ಬಿಸಿ ಬಿಸಿ ಸುದ್ದಿ

ಶಾಸಕರು ತಾವು ತಂದ ಅನುದಾನದ ಬಗ್ಗೆ ಜನರಿಗೆ ತಿಳಿಸಲಿ: ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸುದ್ದಿಗೋಷ್ಟಿ

ಸುರಪುರ:ಕಳೆದ ಕೆಲ ದಿನಗಳ ಹಿಂದೆ ಶಾಸಕರು ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟನೆಯಲ್ಲಿ ಮಾತನಾಡುವಾಗ,ಹಿಂದಿನ ಶಾಸಕರು ಏನು ಮಾಡಿಲ್ಲ ನಾನು ಒಂದು ವರ್ಷದಲ್ಲಿ ಕ್ರೀಡಾಂಗಣ ಪೂರ್ತಿಗೊಳಿಸುವುದಾಗಿ ಮಾತನಾಡಿದ್ದಾರೆ.

ಆದರೆ ನಾನು ಸ್ಪಷ್ಟನೆ ಜೊತೆಗೆ ಶಾಸಕರಿಗೆ ಕೇಳಬಯಸುತ್ತೇನೆ,ನಾನು 2010 ರಲ್ಲಿ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ನಗರೋತ್ಥಾನಕ್ಕೆ 126 ಕೋಟಿ ಅನುದಾನ ನೀಡಿದಾಗ,ಅದರಲ್ಲಿ 3 ಕೋಟಿ ರೂಪಾಯಿಯಲ್ಲಿ ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿತ್ತು,ನಂತರ 13 ರಲ್ಲಿ ಸೋತೆ,ನಂತರ 18 ರಲ್ಲಿ ಮತ್ತೆ 2.5 ಕೋಟಿ ಕೆಕೆಆರ್‍ಡಿಬಿ ಅನುದಾನ ತಂದು ಕಾಮಗಾರಿಯನ್ನು ನಡೆಸಲಾಯಿತು.

ಈಗಲೂ ನಾನು ತಂದ ಅನುದಾನದಲ್ಲಿ ಕೆಲಸ ನಡೆಯುತ್ತಿದೆ,ನಾನೇ ಒಬ್ಬ ಕ್ರೀಡಾಳು ನಾನು ಕ್ರೀಡಾಳು ಆಗದಿದ್ದಲ್ಲಿ ಶಾಸಕನಾಗುತ್ತಿರಲಿಲ್ಲ,ಎಷ್ಟೋ ಜನ ಕ್ರೀಡಾಪಟುಗಳಿಗೆ ನನ್ನ ಸ್ವಂತ ಹಣದಿಂದ ನೆರವಾಗಿದ್ದೇನೆ ,ಆದರೆ ಶಾಸಕರು ನಾಲ್ಕು ಬಾರಿ ಶಾಸಕರಾಗಿದ್ದಾರೆ,ಕ್ರೀಡಾಂಗಣಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ತಿಳಿಸಲಿ ಎಂದರು.

ಅಲ್ಲದೆ ಇತ್ತೀಚೆಗೆ ಬಾಲಕಿಯರ ವಸತಿ ನಿಲಯಕ್ಕೆ ಅಡಿಗಲ್ಲು ಹಾಕಿದ್ದಾರೆ,ಅದಕ್ಕಾಗಿ 5 ಕೋಟಿ 15 ಲಕ್ಷ ಅನುದಾನ ನಾನು ತಂದಿದ್ದು,ಅಡಿಗಲ್ಲು ಸಮಾರಂಭ ನಡೆಸಬೇಕೆಂದಾಗ ಚುನಾವಣಾ ನೀತಿ ಸಂಹಿತೆ ಜಾರಿಯಾಯ್ತು,ಆದರೆ ತಾವು ಅನುದಾನ ತಂದಿದ್ದರೆ ಜನರಿಗೆ ತಿಳಿಸಲಿ,ಸಿದ್ದರಾಮಯ್ಯನವರ ಭಾಗ್ಯಗಳ ಕಾರಣಕ್ಕೆ ತಾವು ಶಾಸಕರಾಗಿದ್ದೀರಿ,ಆರೋಪ ಮಾಡುವುದನ್ನು ಬಿಟ್ಟು ಅಭೀವೃಧ್ಧಿ ಮಾಡಿ ತೋರಿಸಿ,ಸೋತಿರುವ ನನ್ನ ಬಗ್ಗೆ ಮಾತನಾಡುತ್ತಿದ್ದರೆ ನಿಮ್ಮ ಘನತೆಯೆ ಕಡಿಮೆಯಾಗಲಿದೆ ಎಂದರು.

