ಶಹಾಬಾದ: ಎಫ್‍ಐಡಿ ಹೊಂದಿದ ರೈತರಿಗೆ ಬರ ಪರಿಹಾರ

0
156

ಶಹಾಬಾದ: ರೈತರು ಎಫ್‍ಐಡಿ ನೊಂದಣಿ ಹೊಂದಿದ್ದ ರೈತರಿಗೆ ಮಾತ್ರ ಬರ ಪರಿಹಾರದ ಮೊತ್ತ ಬರಲಿದೆ.ಆದ್ದರಿಂದ ಎಫ್‍ಐಡಿ ನೊಂದಣಿ ಮಾಡುವುದು ಕಡ್ಡಾಯ ಎಂದು ತಹಸೀಲ್ದಾರ ಗುರುರಾಜ ಸಂಗಾವಿ ತಿಳಿಸಿದ್ದಾರೆ.

ತಾಲೂಕಿನಲ್ಲಿ ಭೂ ಹಿಡುವಳಿದಾರಾದ ಬಹುತೇಖ ರೈತರು ಎಫ್‍ಐಡಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಎಫ್‍ಐಡಿ ಮಾಡಿಸದ ರೈತರಿಗೆ ಬರ ಪರಿಹಾರ, ತೊಗರಿ ನೆಟೆರೋಗ ಪರಿಹಾರದ ಮೊತ್ತ ಬರುವುದಿಲ್ಲ. ಏಕೆಂದರೆ ಈ ಹಣ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಎಫ್‍ಐಡಿ ಮಾಡಿಸದ ರೈತರು ತಕ್ಷಣ ಸಮೀಪದ ಸಿಎಸ್‍ಸಿ ಸೆಂಟರ್, ರೈತ ಸಂಪರ್ಕ ಕೇಂದ್ರ ಕಚೇರಿಗೆ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೋಬೈಲ್ ಸಂಖ್ಯೆಯೊಂದಿಗೆ ತೆರಳಿ ಎಫ್‍ಐಡಿ ಮಾಡಿಸಲು ಸೂಚಿಸಿದೆ. ತಪ್ಪಿದಲ್ಲಿ ಸರಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ವಂಚಿತರಾಗುವಿರಿ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here