ಮತದಾರರ ಪಟ್ಟಿ ಸರಿಪಡಿಸಲು ಪುರಸಭೆ ಅಧಿಕಾರಿಗಳಿಗೆ ಮನವಿ

0
48

ವಾಡಿ; ಪಟ್ಟಣದಲ್ಲಿನ ದೋಷಪೂರಿತ ಮತದಾರರ ಪಟ್ಟಿ ಸರಿಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.

ಪಟ್ಟಣದಲ್ಲಿನ 23 ವಾರ್ಡಗಳ ಮತದಾರರ ಪಟ್ಟಿ ಪರಿಶೀಲಿಸಿದಾಗ ವಾರ್ಡ್ ನಂ 04 ರಲ್ಲಿನ (ಭಾಗ 04 ). ಕ್ರಮ ಸಂಖ್ಯೆ 1574 ರಿಂದ 1663 ವರೆಗೆ ವಾರ್ಡ್ ನಂ 21ರಲ್ಲಿ ವಾಸಿಸುವವರಾಗಿದ್ದಾರೆ.  ಅದೇ ರೀತಿ 23ವಾರ್ಡ ನ ಇಂದಿರಾನಗರದಲ್ಲಿ ಬಹುತೇಕ ವಿಜಯನಗರದ ವಾರ್ಡ್ ನಂ 22ರಲ್ಲಿನ ನಿವಾಸಿಗಳು ಸೇರ್ಪಡೆ ಯಾಗಿರುವುದು.

Contact Your\'s Advertisement; 9902492681

ವಾರ್ಡ್ ನಂ 06,07,08,09,10,13,14 ರಲ್ಲಿ ಬಹಳಷ್ಟು ಮತದಾರರ ಹೆಸರು ಕೈಬಿಟ್ಟು ಒಂದಕ್ಕಿಂತ ಹೆಚ್ಚು ಹೆಸರು ಹೊಂದಿರುವ ಹಾಗೂ ಮರಣ ಹೊಂದಿರಿವವರ ಹೆಸರು ಡೀಲಿಟ್ ಮಾಡದೆ ಇರುವುದು, ವಾರ್ಡ್ ನಂ 20ರಲ್ಲಿನ ಮತದಾರರ ಹೆಸರು ವಾರ್ಡ್ ನಂ 08 ರಲ್ಲಿನವರಾಗಿರುವುದು ಈ ರೀತಿಯ ಅನೇಕ ದೋಷಗಳು ವಾರ್ಡ್ ಗಳ ಮತದಾರರ ಪಟ್ಟಿಯಲ್ಲಿ ಇರುವುದರಿಂದ ಆದಷ್ಟು ಬೇಗ ಇನ್ನೊಮ್ಮೆ ಪರಿಶೀಲಿಸಿ ಸರಿಪಡಿಸಿ ಎಂದು ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಪುರಸಭೆ ಮಾಜಿ ಸದಸ್ಯ ರವಿ ನಾಯಕ ಮುಖ್ಯಾಧಿಕಾರಿ ಫಕ್ರುದ್ದಿನ ಅವರಿಗೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here