ಸಂಸ್ಕಾರಯುತ ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾದ್ಯ

0
34

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ 2022-23ನೇ ಸಾಲಿನ ಹತ್ತನೇ/ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅತಿ ಹಿಂದುಳಿದ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸವುದು ಅವಶ್ಯವಾಗಿದೆ. ಆಸ್ತಿಗಾಗಿ ದುಡಿಯುವುದಕ್ಕಿಂತ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಬೇಕು ಎಂದರು. ನಗರದಲ್ಲಿ ಹೆಳವ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು ಸಹಾಯ ಮಾಡುವುದಾಗಿ ತಿಳಿಸಿದರು.

Contact Your\'s Advertisement; 9902492681

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಅಲೆಮಾರಿ ಹೆಳವ ಸಮಾಜ ಅತಿ ಸಣ್ಣ ಹಾಗೂ ಕಡುಬಡತನದಿಂದ ಕೂಡಿದ್ದರೂ, ಅಲೆಮಾರಿ ಮಕ್ಕಳ ಸಾಧನೆ ಶ್ಲಾಘನೀಯವಾದದ್ದು ಎಂದರು. ಇದೇ ಸಂದರ್ಭದಲ್ಲಿ ಸಮಾಜದ ಏಳಿಗೆಗಾಗಿ 5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪೂಜ್ಯ ಶ್ರೀ ಶಂಕರಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಸುನಿಲಕುಮಾರ ಒಂಟಿ, ಡಾ. ಕರಿಬಸಮ್ಮ ಹಾಗೂ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ವಹಿಸಿದ್ದರು.

ಸಮಾರಂಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಬಿ.ಹೆಚ್, ಎಚ್.ಎನ್. ಗೋಗಿ, ಶ್ರೀಮಂತ ಸೌಂದರ್ಗಿ, ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಬಸವರಾಜ ಎಸ್. ಹೆಳವರ, ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ, ಗುರಲಿಂಗ ಹೆಳವರ, ಹಣಮಂತ್ರಾಯ ಹಳಿಸಗರ, ರಾಘು ಮಾಸ್ತಾರ, ಮಲ್ಲಪ್ಪ ತಳ್ಳಳ್ಳಿ, ಪ್ರಭು ಯಾಳಗಿ, ಅಶೋಕ ಹೆಳವರ, ತಿಪ್ಪಣ್ಣ ಹೆಳವರ, ಗಂಗಾಧರ ಹೆಳವರ, ರಾಜು ಹೆಳವರ ಹಾಗೂ ಸಮಾಜದ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here