ಅಲ್ಲದೆ ಬೇರೆಯವರು ಹೇಳುವಂತೆ ಸಿದ್ದರಾಮಯನ್ನವರ ಬಳಿ ಹೋದಾಗ ಹಿಂದಿನ ಶಾಸಕ ಪಾಪಾ ತಂದಿರುವ ಅನುದಾನ ಇದೆ ಎಂದು ತಾವೇ ಪಾಪ ಎಂದಿದ್ದಾರೆ ಎನ್ನುವುದು ಕೇಳಿದ್ದೇನೆ ಎಂದರು.

ಕೊಳಗೇರಿ ಅಭಿವೃಧ್ಧಿ ನಿಗಮದ ಮನೆಗಳ ನಿರ್ಮಾಣದ ಕುರಿತು ಮಾತನಾಡಿ,ನಾನು ಶಾಸಕನಾಗಿದ್ದಾಗ 500 ಮನೆಗಳನ್ನು ತಂದಿರುವೆ,ಅವುಗಳಲ್ಲಿ ಎರಡು ನೂರು ಮನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ,ಆದರೆ ನಿಯಮ ಬದ್ಧವಾಗಿ ಕಾಗದ ಪತ್ರಗಳನ್ನು ಫಲಾನುಭವಿಗಳು ನೀಡದೆ ಇನ್ನೂ 300 ಮನೆಗಳು ಹಾಗೇ ಇವೆ,ಅವುಗಳನ್ನು ಅಗತ್ಯವಿರುವವರಿಗೆ ನೀಡಲಿ,ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

ಅಲ್ಲದೆ ರೈತರಿಗೆ ಮೊದಲ ಬೆಳೆಗೆ ನೀರು ಕೊಡಲು ವಾರಾಬಂದಿ ಮಾಡುತ್ತಿದ್ದಾರೆ,ನಾನು ಶಾಸಕನಾಗಿದ್ದಾಗ ಎಂದೂ ಮೊದಲ ಬೆಳೆಗೆ ವಾರಬಂದಿ ಮಾಡಲು ಬಿಟ್ಟಿಲ್ಲ,ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿದೆ,ಆದರೆ ಬಾಗಲಕೋಟೆ ಭಾಗದ ಸಚಿವರು ತಮ್ಮ ಸಕ್ಕರೆ ಪ್ಯಾಕ್ಟರಿಗಳಿಗಾಗಿ ನೀರು ಇಲ್ಲ ಎನ್ನುತ್ತಾರೆ,ಆದರೆ ನಮ್ಮ ಯಾದಗಿರಿ,ರಾಯಚೂರು,ಕಲಬುರ್ಗಿ ಜಿಲ್ಲೆಯ ಶಾಸಕರು ಬಾಯಿ ಮುಚ್ಚಿಕೊಂಡಿರುವುದು ಸರಿಯಲ್ಲ ರೈತರಿಗೆ ವಾರಬಂದಿ ಇಲ್ಲದೆ ನೀರು ಕೊಡಿಸಬೇಕು ಎಂದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

3 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

13 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

15 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

37 mins ago