆಯಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ಎರಡು ತಾಸಿಗಿಂತ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಎಲ್ಲಾ ರಸ್ತೆಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಘಮೊಡೆ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ರೈತರ ಮುಖಂಡರಾದ, ಭೀಮನಗೌಡ ಯಮನೂರ್, ಶಾಂತಪ್ಪ ನಾಯ್ಕೋಡಿ, ಯಂಕಪ್ಪ ಗುತ್ತೇದಾರ್ ಹೈಯ್ಯಾಳಪ್ಪ ದೇವಳಗುಡ್ಡ ಹಣಮಂತರಾಯ ಬಡಿಗೇರ ವೀರೇಶ್ ಬೋನಾಳ ಗೌಡ ಶರಣ ಗೌಡ ಕಚಕನೂರ ಹಾಗೂ ಈ ಸಂದರ್ಭದಲ್ಲಿ ಗ್ರಾಮದ ನೂರಾರು ರೈತರು ಸತ್ಯಂಪೇಟ ಯಮನೂರು ರತ್ತಾಳ ದೇವಿಕೇರ ಕಚಕನೂರು ಶಖಾಪುರ ಹಾಗೂ ಇತರೆ ಗ್ರಾಮಗಳಿಂದ ಸುಮಾರು ನೂರಾರು ರೈತರು ಭಾಗವಹಿಸಿದ್ದರು.

emedialine

Recent Posts

ನಿರಾಶ್ರಿತ ಕೇಂದ್ರದಲ್ಲಿ ಹಣ್ಣು ಹಂಪಲು ಅನ್ನ ಸಂತರ್ಪಣೆ

ಕಲಬುರಗಿ ; ಗ್ರಾಮೀಣಾಭಿವೃದ್ಧಿ ಪಂಚಾಯತ, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ…

58 mins ago

ಬುದ್ಧ ವಿಹಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಆಚರಣೆ

ಎಂ.ಡಿ‌ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ಬುದ್ಧ ವಿಹಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ…

1 hour ago

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ; ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ಯಾಡ್ ವಿತರಣೆ

ಎಂ.ಡಿ‌‌ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕಿನ ಯಾಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

2 hours ago

ಕರವೇ ನಗರ ಘಟಕದ ಪದಾಧಿಕಾರಿಗಳ ಆಯ್ಕೆ

ಶಹಾಬಾದ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ. ನಾರಾಯಣಗೌಡ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಆನಂದ ದೊಡ್ಡಮನಿ ಹಾಗೂ…

2 hours ago

ಶಾಸಕ ಮತ್ತಿಮಡು ಹಳೆಶಹಾಬಾದನ ಮನೆಮನೆಗೆ ತೆರಳಿ ಮತಯಾಚನೆ

ಶಹಾಬಾದ: ನಗರಸಭೆ ವಾರ್ಡ ನಂ. 3 ರ ಉಪಚುನಾವಣೆ ಪ್ರಯುಕ್ತ ಗುರುವಾರ ಬೆಳಿಗ್ಗೆ ಕಲಬುರಗಿ ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮಡು…

2 hours ago

ಜಿಲ್ಲಾಧ್ಯಕ್ಷ-ತಾಲೂಕು ಅಧ್ಯಕ್ಷರಾಗಿ ಬಳಿರಾಮ ರಾಮಜಿ, ಶಿವರಾಜ ದೇಶಮುಖಪ್ಪಾ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…

8 hours ago