ಸೇಡಂ: ಪಂಚಲಿಂಗೇಶ್ವರ ದೇವಾಲಯದಲ್ಲಿ ಅ.23 ರಂದು ರಾತ್ರಿ 8 ರಿಂದ ನಡೆದ ಶ್ರೀ ಲಕ್ಷ್ಮೀ ಟ್ರಾನ್ಸಪೋರ್ಟ ಪ್ರಾಯೋಜಕತ್ವದ `ವಾಯ್ಸ್ ಆಫ್ ಸೇಡಂ’ ಆಗಿ ಸುನೀಲ ಮುಗಟಿ ಆಯ್ಕೆಯಾದರು. ಅವರಿಗೆ ಗ್ಯಾಸ್ ಒಲಿ ಬಹುಮಾನವಾಗಿ ನೀಡಿ ಗೌರವಿಸಲಾಯಿತು. ಮೊದಲ ಬಹುಮಾನವನ್ನು ಪ್ರಶಾಂತ ರುದ್ನೂರು (ಮಿಕ್ಸರ್), ಭವಾನಿ ಕೇಶ್ವರ ಎರಡು (ರೋಟಿ ಮೇಕರ್) ಮತ್ತೂ ಆದ್ಯ ಅಗಸ್ತೀರ್ಥ ಮೂರನೇ (ಡಿನ್ನರ್ ಸೆಟ್) ಬಹುಮಾನ ಪಡೆದುಕೊಂಡರು. ಉಳಿದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಸುಮಾರು 14 ಜನ ಸ್ಪರ್ಧಿಗಳಿದ್ದರು. ಭಕ್ತಿಗೀತೆ, ಸಿನಿಮಾ ಮತ್ತು ಜನಪದ ಗೀತೆಗಳ ಮೂರು ಸುತ್ತುಗಳಿದ್ದವು. ವೀರೇಂದ್ರ ಭಂಟನಳ್ಳಿ, ಗಂಗಾಧರ ಕುಲಕರ್ಣಿ, ಹಣಮಂತ ಬಿಬ್ಬಳ್ಳಿ, ರಮೇಶ ಮಾಲಪಾಣಿ ನಿರ್ಣಾಯಕರಾಗಿದ್ದರು. ಕಾರ್ಯಕ್ರಮವನ್ನು ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು.

ಸೇಡಂ; ಶ್ರೀ ಪಂಚಲಿಂಗೇಶ್ವರ ದೇವಾಲಯದ 42 ನೇ ವರ್ಷದ ದಸರಾ ಉತ್ಸವವು ಮಂಗಳವಾರ ಸಂಜೆ ಸಾಮೂಹಿಕ ಸೀಮೋಲ್ಲಂಘನ ಕಾರ್ಯಕ್ರಮದ ಮೂಲಕ ದಸರಾ ಹಬ್ಬ ಆಚರಿಸಲಾಯಿತು.

ದೇವಾಲಯದಿಂದ ಜಗನ್ಮಾತೆ ಅಂಬಾಭವಾನಿಯ ಭಾವಚಿತ್ರದ ಮೆರವಣಿಗೆಯು ಚಾವಡಿ, ರೇವಣಸಿದ್ದೇಶ್ವರ ದೇವಾಲಯ, ಹಳೆ ಸಿನಿಮಾ ರಸ್ತೆ, ಚೌರಸ್ತಾ, ಅಗ್ಗಿ ಕಟ್ಟಾ, ರಥಬೀದಿ ನಂತರ ಶ್ರೀ ಕೊತ್ತಲ ಬಸವೇಶ್ವರ ದೇವಾಲದಯಲ್ಲಿರುವ ಬನ್ನಿ ಮಂಟಪದಲ್ಲಿ ಸಾವಿರಾರು ಮಂದಿ ಜಮಾವಣೆಗೊಂಡು, ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು.

ಪೂಜ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಶ್ರೀ ಸದಾಶಿವ ಸ್ವಾಮಿಗಳು, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ.ಬಸವರಾಜ ಪಾಟೀಲ ಸೇಡಂ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶ್ರೀ ಪಂಚಲಿಂಗೇಶ್ವರ ದೇವಾ ಲಯದ ಸೇಡಂ ದಸರಾ ಉತ್ಸವ ಸಮಿತಿಯ ದತ್ತಾತ್ರೇಯ ಐನಾಪುರ, ನಾಗೇಶ್ವರರಾವ ಮಾಲಿಪಾಟೀಲ, ಶಿವಶರಣರೆಡ್ಡಿ ಪಾಟೀಲ, ಸುಧಾಕರ ಕುಲಕರ್ಣಿ, ಸಂತೋಷ ಕುಲಕರ್ಣಿ, ಶಂಕರ ಬೋಳದ, ಜನಾರ್ಧನರೆಡ್ಡಿ ತುಳೇರ ಅನೇಕರು ಇದ್ದರು.

ದೇವಾಲಯ ಮಂಡಳಿಯ ಪ್ರಮುಖರಾದ ಅನಂತರೆಡ್ಡಿ ಪಾಟೀಲ, ಸುಧಾಕರ ಕುಲಕರ್ಣಿ, ಸಂತೋಷ ಕುಲಕರ್ಣಿ, ರಾಘವೇಂದ್ರರೆಡ್ಡಿ ಅಗನೂರ, ಶಂಕರ ಬೋಳದ ಬಹುಮಾನಗಳನ್ನು ವಿತರಿಸಿದರು.

emedialine

Recent Posts

ವಾಡಿ: ಬಿಜೆಪಿ ಕಚೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 114ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಣೆ ಮಾಡಿದರು.…

41 mins ago

ಸಾಮಾಜಿಕ ನ್ಯಾಯದ ಹೆಸರ್ಹೇಳೀ ಅಧಿಕಾರಕ್ಕೆ ಬಂದ ಸರ್ಕಾರದಿಂದಲೇ ಮೋಸ

ವಾಡಿ: ಸಾಮಾಜಿಕ ನ್ಯಾಯದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸಹ ಮತ ಹಾಕಿದ ನಮ್ಮನ್ನೇ ನಿರಂತರವಾಗಿ ಮೋಸ ಮಾಡುತ್ತಿರುವುದು…

60 mins ago

ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾಶಾಖೆಯಿಂದ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಫಾರ್ಮಸಿಸ್ಟ್…

1 hour ago

ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಜಾಲನೆ

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು…

1 hour ago

ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ…

1 hour ago

SSLC/PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ರಾಮಮಂದಿರ ಹಿಂದುಗಡೆ ಇರುವ ಸಮಾಜ ಭವನದಲ್ಲಿ ಶ್ರೀ ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ  ವತಿಯಿಂದ ಎಸ್‍ಎಸ್‍ಎಲ್‍ಸಿ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420