ಕಲಬುರಗಿ: ಆಂದೋಲಾ ಗ್ರಾಮದಲ್ಲಿ ಶ್ರೀರಾಮ ಚಂದ್ರನ ಹಾಗೂ ಹಣಮಂತನ ಮತ್ತು ಹಿಂದು ಮುಖಂಡರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಇವರ ಭಾವಚಿತ್ರಗಳಿಗೆ ಸಗಣಿ ಬಳೆದು ಅವಮಾನ ಮಾಡಿದಕ್ಕೆ ರಾಮ್ ಸೇನಾ ಕಲ್ಯಾಣ ಕರ್ನಾಟಕ ವಿ. ಘಟಕದ ಅಧ್ಯಕ್ಷ ಮಹೇಶ ಕೆಂಬಾವಿ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ಭವನದ ಎದುರುಗಡೆ ಪ್ರತಿಭಟನೆ ನಡೆಸಿ ಎಸ್‍ಪಿ ಅವರಿಗೆ ಮನವಿ ಸಲ್ಲಿಸಿದರು.
ಹಿಂದೂ ಸಂಘಟನೆ ನಾಮಫಲಕ ಶ್ರೀರಾಮ ಚಂದ್ರ ಹಾಗೂ ಹಣಮಂತನ ಮತ್ತು ಹಿಂದು ಮುಖಂಡರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಜಿ ಹಾಗೂ ಪ್ರಮೋದ ಮುತಾಲಕ ಹಾಗೂ ಇನ್ನೂ ಅನೇಕ ಮುಖಂಡರ ಇವರ ಭಾವಚಿತ್ರಗಳಿಗೆ ಸಗಣಿ ಬಳೆದು ಅವಮಾನ ಮಾಡಿರುತ್ತಾರೆ. ಇದರಿಂದ ಹಿಂದೂ ಬಾಂಧವರ ಭಾವನೆಗಳಿಗೆ ಧಕ್ಕೆವುಂಟು ಮಾಡುವ ಹಾಗೂ ಸಮಾಜದಲ್ಲಿ ಅಶಾಂತಿ ತಗಲುವ ಹಿಂದು ವಿರೋಧಿ ಕೃತ್ಯ ವಸಗಿದ ಆರೋಪಿಗಳ ಕುಲಂಕುಶ ತನಿಖೆ ನಡೆಸಿ ದುಷ್ಕರ್ಮಿಗಳಿಗೆ ಮುಂದಿನ 48 ಗಂಟೆಯೊಳಗೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ 48 ಗಂಟೆಗಳಲ್ಲಿ ಪೆÇೀಲಿಸ್ ಇಲಾಖೆ ವಿಫಲವಾಗಿದ್ದೆ ಆದರೆ, ಜೇವರ್ಗಿ ಬಂದ ಮಾಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ ತಾಲೂಕ ಅಧ್ಯಕ್ಷ ವೀರೇಶ ಪಾಟೀಲ, ಕಲಬುರಗಿ ಜಿಲ್ಲಾಧ್ಯಕ್ಷ ಗುಂಡು ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ರಾಕೇಶ ಜಮಾದಾರ, ಮಹಾದೇವ, ರಮೇಶ ದೇಸಾಯಿ, ಅಕಿಲೇಶ ಒಡೇಯರ್, ಮಂಜುನಾಥ ಪಡಶೇಟ್ಟಿ, ಶೀವುಕುಮಾರ ಹಾಗರಗಿ ಇದ್ದರು.